ದಕ್ಷಿಣ ಕನ್ನಡ

ನಾಡೋಜ, ಶತಾಯುಷಿ ಸಾಹಿತಿಗಳಿಗೆ ವಿಶ್ವನುಡಿಸಿರಿ ವಿರಾಸತ್ ಪ್ರಶಸ್ತಿ

Published On :

ಮಂಗಳೂರು: ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್‌ನಲ್ಲಿ ನಾಡಿನ ಹಿರಿಯ ಸಾಹಿತಗನ್ನು ನಾಡು, ನುಡಿಗಾಗಿ ಜೀವನ ಮುಡಿಪಾಗಿಟ್ಟವರಿಗೆ ಸನ್ಮಾನ ನಡೆಯಲಿದೆ.
90 ವರ್ಷ ಮೇಲ್ಪಟ್ಟ ಸಾಧಕರನ್ನು ಗುರುತಿಸುವ ಅಪರೂಪದ ಕಾರ್ಯಕ್ರಮ ಡಿ.20ರಂದು ರತ್ನಾಕರಣವರ್ಣಿ ವೇದಿಕೆಯಲ್ಲಿ ನಡೆಯಲಿದೆ.
ಹಿರಿಯ ಸಂಶೋಧಕ ಖ್ಯಾತ ನಿಘಂಟು ತಜ್ಞ ನಾಡೋಜ ವೆಂಕಟಸುಬ್ಬಯ್ಯ, ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಕುಲಪತಿ, ಸಾಹಿತಿ ನಾಡೋಡ ಜವರೇಗೌಡ, ಭಾಷೆ ಹೋರಾಟಕ್ಕೆ ತಮ್ಮ ಜೀವನ ಮುಡಿಪಾಗಿಟ್ಟ ಗಡಿನಾಡ ಕನ್ನಡಿಗ 99ರ ಹರೆಯದ ಕಯ್ಯಾರ ಕಿಂಞಣ್ಣ ರೈ, ಹಿರಿಯ ಕವಿ ನಾಡೋಜ ಚನ್ನವೀರ ಕಣವಿ, ಹಿರಿಯ ಪತ್ರಕರ್ತ ಸಾಹಿತಿ, ಹೋರಾಟಗಾರ ನಾಡೋಜ ಪಾಟೀಲ ಪುಟ್ಟಪ್ಪ, ಅಪರೂಪದ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ದೊರೆಸ್ವಾಮಿ, ಜೀವಂತ ದಂತಕಥೆ, ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ 117 ವರ್ಷದ ಪಂಡಿತ ಸುಧಾಕರ ಚತುರ್ವೇದಿ, ರಾಷ್ಟ್ರ ಪ್ರಶಸ್ತಿ ವಿಜೇತ ನಾಡೋಜ ಸಾಲುಮರ ತಿಮ್ಮಕ್ಕ, ಹಿರಿಯ ಯಕ್ಷಗಾನ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ ಇವರು ವಿರಾಸತ್ 2013 ವಿಶೇಷ ಗೌರವ ಸನ್ಮಾನಕ್ಕೆ ಭಾಜನರಾಗಲಿದ್ದಾರೆ.
 ಸನ್ಮಾನ, ಪ್ರಶಸ್ತಿ ಹಾಗೂ 50 ಸಾವಿರ ಗೌರವ ಸಂಭಾವೆ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಶಿಕ್ಷಕರಿಗೆ ರಜೆ ಸೌಲಭ್ಯ
ಮಂಗಳೂರು: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್-2013 ಸಮ್ಮೇಳನಕ್ಕೆ ಭಾಗವಹಿಸುವ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ಮತ್ತು ಪದವಿ ಪೂರ್ವ, ಪದವಿ ಉಪನ್ಯಾಸಕರಿಗೆ ಶಿಕ್ಷಣ ಇಲಾಖೆ ಅನ್ಯ ಕಾರ್ಯನಿಮಿತ್ತ ರಜೆ ಮಂಜೂರು ಮಾಡಿದೆ. ಆದ್ದರಿಂದ ಡಿ. 19 ರಿಂದ 22ರವರೆಗೆ ಎಲ್ಲ ಶಿಕ್ಷಕರು, ಉಪನ್ಯಾಸಕರು ರಜಾ ಸೌಲಭ್ಯವನ್ನು ಉಪಯೋಗಿಸಿ ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.