ಬಾಳ; ದುರಂತ ನಿವಾರಣೆ ದಿನಾಚರಣೆ
ಮಂಗಳೂರು: ಬಾಳದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ಮಂಗಳೂರು ಲಿಕ್ವಿಡ್ ಇಂಪೋರ್ಟ್ ಫೆಸಿಲಿಟೇಟ್(ಎಂಎಲ್ಐಎಫ್)ಘಟಕದ ಸ್ಥಾವರದಿಂದ ಗ್ಯಾಸ್ ಸೋರಿಕೆಯಾಗಿದ್ದು, ಬುಧವಾರ ಮಧ್ಯಾಹ್ನವರೆಗೆ ಆತಂಕದ ಪರಿಸ್ಥಿತಿ ನೆಲೆಸಿತ್ತು. ಈ ಘಟನೆಯಿಂದ ಐವರು ಗಂಭೀರ ಗಾಯಗೊಂಡು, 13 ಮಂದಿ ಸಾಮಾನ್ಯ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗ್ಗೆ 11ಕ್ಕೆ ಅಪಾಯ ಸಂಕೇತ ಸೈರನ್ ಮೊಳಗಿದ್ದು, ತಕ್ಷಣವೇ ಘಟಕಕ್ಕೆ ದೌಡಾಯಿಸಿದ ಮೂರು ಅಗ್ನಿಶಾಮಕ ಯಂತ್ರ ಸ್ಥಾವರದಲ್ಲಿ ಅನಿಲ ಸೋರುವಿಕೆಯಿಂದ ಅಗ್ನಿ ಅನಾಹುತ ಉಂಟಾಗದಂತೆ ನಿರಂತರ ನೀರು ಸಿಂಪಡಿಸಲು ಕ್ರಮ ಕೈಗೊಂಡಿತು. ಪ್ರತಿ ಸ್ಥಾವರದಲ್ಲಿ 1400 ಮೆಟ್ರಿಕ್ ಟನ್ ಸಾಮರ್ಥ್ಯ ಗ್ಯಾಸ್ನ್ನು ಹೊಂದಿದೆ. ಸ್ಥಾವರದ ಡ್ರೈನೇಜ್ ಲೀಕ್ ಆದ ಘಟನೆ ವೇಳೆ ಸ್ಥಾವರದಲ್ಲಿ ಅಳವಡಿಸಿದ ಸ್ಪ್ರಿಂಕ್ಲರ್ಗಳಿಂದಲೂ ನೀರು ಸ್ಥಾವರದ ಮೇಲೆ ಚಿಮ್ಮಲಾರಂಭಿಸಿತು. ಅರ್ಧ ಗಂಟೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.
ಇದೇ ವೇಳೆ ಘಟನೆಯಲ್ಲಿ 5 ಮಂದಿ ಗಂಭೀರ ಗಾಯಗೊಂಡರೆ, 13 ಮಂದಿ ಸಾಮಾನ್ಯ ಗಾಯಾಳುಗಳಾಗಿ ನಗರದ ವಿವಿಧ ಆಸ್ಪತ್ರೆಗೆ ದಾಖಲಾದರು. ಗಾಯಗೊಂಡವರಿಗೆ ಬಿಎಎಸ್ಎಫ್ ಘಟಕದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.
ಸ್ಥಾವರ ಸಮೀಪದ ಬಾಳ ಪಂಚಾಯ್ತಿನ ಒಟ್ಟೆಕಾಯರ್ ಪ್ರದೇಶದ 760 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು. ಈ ಮಂದಿಯನ್ನು ಸಮುದಾಯ ಭವನ, ಜೋಕಟ್ಟೆಗಳಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದ್ದು, ಮಧ್ಯಾಹ್ನ ಊಟೋಪಹಾರ ಬಳಿಕ ಸ್ವಸ್ಥಾನಕ್ಕೆ ಕಳುಹಿಸಲಾಯಿತು.
ರಾಸಾಯನಿಕ ದುರಂತ ನಿವಾರಣಾ ದಿನಚಾರಣೆ ಹಿನ್ನೆಲೆಯ ಕಾರ್ಯಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ್, ಸಹಾಯಕ ಕಮೀಷನರ್ ಡಾ.ಪ್ರಶಾಂತ್, ಕಂಪನಿ ಮತ್ತು ಬಾಯ್ಲರ್ ಉಪನಿರ್ದೇಶಕ ನಂಜಪ್ಪ, ಸರ್ಕಲ್ ಇನ್ಸ್ಪೆಕ್ಟರ್ ನಟರಾಜ್, ಎನ್ಐಟಿಕೆ ತಜ್ಞ ಡಾ.ಶ್ರೀನಿಕೇತನ್ ಹಾಜರಿದ್ದರು.
ಈ ಅಣಕು ಪ್ರದರ್ಶನದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ಗೃಹ ರಕ್ಷಕದಳ, ಆರೋಗ್ಯ ಇಲಾಖೆ, ಸ್ಫೋಟಕ ತಜ್ಞರು, ಪ್ರಾದೇಶಿಕ ಪರಿಸರ ಅಧಿಕಾರಿ, ಮಹಾನಗರ ಪಾಲಿಕೆ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಲೋಕೋಪಯೋಗಿ ಇಲಾಖೆ, ವಾರ್ತಾ ಇಲಾಖೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಇತರೆ ಇಲಾಖೆಗಳು ಪಾಲ್ಗೊಂಡಿದ್ದವು.
ಮುಂದೆ ಮಾಹಿತಿ ನೀಡದೆ ಅಣಕು ಕಾರ್ಯಾಚರಣೆ
ಅಣಕು ಪ್ರದರ್ಶನ ನಂತರ ಆಫೀಸರ್ಸ್ ಕ್ಲಬ್ನಲ್ಲಿ ಪ್ರದರ್ಶನದ ಅವಲೋಕನ ನಡೆಯಿತು. ಅಪರ ಜಿಲ್ಲಾಧಿಕಾರಿ ದಯಾನಂದ್ ಮಾತನಾಡಿ, ಮುಂದಿನ ದಿನಗಳಲ್ಲಿ ಮುಂಚಿತವಾಗಿ ಮಾಹಿತಿ ನೀಡದೆ ಅಣಕು ಪ್ರದರ್ಶನ ನಡೆಸಲಾಗುವುದು. ಕಂಪನಿ ಮತ್ತು ಜಿಲ್ಲಾಡಳಿತಕ್ಕೆ ಮಾತ್ರ ಮುಂಚಿತವಾಗಿ ಮಾಹಿತಿ ಇರುತ್ತದೆ. ಅಣಕು ಪ್ರದರ್ಶನ ವೇಳೆ ಕ್ಷಣದಲ್ಲಿ ಮಾಹಿತಿ ನೀಡಿ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವ ಬಗೆಯನ್ನು ತಿಳಿಯಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

