ನೇಮೋತ್ಸವ ಬ್ಯಾನರ್ ತೆರವು; ಕಿನ್ನಿಗೋಳಿ ಗ್ರಾಪಂಗೆ ಘೇರಾವ್
ಮೂಲ್ಕಿ: ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಪುನರೂರು ಮತ್ತು ಗುತ್ತಕಾಡಿನಲ್ಲಿ ಹಾಕಿರುವ ಪುನರೂರಿನ ಬ್ರಹ್ಮ ಮುಗೇರ ದೈವಸ್ತಾನದ ನೇಮೋತ್ಸವದ ಬ್ಯಾನರ್ ಅನ್ನು ಕಿನ್ನಿಗೋಳಿ ಗ್ರಾಪಂ ಆಡಳಿತ ಮಂಡಳಿ ತೆರವುಗೊಳಿಸಿದ್ದು ಹಾಗೂ ದಲಿತ ಸಮುದಾಯದವರನ್ನು ಜಾತಿ ನಿಂದನೆ ಮಾಡಿದ್ದರಿಂದ ಆಕ್ರೋಶಗೊಂಡ ಪುನರೂರು ಗ್ರಾಮಸ್ಥರು ಶುಕ್ರವಾರ ಕಿನ್ನಿಗೋಳಿ ಗ್ರಾಪಂಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಪುನರೂರು ಬ್ರಹ್ಮ ಮುಗೇರ ದೈವಸ್ತಾನದ ನೇಮೋತ್ಸವಕ್ಕೆ ಹಾಕಿದ ಬ್ಯಾನರ್ ಅನ್ನು ಸಮಿತಿಗೆ ಮಾಹಿತಿ ನೀಡದೆ ತೆಗೆದು ಹಾಕಿದಲ್ಲದೆ ಈ ಬಗ್ಗೆ ಗ್ರಾಪಂಗೆ ವಿಚಾರಿಸಲು ಬಂದಾಗ ದಲಿತ ಸಮುದಾಯದವರನ್ನು ನಿಂದಿಸಿ ಅವ್ಯಾಚ ಶಬ್ಧಗಳಿಂದ ಬೈದಿದ್ದಾರೆ. ತಮಗೆ ನ್ಯಾಯ ಸಿಗಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಈ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಮಾತನಾಡಿ, ಧಾರ್ಮಿಕ ಸಂಬಂಧಿ ಬ್ಯಾನರ್‌ಗಳಿಗೆ ಉಚಿತವಾಗಿ ಹಾಗೂ ಇತರ ವಾಣಿಜ್ಯ ಉದ್ಯೇಶಗಳ ಬ್ಯಾನರ್‌ಗಳಿಗೆ ದರ ನಿಗದಿಪಡಿಸುವಂತೆ ತಿಳಿಸಿದರು. ಉಚಿತವಾಗಿ ಬ್ಯಾನರ್ ಹಾಕಲು ಅವಕಾಶವಿಲ್ಲ. ಈ ಬಗ್ಗೆ ನಿರ್ಣಯ ಮಂಡಿಸಿ ತಾಪಂಗೆ ಕಳುಹಿಸಿ ಸರ್ಕಾರದಿಂದ ಆದೇಶ ಬಂದಲ್ಲಿ ಪರಿಗಣಿಸಲಾಗುವುದು ಎಂದು ಪಿಡಿಓ ಅರುಣ್ ಪ್ರದೀಪ್ ಡಿಸೋಜ ಮತ್ತು ಕಾರ್ಯದರ್ಶಿ ಒಲಿವರ್ ಪಿಂಟೋ ಹೇಳಿದರು. ಪುನರೂರಿನಲ್ಲಿ ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನಕ್ಕೆ ಕೂಲಿಗಳಿಂದ ಮಾಡಬೇಕಾದ ಕಾಮಗಾರಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವುದಕ್ಕೆ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

