ದಕ್ಷಿಣ ಕನ್ನಡ

ಗೋಹತ್ಯೆ ಕಡಿವಾಣ ಹಾಕದಿದ್ದರೆ ಸೇನೆಯಿಂದ ಪ್ರತ್ಯುತ್ತರ

Published On :

ಸುಬ್ರಹ್ಮಣ್ಯ: ಗೋಹತ್ಯೆ ನಿಷೇಧ ಕಾನೂನನ್ನು ಯಾವುದೇ ಸರ್ಕಾರ ಜಾರಿಗೆ ತರುತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಗೋಹತ್ಯೆ ರಾಜ್ಯದಲ್ಲಿ ತೀವ್ರಗೊಂಡಿದ್ದು ದ.ಕ. ಜಿಲ್ಲೆಯಲ್ಲಿ ಗೋ ಕಳ್ಳರು ಮನೆ, ತೋಟಗಳಿಂದ ಕತ್ತಿ ಹಿಡಿದು ಗೋವುಗಳನ್ನು ಕದ್ದೊಯ್ಯುತ್ತಿದ್ದಾರೆ.  ಮಾರಣಾಂತಿಕವಾಗಿ ಹತ್ಯೆಗೈಯ್ಯುತ್ತಿರುವುದಕ್ಕೆ ಪ್ರತ್ಯುತ್ತರವಾಗಿ ಸೇನೆ ಕೂಡ ಆಯುಧದಲ್ಲಿ ಉತ್ತರ ಕೊಡಲಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಸೋಮವಾರ ಭೇಟಿ ನೀಡಿ ಆಶ್ಲೇಷ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ದೇಶಕ್ಕೆ ಶುದ್ಧ, ಪ್ರಾಮಾಣಿಕ, ರಾಷ್ಟ್ರೀಯವಾದಿ ಮೋದಿಯಂತಹ ನಾಯಕತ್ವದ ಅಗತ್ಯತೆ ಇದೆ. ಮೋದಿ ಒಬ್ಬ ಪರಿವರ್ತನೆಯ ವ್ಯಕ್ತಿ. ಹಾಗಾಗಿ ಮೋದಿಗೆ ಬೆಂಬಲಕ್ಕೆ ಶ್ರೀರಾಮ ಸೇನೆ ನಿಲ್ಲಲಿದೆ ಎಂದರು.
ಸ್ಪರ್ಧೆ ಖಚಿತ: ರಾಜಕೀಯ ಶಕ್ತಿ ಇಂದಿನ ವಿದ್ಯಮಾನಗಳಲ್ಲಿ ಅನಿವಾರ್ಯ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನಮ್ಮ ಭಾರತೀಯ ಸಂಸ್ಕೃತಿಯ ಆಚರಣೆಗಳನ್ನು ಅನುಷ್ಟಾನಕ್ಕೆ ತರಲು ಸಮರ್ಥ ನಾಯಕತ್ವಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ನಾಲ್ಕೈದು ಕಡೆಗಳಿಂದ ಸ್ಪರ್ಧಿಸಲಿದ್ದು ಕ್ಷೇತ್ರದ ಬಗ್ಗೆ ಅವಲೋಕನ, ಚಿಂತನೆ, ಚರ್ಚೆ, ನಿರ್ಣಯ ಆಗುತ್ತಾ ಇದೆ ಎಂದು ಮುತಾಲಿಕ್ ತಿಳಿಸಿದರು.
 ದ.ಕ. ಪ್ರಾಂತ ಅಧ್ಯಕ್ಷ ಮಹೇಶ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಕುಮಾರ್ ಪಾಲೆಮಾರ್ ಮಂಗಳೂರು, ಯತೀಶ್ ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.