ಬೆಳ್ತಂಗಡಿ; ಅಕ್ಷರ ದಾಸೋಹ ನೌಕರರ ಉಪವಾಸ 2ನೇ ದಿನಕ್ಕೆ
ಬೆಳ್ತಂಗಡಿ: ಮಾಸಿಕ ವೇತನ ಹೆಚ್ಚಿಸಲು, ಸಾಮಾಜಿಕ ಭದ್ರತೆ ಒದಗಿಸಲು, ರಜಾ ಸಮಯವೂ ವೇತನ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ರಾಜ್ಯಾದ್ಯಾಂತ ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಬೆಂಬಲವಾಗಿ ಬೆಳ್ತಂಗಡಿ ತಾಲೂಕಿನ ಸಿಬ್ಬಂದಿ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯ ಎದುರು ನಡೆಸುತ್ತಿರುವ ಉಪವಾಸ 2ನೇ ದಿನವೂ ಮುಂದುವರಿಯಿತು. ಕಳೆದ 11 ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಮಾಸಿಕ ವೇತನ ರು. 10 ಸಾವಿರ ನೀಡಬೇಕು, ಆದರೂ ಕನಿಷ್ಠ ವೇತನ ರು. 3 ಸಾವಿರ ನೀಡಬೇಕು, ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಬಾರದು, ಇದರ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ಮತ್ತು ಅಡುಗೆ ಸಿಬ್ಬಂದಿಗೆ ನೀಡಬೇಕು, ಅಗತ್ಯ ಸೇವಾ ಸೌಲಭ್ಯಗಳನ್ನು ಕೊಡಬೇಕು, ಬಿಸಿಯೂಟ ಯೋಜನೆ ಖಾಯಂ ಗೊಳಿಸಬೇಕು, ಸಿಬ್ಬಂದಿಯನ್ನು ಶಾಲಾ ಸಿಬ್ಬಂದಿಯೆಂದು ಪರಿಗಣಿಸಬೇಕು, ಅಡುಗೆ ಸಂದರ್ಭ ಆಕಸ್ಮಿಕ ಅಪಘಾತವಾದರೆ ಪರಿಹಾರ ಸಿಗಬೇಕು, ಪ್ರತಿ ತಿಂಗಳ ಮೊದಲ ವಾರದಲ್ಲಿ ಸಂಬಳ ನೀಡಬೇಕು ಎಂದು ಹಲವಾರು ಬೇಡಿಕೆಗಳನ್ನು ಆಗ್ರಹಿಸಿ ಉಪವಾಸ ಹೋರಾಟ ನಡೆಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಿ.ಎಂ.ಭಟ್, ರಾಜ್ಯ ಸಮಿತಿ ಸದಸ್ಯ ಶಿವಕುಮಾರ್, ಶೇಖರ್ ಲಾಯ್ಲ, ಅಕ್ಷರ ದಾಸೋಹ ತಾಲೂಕು ಸಮಿತಿ ಅಧ್ಯಕ್ಷೆ ಲಲಿತ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

