ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ: ಸ್ವಾತಿಗೆ ಕಂಚಿನ ಪದಕ
ಪುತ್ತೂರು: ಭಾರತ ಸರ್ಕಾರ ಮತ್ತು ಇಂಟೆಲ್ ಸಂಸ್ಥೆಯ ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ 'ಐರಿಸ್ ಸೈನ್ಸ್ ಫೇರ್-2013' ಸಂಶೋಧನಾ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ವಾತಿ ದೇರ್ಕಜೆ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ವಿ.ವಿ.ಯಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ವಾತಿ ದೇರ್ಕಜೆ ಮಂಡಿಸಿದ 'ಇಕೋ ಫ್ರಂಡ್ಲೀ ಆರ್ಗಾನಿಕ್ ಗ್ಲೂ ಫ್ರಂ ರೆಡ್ ಬೀಡ್ ಸೀಡ್ಸ್' ಎಂಬ ರ್ವೈಜನಿಕ ಸಂಶೋಧನೆ ಮಂಡಿಸಿದ್ದರು. ಇವರ ಈ ಸಂಶೋಧನೆಗೆ ಕರ್ನಾಟಕ ಸರ್ಕಾರದ ಪ್ರಶಂಸಾ ಪತ್ರವೂ ಲಭಿಸಿದೆ. ಸ್ವಾತಿ ದೇರ್ಕಜೆ ಅವರು ದೇರ್ಕಜೆ ಸತ್ಯನಾರಾಯಣ-ಶೈಲಜಾ ದಂಪತಿ ಪುತ್ರಿ.
ಅಜಯ್ ಶರ್ಮಗೆ ಚಿನ್ನದ ಪದಕ
ಸುಳ್ಯ: ಜಾರ್ಖಂಡ್ನ ಬೊಕಾರೋದಲ್ಲಿ ಇತ್ತೀಚೆಗೆ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕ್ರೀಡಾಕೂಟ ಡಿಸ್ಕಸ್ ತ್ರೋನಲ್ಲಿ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿ ಅಜಯ್ ಶರ್ಮ ಚಿನ್ನದ ಪದಕ ಗಳಿಸಿದ್ದು ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಈತನಿಗೆ ದೈಹಿಕ ಶಿಕ್ಷಕ ಕರುಣಾಕರ ಎಂ. ತರಬೇತಿ ನೀಡಿದ್ದಾರೆ. ಇವನು ಸುಳ್ಯದ ಓಡಬಾ ನಿವಾಸಿ ಗಣೇಶ ಭಟ್ ನೆಲ್ಲಿಂಬಾಡಿ-ಅರುಣಾ ಗಣೇಶ್ ದಂಪತಿ ಪುತ್ರ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

