ದಕ್ಷಿಣ ಕನ್ನಡ

ಮೈಸೂರು ಒಡೆಯರ ಸದ್ಗತಿಗಾಗಿ ಕುಕ್ಕೆಯಲ್ಲಿ ನಾಳೆ ಪಾಲಕಿ ಉತ್ಸವ

Published On :

ಸುಬ್ರಹ್ಮಣ್ಯ: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಆತ್ಮಕ್ಕೆ ಸದ್ಗತಿ ಸಿಗಲೆಂದು ಕುಕ್ಕೆಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ. ಡಿ.14ರಂದು ದೇವಾಲಯದಲ್ಲಿ ರಾತ್ರಿ ಮಹಾಪೂಜೆಯುಕ್ತ ಪಾಲಕಿ ಉತ್ಸವವನ್ನು ಒಡೆಯರ ಹೆಸರಿನಲ್ಲಿ ನೆರವೇರಿಸಲಾಗುವುದು ಎಂದು ದೇವಳದ ಆಡಳಿತ ಮಂಡಳಿ ನಿರ್ಣಯಿಸಿದೆ.
 ಸುಬ್ರಹ್ಮಣ್ಯ ದೇವಳಕ್ಕೆ ಮೈಸೂರಿನ ಒಡೆಯರು ಭೇಟಿ ನೀಡಿ ಸೇವೆ ಸಲ್ಲಿಸಿದ್ದರು. ದೇವಳದ ದಿನನಿತ್ಯದ ಪೂಜಾ ಕೈಂಕರ್ಯಗಳಿಗೆ ಹಣ ಪಾವತಿ ಮಾಡಿದ್ದಲ್ಲದೆ ವಾರ್ಷಿಕ ಜಾತ್ರೆ ಸಮಯದಲ್ಲಿ ಅನ್ನದಾನಕ್ಕಾಗಿ ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ. ಒಡೆಯರ ಹುಟ್ಟುಹಬ್ಬದ ದಿನ ಸುಬ್ರಹ್ಮಣ್ಯ ದೇವಳದಿಂದ ಮಹಾಪ್ರಸಾದ ಹಾಗೂ ಮೂಲಮೃತ್ತಿಕಾ ಪ್ರಸಾದವನ್ನು ಅನಾದಿ ಕಾಲದಿಂದಲೂ ನೀಡುತ್ತಿದ್ದು, ಕಳೆದ ವರ್ಷ ಕೂಡ ದೇವಳ ವತಿಯಿಂದ ಪ್ರಸಾದ ಒಪ್ಪಿಸಲಾಗಿದೆ. ಇದೀಗ ಶ್ರೀಕಂಠದತ್ತ ಒಡೆಯರ ಅಗಲಿಕೆ ತುಂಬಾ ನೋವು ತಂದಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.