ದಕ್ಷಿಣ ಕನ್ನಡ

ವ್ಯಾವಹಾರಿಕ ಜ್ಞಾನ, ಶ್ರದ್ಧೆ, ನಿಷ್ಠೆಯಿಂದ ಯಶಸ್ಸು: ಶ್ರೀ ಶಿವಾನಂದ ಸ್ವಾಮೀಜಿ

Published On :

ಗಂಗೊಳ್ಳಿ: ಯಾವುದೇ ವ್ಯವಹಾರ ಹಾಗೂ ಉದ್ಯೋಗದಲ್ಲಿ ಯಶಸ್ಸು ದೊರೆಯಬೇಕಾದರೆ ವ್ಯಾವಹಾರಿಕ ಜ್ಞಾನ, ಕರ್ಮದಲ್ಲಿ ನಿಷ್ಠೆ ಹಾಗೂ ಶ್ರದ್ಧೆ ಮುಖ್ಯ. ಧರ್ಮಾಚರಣೆಯೊಂದಿಗೆ ನಮ್ಮ ಆಚಾರ ವಿಚಾರಗಳಲ್ಲಿ ನಂಬಿಕೆಯನ್ನಿಟ್ಟು, ಗುರು ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆ ಬೆಳವಣಿಗೆಗಳು ಆಗಿದ್ದು, ಈ ತಂತ್ರಜ್ಞಾನದ ಸದುಪಯೋಗ ಹಾಗೂ ಮಿತವಾದ ಬಳಕೆ ಮಾಡಿದರೆ ಉತ್ತಮ. ಈ ನಿಟ್ಟಿನಲ್ಲಿ ಯುವಜನಾಂಗ ಚಿಂತನೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಸಹಕಾರಿಯ ನೂತನ ವೆಬ್‌ಸೈಟ್ ಢಿಢಿಢಿ.್ಜಛಟ್ಜ್ಡಿಟ್ಝಡ್ಟಿಢಿಟಿಛಿಛಟ್ಞಿ.್ಛ್ಟಟ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶತಮಾನದ ಹೊಸ್ತಿಲಲ್ಲಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಗ್ರಾಹಕರ ಅಗತ್ಯತೆಗಳನ್ನು ಯಶಸ್ವಿಯಾಗಿ ಪೂರೈಸಿ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಗ್ರಾಹಕರಿಗೆ ಹಾಗೂ ಸದಸ್ಯರಿಗೆ ಸಹಕಾರಿಯ ಮಾಹಿತಿ ನಿರಂತವಾಗಿ ದೊರೆಯಬೇಕೆನ್ನುವ ಉದ್ದೇಶ ಹಾಗೂ ಸಹಕಾರಿಯ ಪ್ರಗತಿ ದೃಷ್ಟಿಯಿಂದ ವೆಬ್‌ಸೈಟ್ ಆರಂಭಿಸಿರುವುದು ಶ್ಲಾಘನೀಯ. ಸಹಕಾರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ಉತ್ತಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಲಿ ಎಂದು ಆಶೀರ್ವದಿಸಿದರು.
ಸಹಕಾರಿಯ ನಿರ್ದೇಶಕರಾದ ಬಿ. ಮಂಜುನಾಥ ಶೆಣೈ, ಕೆ. ಗೋಪಾಲಕೃಷ್ಣ ನಾಯಕ್, ಉದಯಶಂಕರ ರಾವ್, ಬಿ. ರಾಘವೇಂದ್ರ ಪೈ, ಜಿ. ವಿಶ್ವನಾಥ ಆಚಾರ್ಯ, ಬಿ. ಪ್ರಕಾಶ ಶೆಣೈ, ವೆಂಕಟೇಶ ನಾಯಕ್, ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಸಹಕಾರಿಯ ಸಿಬ್ಬಂದಿ, ಸಹಕಾರಿಯ ಸದಸ್ಯರು ಇದ್ದರು.
ಅಧ್ಯಕ್ಷ ಎಚ್. ಗಣೇಶ ಕಾಮತ್ ಸ್ವಾಗತಿಸಿ, ಉಪಾಧ್ಯಕ್ಷ ಜಿ. ವೇದವ್ಯಾಸ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.