ದಕ್ಷಿಣ ಕನ್ನಡ

ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಗೆ ಕೃತಿ, ತಂಡಗಳ ಆಹ್ವಾನ

Published On :

ಬಂಟ್ವಾಳ: ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ತುಳು ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆ ಸೇರಿದಂತೆ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ತುಳುನಾಟಕ ಸ್ಪರ್ಧೆ ನಡೆಯಲಿದ್ದು, ನಾಟಕ ಕೃತಿ ಮತ್ತು ತಂಡಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ ಮೂಲ್ಯ ತಿಳಿಸಿದ್ದಾರೆ.
ಅವರು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಮುರುಘೇಂದ್ರ ಮಿತ್ರಮಂಡಳಿ 1980ರಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೆ ಅನೇಕ ಉಚಿತ ವೈದ್ಯಕೀಯ ಶಿಬಿರಗಳು, ಮದ್ಯವರ್ಜನಾ ಶಿಬಿರ, ಯವಜನ ಮೇಳ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಗ್ರಾಮೀಣ ಯುವಕಲಾವಿದರನ್ನು ಪ್ರೋತಾಹಿಸುವ ನಿಟ್ಟಿನಲ್ಲಿ ನಾಟಕ, ಯಕ್ಷಗಾನಗಳಂತಹ ಕಾರ್ಯಕ್ರಮವನ್ನು ಆಯೋಜಿಸಿದೆ. ತುಳು ಭಾಷೆ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಧ್ಯೇಯೋದ್ದೇಶವನ್ನಿಟ್ಟುಕೊಂಡು ಈ ಹಿಂದೆ 3 ಬಾರಿ ದ.ಕ. ಉಡುಪಿ ಕಾಸರಗೋಡು ಜಿಲ್ಲಾಮಟ್ಟದ ತುಳುನಾಟಕ ಸ್ಪರ್ಧೆಯನ್ನು ನಡೆಸಿದೆ. ಸಂಘದ ಮಾಜಿ ಅಧ್ಯಕ್ಷ ದಿ.ಎನ್. ಸಾಲ್ವದೋರ್ ಡಿ' ಸೋಜ ಅವರ ಸ್ಮರಣಾರ್ಥ ಈ ನಾಟಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಸಕ್ತ ತಂಡಗಳು ಡಿ. 20ರೊಳಗಾಗಿ ಕೃತಿ ಕಳುಹಿಸಿ ಕೊಡುವಂತೆ ಅವರು ವಿನಂತಿಸಿದ್ದಾರೆ.
ಒಟ್ಟು 6 ನಾಟಕ ತಂಡಗಳನ್ನು ಸ್ಪರ್ಧೆಗೆ ಆಯ್ಕೆಗೊಳಿಸಲಾಗುತ್ತದೆ. ವಿಜೇತ ತಂಡಗಳಿಗೆ ಪ್ರಥಮ ರು. 25 ಸಾವಿರ, ದ್ವಿತೀಯ ರು. 15 ಸಾವಿರ, ತೃತೀಯ ರು. 5 ಸಾವಿರ ಹಾಗೂ ಶಾಶ್ವತ ಫಲಕ ಅಲ್ಲದೆ ವೈಯಕ್ತಿಕ ಬಹುಮಾನ ನೀಡಲಾಗುವುದು. ಆಯ್ಕೆಯಾದ ಸ್ಪರ್ಧಾ ತಂಡಕ್ಕೆ 5 ಸಾವಿರ ಪ್ರಯಾಣ ಭತ್ಯೆ ನೀಡಲಾಗುವುದು ಮತ್ತು ಸ್ಪರ್ಧಿಸಿದ ತಂಡಕ್ಕೆ ಠೇವಣಿ ಮೊಬಲಗನ್ನು ಹಿಂತಿರುಗಿಸಲಾಗುವುದು ಎಂದರು.
ಆಸಕ್ತ ತಂಡಗಳು ನಾಟಕ ಕೃತಿಗಳನ್ನು ಮಿತ್ರ ಮಂಡಳಿಗೆ ಕಳುಹಿಸಿಕೊಡುವಂತೆ ಹಾಗೂ ವಿವರಗಳಿಗಾಗಿ  ಮೊ. 9449330387, 9901098038 ಮತ್ತು 9449189506 ಅನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ರಾಜೇಶ್ ಪಳಿಮಜಲು, ಗೌರವಾಧ್ಯಕ್ಷ ವಿಕ್ಟರ್ ಡಿ' ಸೋಜ, ಪ್ರಮುಖರಾದ ಮಂಜಪ್ಪ ಮೂಲ್ಯ, ಕೆ.ವಿ. ರಾಜೇಂದ್ರ, ಹರಿಶ್ಚಂದ್ರ ಶೆಟ್ಟಿಗಾರ್, ಪಿ. ಮಹಮ್ಮದ್, ಬಿ.ಕಾಂತಪ್ಪ ಟೈಲರ್, ರತ್ನದೇವ್ ಪೂಂಜಾಲಕಟ್ಟೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.