ಕೇರಳ ಮಾಜಿ ಸಿಎಂ ಶಂಕರ್ ಪ್ರತಿಮೆ ಸಾಗಾಟಕ್ಕೆ ಚಾಲನೆ
ಮಂಗಳೂರು: ಸೆಪ್ಟೆಂಬರ್ನಲ್ಲಿ ಕೇರಳದಲ್ಲಿ ಅನಾವಣಗೊಳ್ಳಲಿರುವ ಕೇರಳದ ಮಾಜಿ ಮುಖ್ಯಮಂತ್ರಿ , ಕಾಂಗ್ರೆಸ್ ಮುಖಂಡ ದಿ.ಆರ್.ಶಂಕರ್ರ ಕಂಚಿನ ಪುತ್ಥಳಿ ಸಾಗಾಟಕ್ಕೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಭಾನುವಾರ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಭ್ರಷ್ಟಾಚಾರ ಬದಿಗಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಜನಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದ ಅವರು, ಮಾಜಿ ಸಿ.ಎಂ. ಶಂಕರ್ ತತ್ವಾದರ್ಶ, ಕಳಕಳಿಯನ್ನು ಮೈಗೂಡಿಸಿಕೊಳ್ಳಬೇಕು. ಶಂಕರ್ರ ಆಡಳಿತ ಇಡೀ ರಾಷ್ಟ್ರಕ್ಕೆ ಮಾದರಿಯಾಗಿತ್ತು. ನಾರಾಯಣಗುರುಗಳ ತತ್ವವನ್ನು ಜಗತ್ತಿಗೇ ಪಸರಿಸಿದವರು ಶಂಕರ್. ಪ್ರಸ್ತುತ ಲೋಕಸಭೆಯಲ್ಲಿ ಗದ್ದಲವೇ ತುಂಬುತ್ತಿದ್ದು, ಆದರ್ಶ ಮರೆತಿದ್ದಾರೆ. ಹಾಗಾಗಿ ಸಂಸದರನ್ನು ಹೊರಹಾಕಬೇಕಾಗುತ್ತದೆ. ದೇಶಕ್ಕಾಗಿ ರಾಜಕಾರಣಿಗಳು ಸತ್ಯ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.
ಕೇರಳ ಸುವರ್ಣ ಯುಗ: ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಚೆನ್ನಿತ್ತಲ ಮಾತನಾಡಿ, ವೃದ್ಧಾಪ್ಯ ವೇತನ, ಶಾಲಾ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ಪ್ರಥಮ ಯೋಜನೆಗಳನ್ನು ಜಾರಿಗೆ ತಂದವರು ಶಂಕರ್. ಅಸ್ಪೃಶ್ಯತೆ, ಅಸಮಾನತೆ, ಶೋಷಣೆ ವಿರುದ್ಧದ ನಾರಾಯಣಗುರುಗಳ ಆದರ್ಶ ಸಾರಿ ಹೇಳಿದ ಶಂಕರ್ ಆಡಳಿತಾವಧಿ ಸುವರ್ಣ ಯುಗವಾಗಿತ್ತು ಎಂದರು.
ತರಬೇತಿ ಶಾಲೆ: ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಮಾತನಾಡಿ, ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಹೋರಾಟದ ಜತೆ ರಕ್ಷಣೆಯ ಕಾಳಜಿ ಇದೆ. ಕೇರಳದಲ್ಲಿ ದೇಶದಲ್ಲೇ ಪ್ರಥಮವಾಗಿ ರಾಜೀವ್ಗಾಂಧಿ ತರಬೇತಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಅರಣ್ಯ ಸಚಿವ ರಮಾನಾಥ ರೈ, ಕೇರಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರತ್ಚಂದ್ರ ಪ್ರಸಾದ್, ಕಾಸರಗೋಡು ಜಿಲ್ಲಾಧ್ಯಕ್ಷ ಶ್ರೀಧರ್, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ, ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಇಬ್ರಾಹಿಂ ಕೋಡಿಜಾಲು, ಶಿವಗಿರಿಯ ಹೇಮಾನಂದ ಸ್ವಾಮೀಜಿ, ಮುಖಂಡರಾದ ಐವನ್ ಡಿ'
ಸೋಜ, ಮಸೂದ್, ವಿಜಯ ಕುಮಾರ್ ಶೆಟ್ಟಿ, ದೇವಸ್ಥಾನ ಮೊಕ್ತೇಸರ ಸಾಯಿರಾಮ್, ಸುಬ್ಬಣ್ಣ ರೈ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

