ವೇತನ ಪರಿಷ್ಕರಣೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ
ಉಡುಪಿ: ಬ್ಯಾಂಕಿಂಗ್ ರಂಗದ ಸುಧಾರಣೆ ಹಾಗೂ ವೇತನ ಪರಿಷ್ಕರಣೆ ಆಗ್ರಹಿಸಿ ದೇಶಾದ್ಯಂತ ಬ್ಯಾಂಕ್ ನೌಕರರ ಮತ್ತು ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ ಕರೆಯಂತೆ ಉಡುಪಿಯಲ್ಲಿಯೂ ಸಿಂಡಿಕೇಟ್ ಬ್ಯಾಂಕ್ನ ಕೆಥೋಲಿಕ್ ಸೆಂಟರ್ ಶಾಖೆ ಮುಂಭಾಗ ಬುಧವಾರ ಮುಷ್ಕರ ನಡೆಯಿತು.
ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆ ಅವಧಿ 2012ರ ಅಕ್ಟೋಬರ್ನಲ್ಲಿ ಮುಗಿದಿದ್ದು, ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಜೊತೆ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ಫಲಪ್ರದವಾಗದ ಕಾರಣಕ್ಕೆ ಮುಷ್ಕರ ಹೂಡುವುದು ಅನಿವಾರ್ಯವಾಗಿದೆ. ಇನ್ನಾದರೂ ಈ ಬೇಡಿಕೆಗಳು ಈಡೇರಬೇಕು ಎಂದು ಮುಷ್ಕರನಿರತರು ಆಗ್ರಹಿಸಿದರು.
ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ನ ಜಿಲ್ಲಾ ಸಂಚಾಲಕ ಯು. ಶಿವರಾಯ, ಅಧಿಕಾರಿಗಳ ಸಂಘಟನೆಯ ದಿನಕರ ಪೂಂಜ, ಜಯಪ್ರಕಾಶ್, ಕೆ. ಕೆ. ಕಿಣಿ, ನೌಕರರ ಸಂಘದ ಹೆರಾಲ್ಡ್ ಡಿ'ಸೋಜ, ಕೆ.ಎಸ್. ಉಳ್ಳಾರ್, ಚಂದ್ರಶೇಖರ್, ಬಾಲ ಗಂಗಾಧರ, ರತ್ನಾಕರ ದೇವಾಡಿಗ, ಕೆ. ಆರ್. ಶೆಣೈ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

