ಪುತ್ತೂರು: ಕಾರಂತ ಬಾಲವನ ವೆಬ್‌ಸೈಟ್ ಉದ್ಘಾಟನೆ
ಪುತ್ತೂರು: ಇಲ್ಲಿನ ಡಾ.ಕೆ. ಶಿವರಾಮ ಕಾರಂತ ಬಾಲವನವನ್ನು ವಿಶ್ವವ್ಯಾಪಿಗೊಳಿಸುವ ನಿಟ್ಟಿನಲ್ಲಿ ಬಾಲವನ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ರೂಪಿಸಲಾದ ಅಂತರ್ಜಾಲ ವೆಬ್‌ಸೈಟ್ 'ಕಾರಂತಬಾಲವನ.ಕಾಮ್' ಉದ್ಘಾಟನೆ ಬಾಲವನದಲ್ಲಿ ನಡೆಯಿತು.
ದ.ಕ. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ವೆಬ್‌ಸೈಟ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಹಾಗೂ ಬಾಲವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್. ಪ್ರಸನ್ನ, ಬಾಲವನಕ್ಕೆ ಸಾಹಿತ್ಯಾಸಕ್ತರಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗುವುದು ಎಂದರು. ವೆಬ್‌ಸೈಟ್ ಅಭಿವೃದ್ಧಿಪಡಿಸಿದ ಆದರ್ಶ, ಆರ್ಪಿಟೆಕ್‌ನ ರಾಮಚಂದ್ರ, ಪ್ರವೀಣ್ ಮುಂಡೋಡಿ ಅವರನ್ನು ಅಭಿನಂದಿಸಿದರು.
ವಲಯ ಅರಣ್ಯಾಧಿಕಾರಿ ಶ್ರೀಧರ್, ಚಿತ್ರಕಲಾವಿದ ಹರಿಶ್ಚಂದ್ರ ಶೆಟ್ಟಿ, ತಹಸೀಲ್ದಾರ್ ಕುಳ್ಳೇಗೌಡ, ಪುರಸಭೆ ಮುಖ್ಯಾಧಿಕಾರಿ ಸುಧಾಕರ್ ಇದ್ದರು. ಬಾಲವನ ಚಟುವಟಿಕೆಗಳ ಸಂಯೋಜಕರಾದ ಡಾ. ಗಣೇಶ್ ಚಿಕ್ಕಮಗಳೂರು, ಚಂದ್ರ ಸೌಗಂಧಿಕ, ಮೋಹನ್ ಸೋನ, ಅಶೋಕ್ ಸಹಕರಿಸಿದರು. ಬಾಲವನ ಅಭಿವೃದ್ಧಿ ಸಮಿತಿಯ ಎಸ್.ಕೆ ಆನಂದ್ ಸ್ವಾಗತಿಸಿದರು, ಪ್ರೊ.ಬಿ.ಜೆ ಸುವರ್ಣ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

