ಸೆ.3ರಂದು ಕನ್ಯಾಡಿ ಗುರುದೇವ ಮಠದಲ್ಲಿ ಬ್ರಹ್ಮಾನಂದಶ್ರೀಗಳ ಪಟ್ಟಾಭಿಷೇಕ ವರ್ಧಂತಿ
ಬೆಳ್ತಂಗಡಿ: ಕನ್ಯಾಡಿ ಶ್ರೀ ಗುರುದೇವ ಮಠದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ ನಾಲ್ಕನೇ ಪಟ್ಟಾಭಿಷೇಕ ವರ್ಧಂತಿ ಸೆ.3 ರಂದು ಶ್ರೀರಾಮ ಕ್ಷೇತ್ರದಲ್ಲಿ ನಡೆಯಲಿದೆ.
ಈ ಬಗ್ಗೆ ಮಠಾಧೀಶ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು. ಅದೇ ದಿನ ಆಗಮ ಪ್ರವೀಣ ಬೆಂಗಳೂರಿನ ಶ್ರೀ ಲಕ್ಷ್ಮೀಪತಿ ಗೋಪಾಲಾಚಾರ್ಯ ಅವರಿಂದ ಶ್ರೀ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ.
ಶ್ರೀ ಆತ್ಮಾನಂದ ಸರಸ್ವತೀ ಸ್ವಾಮೀಜಿಯವರ ನವಮಠ ಸ್ಥಾಪನೆಯ ಕನಸು ನನಸು ಮಾಡಲು ಪ್ರಯತ್ನಿಸಲಾಗುವುದು. ಈ ವರ್ಷ ಮೂರು ವರ್ಷಗಳ ವೇದಾಧ್ಯಯನ ತರಗತಿ ಮುಕ್ತಾಯವಾಗಲಿದ್ದು ಮುಂದಿನ ವರ್ಷದಿಂದ ಹೊಸ ತರಗತಿಗಳು ಆರಂಭವಾಗಲಿವೆ. ಯಜುರ್ವೇದಾಧ್ಯಯನ, ಜ್ಯೋತಿಷ, ವಾಸ್ತು ತರಗತಿಗಳು ಗುರುಕುಲ ಮಾದರಿಯಲ್ಲಿ ನಡೆಯುತ್ತಿವೆ ಎಂದರು. ಪ್ರಸ್ತುತ 300 ಮಕ್ಕಳಿಗೆ ವಾರ್ಷಿಕ ರು. 45 ಲಕ್ಷ ವೆಚ್ಚದಲ್ಲಿ ಗುರುಕುಲ ಮಾದರಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ದಿನ ಅನ್ನದಾಸೋಹ ನಡೆಯುತ್ತಿದೆ ಎಂದರು.
ಸೆ.3 ರಂದು ನಡೆಯುವ ವರ್ಧಂತಿ ಕಾರ್ಯಕ್ರಮದಲ್ಲಿ ಕೊಲ್ಯ ಶ್ರೀ ರಾಜಯೋಗಿ ರಮಾನಂದ ಸ್ವಾಮೀಜಿ, ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ಜಿ.ಪಿ. ನಾರಾಯಣ ಸ್ವಾಮಿ, ಸಂಸದ ನಳೀನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಶಾಸಕರಾದ ಮಧು ಬಂಗಾರಪ್ಪ, ಸುನಿಲ್ ಕುಮಾರ್, ಗೋಪಾಲ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಶಿವಾನಂದ ನಾಯ್ಕ, ಬಂಟ್ವಾಳದ ಉಪನ್ಯಾಸಕ ತುಕಾರಾಮ ಪೂಜಾರಿ ಉಪಸ್ಥಿತರಿರುತ್ತಾರೆ.
ಗೋಷ್ಠಿಯಲ್ಲಿ ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ, ಮೋಹನ್ ಉಜ್ಜೋಡಿ, ಗುರುನಾರಾಯಣ ಸಂಘದ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಮಾಜಿ ಅಧ್ಯಕ್ಷ ವಸಂತ ಸಾಲಿಯಾನ್, ಜಿ.ಪಂ. ಸದಸ್ಯ ಶೈಲೇಶ್ ಕುಮಾರ್, ಯುವ ಬಿಲ್ಲವ ಸಂಘದ ಅಧ್ಯಕ್ಷ ವಸಂತ ಪುದುವೆಟ್ಟು, ಟ್ರಸ್ಟಿ ತುಕಾರಾಮ ಸಾಲಿಯಾನ್, ಕೃಷ್ಣಪ್ಪ ಗುಡಿಗಾರ್ ಕಲ್ಮಂಜ, ಸೂರ್ಯಪ್ರಕಾಶ್ ಧರ್ಮಸ್ಥಳ, ಪ್ರಭಾಕರ ಪೂಜಾರಿ ಧರ್ಮಸ್ಥಳ, ಮಹಿಳಾ ಬಿಲ್ಲವ ವೇದಿಕೆಯ ಪ್ರೇಮಾ ಉಮೇಶ್, ಸುಜಾತಾ ಅಣ್ಣೀ ಪೂಜಾರಿ, ಜಯರಾಮ ಬಂಗೇರ, ರವೀಂದ್ರ ಪೂಜಾರಿ ಆರ್ಲ, ಅಣ್ಣಿ ಪೂಜಾರಿ, ಮುಕುಂದ ಸುವರ್ಣ, ಚರಣ್ ಕುಮಾರ್, ಸಂತೋಷ್ ಸಾಲಿಯಾನ್ ಪಿಜಿನಡ್ಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

