ದಕ್ಷಿಣ ಕನ್ನಡ

ಮಾತಾಪಿತರನ್ನು ಕಡೆಗಣಿಸಿದರೆ ಭಗವಂತನ ಕೊಂಡಿ ಕಳೆದುಕೊಂಡಂತೆ: ರಾಘವೇಶ್ವರಶ್ರೀ

Published On :

ವಿಟ್ಲ: ಕಣ್ಣಿಗೆ ಕಾಣುವ ದೇವರಾದ ಮಾತಾಪಿತರನ್ನು ಕಡೆಗಣಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ ಅದು ಭಗವಂತನ ಕೊಂಡಿ ಕಳೆದುಕೊಂಡಂತೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ 20ನೇ ಚಾತುರ್ಮಾಸ್ಯದ ಸಂದರ್ಭ ರವಿವಾರ ಜನಭವನದಲ್ಲಿ ಕನ್ಯಾ ಸಮಾವೇಶವನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ದಾರಿ ತಪ್ಪದಿರಿ, ಮೇರೆಯನ್ನು ಮೀರದಿರಿ. ಹೊರಗಿನ ಆಕರ್ಷಣೆಗೆ ಒಳಗಾಗದಿರಿ. ಶುಭಾಚರಣೆ, ಭಗವಂತ, ಸತ್ಯ, ದೇಶಪ್ರೇಮ, ಓದಿನತ್ತ ಆಕರ್ಷಣೆಯಿರಲಿ. ಶ್ರೀರಾಮಸೀತೆಯರ ಆದರ್ಶ ಜೀವನ ನಡೆಸಿರಿ. ಮಠ ಸಂಸ್ಕೃತಿಯ ಧಾಮ. ಆರಾಧನಾ ಕೇಂದ್ರ. ಅಲ್ಲಿಗೆ ಬನ್ನಿ. ಇದು ಕೆಟ್ಟ ಆಕರ್ಷಣೆಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಖಿನ್ನತೆಯಿಂದ ದೂರವಿರಲು ಸಾಧ್ಯವಾಗುತ್ತದೆ. ಹೊರ ದೇಶದ ಸಂಸ್ಕೃತಿಯನ್ನು ಬಿಟ್ಟು ಭಾರತೀಯ ಸಂಸ್ಕೃತಿಯ ಕಡೆ ಗಮನ ಕೊಡಿ. ಕಮಲದ ಮೊಗ್ಗುಗಳು ಅರಳುವಂತೆ ಜೀವನವಿಡೀ ಸಂಭ್ರಮದಿಂದಿರಿ ಎಂದು ಉಪದೇಶಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸುಧಾ ಹೆಗಡೆ, ಸತ್ಯ ನಾರಾಯಣ ಶರ್ಮ, ಶ್ಯಾಮಪ್ರಸಾದ್, ರಶ್ಮಿ ಅವರು ಕನ್ಯೆಯರಿಗೆ ಮಾಹಿತಿ ನೀಡಿದರು. ವಿದ್ವಾನ್ ಜಗದೀಶ ಶರ್ಮಾ, ಪ್ರಮೋದ್ ಪಂಡಿತ್, ಮಹಾಮಂಡಲ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ, ಈಶ್ವರಿ ಭಟ್ ಸೇರ್ಕಡವು, ರಾಘವೇಂದ್ರ ಮಧ್ಯಸ್ಥ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶ್ರೀದೇವಿ ವಿಶ್ವನಾಥ ಭಟ್ ಕಾನಾವು ಸಂವಾದ ನಡೆಸಿಕೊಟ್ಟರು. ಸತ್ಯಶಂಕರ ಹಿಳ್ಳೇಮನೆ ಕಾರ್ಯಕ್ರಮ ನಿರ್ವಹಿಸಿದರು. 789 ಕನ್ಯೆಯರು ಹಾಗೂ ಅವರ ಮಾತಾಪಿತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.