ದಕ್ಷಿಣ ಕನ್ನಡ

ರಾಜ್ಯದಲ್ಲಿ ಏಷ್ಯನ್ ಪವರ್ ಲಿಫ್ಟಿಂಗ್ ನಡೆಸುವ ಅಭಿಲಾಷೆ: ಸುಪ್ರತಾ ದತ್ ಇಂಗಿತ

Published On :

ಮಂಗಳೂರು: 2014ರಲ್ಲಿ ನಡೆಯುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಭಾರತದಲ್ಲೇ ನಡೆಸಲು ತೀರ್ಮಾನವಾಗಿದ್ದು, ಉತ್ತಮ ಸೌಕರ್ಯ ಲಭಿಸಿದರೆ ಕರ್ನಾಟಕದಲ್ಲಿ ನಡೆಸುವ ಅಭಿಲಾಷೆಯಿದೆ ಎಂದು ಏಷ್ಯನ್ ಪವರ್ ಲಿಫ್ಟಿಂಗ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಸುಪ್ರತಾ ದತ್ತ್ ಹೇಳಿದರು.
 ಸೋಮವಾರ ಪುರಭವನದಲ್ಲಿ ನಡೆದ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಏಷ್ಯನ್ ಚಾಂಪಿಯನ್‌ಶಿಪ್ ನಡೆಸಲು ಕೇರಳ, ಛತೀಸ್‌ಗಢ, ಕರ್ನಾಟಕ ಆಯ್ಕೆಯಾಗಿದೆ. 300 ಸ್ಪರ್ಧಾಳುಗಳಿದ್ದು, ಇವರಿಗೆ ಪೂರಕವಾದ ಮೂಲ ಸೌಕರ್ಯಗಳು ಕರ್ನಾಟಕದಲ್ಲಿ ದೊರಕಿದರೆ ಇಲ್ಲಿಯೇ ನಡೆಸುವ ಉದ್ದೇಶವಿದೆ ಎಂದರು.
 ಮಂಗಳೂರಿಗೆ ಇದು ತನ್ನ 5ನೇ ಭೇಟಿಯಾಗಿದ್ದು, ಪಂದ್ಯಾವಳಿಯಲ್ಲಿ ದೊರಕಿದ ಸೌಕರ್ಯಗಳು ಉತ್ತಮವಾಗಿತ್ತು. ಪಂದ್ಯಾವಳಿ ನಡೆಸಲು ಉತ್ತಮ ಪ್ರಾಯೋಜಕತ್ವ ಸಿಕ್ಕಿದೆ. 10 ವರ್ಷಕ್ಕೊಮ್ಮೆ ಪವರ್‌ಚಾಂಪಿಯನ್‌ಶಿಪ್ ನಡೆಸುವುದಕ್ಕಿಂತ 5 ವರ್ಷಕ್ಕೊಂದು ಬಾರಿ ನಡೆದರೆ ಉತ್ತಮ ಎಂದರು.
 ಇದೇ ಸಂದರ್ಭ ಕರ್ನಾಟಕ ಪವರ್ ಲಿಫ್ಟಿಂಗ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಅವರನ್ನು ದಾವಣಗೆರೆ ಪವರ್ ಲಿಪ್ಟಿಂಗ್ ತಂಡ ಸನ್ಮಾನಿಸಿ, ಗೌರವಿಸಿತು. ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಸ್ವಾಗತಿಸಿದರು.
ಕೆನಡಾದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಪ್ರಧಾನ ಕಾರ್ಯದರ್ಶಿ ಸುರೀಂದರ್ ಸಿಂಗ್ ವಿರಕ್, ವಿ. ಕೃಷ್ಣಮೂರ್ತಿ ರಾವ್, ಕೇಂದ್ರದ  ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಬಿಜೆಪಿ ಅಧ್ಯಕ್ಷ ಶ್ರೀಕರ ಪ್ರಭು, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪಿ. ಪಾಶ್ವನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.