ಇಂದು ಕ್ಷ ಕಿರಣ ಯಂತ್ರ ಉದ್ಘಾಟನೆ
ಉಪ್ಪಿನಂಗಡಿ: ಬಹು ಜನರ ಬೇಡಿಕೆಗೆ ಪೂರಕವಾಗಿ ಕಡಬ ರೋಟರಿ ಕ್ಲಬ್ ಹಾಗೂ ಬೆಂಗಳೂರಿನ ರೋಟರಿ ಕ್ಲಬ್ ಸಹಯೋಗದಲ್ಲಿ ಕಡಬ ಸಮುದಾಯ ಕೇಂದ್ರಕ್ಕೆ ಕೊಡಮಾಡುತ್ತಿರುವ ಕ್ಷ- ಕಿರಣ (ಎಕ್ಸ್ ರೇ) ಯಂತ್ರದ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ ಎಂದು ಕಡಬ ರೋಟರಿ ಕೋಶಾಧಿಕಾರಿ ಮಹಮ್ಮದ್ ರಫೀಕ್ ಹೇಳಿದ್ದಾರೆ.ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಂತ್ರವನ್ನು ರೋಟರಿ ಜಿಲ್ಲಾ ಗವರ್ನರ್ ಡಾ. ಬಾಸ್ಕರ್ ಎಸ್. ಹಸ್ತಾಂತರಿಸಲಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಯಂತ್ರ ಉದ್ಘಾಟಿಸಲಿದ್ದಾರೆ. ಕಡಬ ರೋಟರಿ ಅಧ್ಯಕ್ಷ ಶ್ಯಾಂಟನಿ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಜಿಲ್ಲಾ ಸಹ ಗವರ್ನರ್ ಅಬ್ರಹಾಂ ವರ್ಗೀಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್ ಎಂ.ಎಸ್., ತಾಲೂಕು ಆರೋಗ್ಯಾಧಿಕಾರಿ ಡಾ. ಬದ್ರುದ್ದೀನ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ರೋಟರಿ ಪೂರ್ವಾಧ್ಯಕ್ಷ ಬಾಲಕೃಷ್ಣ ಭಟ್ ಮೂಜೂರುಕಟ್ಟ, ಕಾರ್ಯದರ್ಶಿ ವಿ.ಎಂ. ಕುರಿಯನ್, ರೋಟರಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಅಚ್ಚುತ ಪ್ರಭು, ನಿಯೋಜಿತ ಅಧ್ಯಕ್ಷ ಅಹಮ್ಮದ್ ಕುಂಞ ಇದ್ದರು.
ನಾಳೆ ಉದ್ಘಾಟನೆ
ಮಂಗಳೂರು: ತೊಕ್ಕೊಟ್ಟು ಕಲ್ಲಾಪಿನಲ್ಲಿ 21 ರಂದು ಬೆಳಗ್ಗೆ 3 ರಂದು 'ಓಂ ಶ್ರೀ ಮಠ'ವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪಾಲ್ಗೊಳ್ಳುವರು ಎಂದು ಮಠದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಾರಾಂ ಪೈ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಪೆರಿಯ ಶ್ರೀಶೈಲ ದೇವಿ ಕ್ಷೇತ್ರದ ತಂತ್ರಿ ಕುಟುಂಬದ ಶ್ರೀ ಚಕ್ರ ಉಪಾಸನೆಯನ್ನು ಪ್ರಚಾರ ಮಾಡಲು ಮಠ ಸ್ಥಾಪಿಸಿಲಾಗಿದೆ. ಮಠದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಮಠಾಧಿಪತಿ ಬ್ರಹ್ಮಶ್ರೀ ಗುರೂಜಿ ಅವರು ಉಪನ್ಯಾಸ ನಡೆಸುವರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

