ಬಜರಂಗದಳ, ಹಿಂಜಾವೇ ನಡುವೆ ಕದನ
ಮಂಗಳೂರು: ಮಂಗಳೂರು ಹೊರವಲಯದ ಕುಂಪಲದಲ್ಲಿ ರಾತ್ರಿ ವೇಳೆ ಮನೆ, ಅಂಗಡಿಗಳಿಗೆ ನುಗ್ಗಿ ದಾಂದಲೆ ನಡೆಸಿದ ದುಷ್ಕರ್ಮಿಗಳು ಅಲ್ಲಿನ ಒಂದು ಮನೆಗೆ ನುಗ್ಗಿ, ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಹಿಂದು ಜಾಗರಣ ವೇದಿಕೆ ಮುಖಂಡನ ನ್ಯಾನೋ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಗುರುವಾರ ರಾತ್ರಿ 12.30ಕ್ಕೆ 40 ಮಂದಿ ಇದ್ದ ಬಜರಂಗದಳಕ್ಕೆ ಸೇರಿದ ಯುವಕರ ಗುಂಪು ಬಾಲಕೃಷ್ಣ ಮಂದಿರದ ಬಳಿ ಆಗಮಿಸಿ ಅಲ್ಲಿನ ಬ್ಯಾನರ್, ಕಟೌಟ್ಗಳನ್ನು ಕೆಡವತೊಡಗಿತ್ತು. 'ತಾಕತ್ತಿದ್ದವರು ಯಾರಾದರೂ ತಡೆಯಿರಿ' ಎಂದು ದುಷ್ಕರ್ಮಿಗಳು ಕೇಕೇ ಹಾಕುತ್ತಿದ್ದರು. ಗದ್ದಲ ಕೇಳಿ ಪ್ರವೀಣ ಎಂಬವರು ಮನೆಯಿಂದ ಹೊರ ಬಂದಾಗ ದುಷ್ಕರ್ಮಿಗಳು ತಲವಾರ್ಗಳಿಂದ ಹಲ್ಲೆ ನಡೆಸಿದ್ದು, ಮನೆ ಮೇಲೆ ಸೋಡಾ ಬಾಟ್ಲಿಗಳನ್ನು ಎಸೆದು ಹಾನಿ ಮಾಡಿದ್ದಾರೆ. ಪ್ರವೀಣ ಅವರ ಮಗನ ಮೇಲೂ ಹಲ್ಲೆ ನಡೆಸಲಾಗಿದೆ.
ಬಳಿಕ ಸಮೀಪದ ಮೂರುಕಟ್ಟೆಯಲ್ಲಿರುವ ತನ್ನ ಮನೆಗೆ ಬರುತ್ತಿದ್ದ ಹಿಂಜಾವೇ ಮುಖಂಡ ಪ್ರಕಾಶ್ ಯಾನೆ ಪಕ್ಕು ಎಂಬವರ ನ್ಯಾನೋ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ತಲವಾರ್ಗಳಿಂದ ಹಲ್ಲೆ ನಡೆಸಿದ್ದಾರೆ. ನ್ಯಾನೋ ಕಾರಿಗೆ ಬೆಂಕಿ ಹಚ್ಚಿದ್ದು, ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಬಳಿಕ ಜನ ಸೇರುತ್ತಿರುವುದನ್ನು ನೋಡಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊಸರು ಕುಡಿಕೆ ಗಲಾಟೆ: ಮೊಸರು ಕುಡಿಕೆ ವೇಳೆ ಹಿಂಜಾವೇ ಸೇರಿದ ಟ್ಯಾಬ್ಲೊದಲ್ಲಿ ಹುಲಿ ವೇಷ ಹಾಕಿದ್ದ ಹುಡುಗರಿಗೆ ಬಜರಂಗದಳ ಕಾರ್ಯಕರ್ತರು ಕೆನ್ನೆಗೆ ಹೊಡೆದಿದ್ದರು. ಇದನ್ನು ಪ್ರಶ್ನಿಸಿದ ಹಿಂಜಾವೇ ಮತ್ತು ಬಜರಂಗ ದಳದ ನಡುವೆ ಮಾರಾಮಾರಿ ನಡೆದಿತ್ತು. ಇದರ ದ್ವೇಷವೇ ಮರುದಿನ ಮದ್ಯ ಸೇವಿಸಿ ದುಷ್ಕರ್ಮಿಗಳು ಹಲ್ಲೆ ನಡೆಸಲು ಕಾರಣ ಎನ್ನಲಾಗಿದೆ. ಕುಂಟ ಗಣೇಶ ನಿರ್ದೇಶನದಂತೆ ಈಕೃತ್ಯ ನಡೆದಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

