ಉಜಿರೆ: ಹೊಸನಗರ ಮೇಳದ ಯಕ್ಷೋತ್ಸವ ಉದ್ಘಾಟನೆ
ಬೆಳ್ತಂಗಡಿ: ಡಿ. ಮುಂಡಾಜೆ ಮಿತ್ರ ಮಂಡಳಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಮತ್ತು ಶ್ರೀ ಶಾರದಾ ಸೇವಾ ಟ್ರಸ್ಟ್ ಉಜಿರೆ ಇದರ ಸಹಕಾರದೊಂದಿಗೆ ಉಜಿರೆ ರಥಬೀದಿಯಲ್ಲಿ ಹೊಸನಗರ ಯಕ್ಷಗಾನ ಮೇಳದಿಂದ ಪೌರಾಣಿಕ ಪ್ರಸಂಗಗಳ ನಾಲ್ಕು ದಿನಗಳ ಯಕ್ಷೊತ್ಸವದ ಉದ್ಘಾಟನೆಯನ್ನು ಉಜಿರೆ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ವರ್ತಕರ ಸಂಘದ ಅಧ್ಯಕ್ಷ ಬಿ. ಪಾಂಡುರಂಗ ಬಾಳಿಗ, ಸಂಚಾಲನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಬೈಪಡಿತ್ತಾಯ, ಕಾರ್ಯದರ್ಶಿ ರಾಘವೇಂದ್ರ ರಾವ್, ಉಪಾಧ್ಯಕ್ಷ ಅಶೋಕ್ ಚಕ್ಕಿತ್ತಾಯ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಪಳಕುಂಜ ಕೃಷ್ಣ ನಾಯ್ಕರ ಸಂಸ್ಮರಣಾ ಭಾಷಣವನ್ನು ಜಯಪ್ರಕಾಶ್ ಹೆಬ್ಬಾರ್ ಮಾಡಿದರು. ಉಪನ್ಯಾಸಕ, ಕಲಾವಿದ ಡಾ. ಶ್ರುತಕೀರ್ತಿರಾಜ ಉಜಿರೆ ಅವರನ್ನು ಅಭಿನಂದಿಸಲಾಯಿತು. ಸಂಚಾಲಕ ಚಂದ್ರಮೋಹನ್ ಮರಾಠೆ ಸ್ವಾಗತಿಸಿದರು. ಸಹ ಸಂಚಾಲಕ ಶೈಲೇಶ್ ಠೋಸರ್ ನಿರೂಪಿಸಿ, ವಂದಿಸಿದರು. ನಂತರ ಹೊಸನಗರ ಮೇಳದಿಂದ ಇಕ್ಷ್ವಾಕುವಂಶವರ್ಧನ ಯಕ್ಷಗಾನ ಬಯಲಾಟ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

