ರಾಜೀವ್ ಚಂದ್ರಶೇಖರ್ಗೆ 'ಗಣ್ಯ ಹಳೆ ವಿದ್ಯಾರ್ಥಿ' ಪ್ರಶಸ್ತಿ
ಮಣಿಪಾಲ: ದೇಶದ ಅತ್ಯುತ್ತಮ ಖಾಸಗಿ ವಿ.ವಿ.ಗಳಲ್ಲೊಂದಾದ ಮಣಿಪಾಲ ವಿ.ವಿ.ಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ತನ್ನ ಹಳೆವಿದ್ಯಾರ್ಥಿಗಳಿಗಾಗಿಯೇ ಸ್ಥಾಪಿಸಿರುವ 'ಗಣ್ಯ ಹಳೆವಿದ್ಯಾರ್ಥಿ' ಪ್ರಶಸ್ತಿಯನ್ನು ಸಂಸದ, ಉದ್ಯಮಿ ರಾಜೀವ್ ಚಂದ್ರಶೇಖರ್ ಮತ್ತು ವಿಶ್ವ ಶಾಂತಿ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೆಡಿಸಿನ್ಸ್ ಸಾನ್ಸ್ಫ್ರಾಂಟಿಯರ್ ಸಂಸ್ಥೆಯ ಅಧ್ಯಕ್ಷ ಡಾ. ಉನ್ನಿ ಕರುಣಾಕರ್ಗೆ ಶನಿವಾರ ಮಣಿಪಾಲ ವಿ.ವಿ.ಯ ಹಳೆವಿದ್ಯಾರ್ಥಿಗಳ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸಂಸದ ರಾಜೀವ ಚಂದ್ರಶೇಖರ್ ಮಾತನಾಡಿ, ಜೀವನದಲ್ಲಿ ಎಲ್ಲ ಅವಕಾಶಗಳು ಅನಿರೀಕ್ಷಿತವಾಗಿಯೇ ಬರುತ್ತವೆ, ಈ ಎಲ್ಲಾ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಬೇಕು, ಸಫಲತೆ ಮತ್ತು ವಿಫಲತೆಗಳು ಸಂದರ್ಭ ಅನುಸರಿಸಿಕೊಂಡಿರುತ್ತವೆ, ಆದರೆ ಸವಾಲು ಎದುರಿಸಲು ಸಿದ್ಧನಿಲ್ಲದವರು ಎಂದಿಗೂ ಯಶಸ್ಸು ಸಾಧಿಸಲಾರರು ಎಂದು ತನ್ನ ಜೀವನದ ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.
ಅವಕಾಶಗಳಿರುವ ದೇಶ: ಇಂದು ಭಾರತ ಹಿಂದೆಂದಿಗಿಂತಲೂ ಅತಿ ಹೆಚ್ಚು ಅವಕಾಶಗಳಿರುವ ದೇಶವಾಗಿದೆ. ಆದ್ದರಿಂದ ಯುವಜನತೆ ಅವಕಾಶಗಳಿಗಾಗಿ ಹುಡುಕಾಡುವ ಅಗತ್ಯವೇ ಇಲ್ಲ, ಆದರೆ ಒಳ್ಳೆಯ ಅವಕಾಶಗಳು ಯಾವುದೆಂದು ಗುರುತಿಸುವ ಅಗತ್ಯ ಇದೆ ಎಂದರು.
ತನ್ನ ಜೀವನದಲ್ಲಿ ಸತತ 4 ವರ್ಷಗಳ ಕಾಲ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದದ್ದು ಮಣಿಪಾಲದಲ್ಲಿ ಮಾತ್ರ, ಮಣಿಪಾಲ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು ಎಂದ ಅವರು ಇಲ್ಲಿನ ಎಂ.ಐ.ಟಿ.ಯಲ್ಲಿ ತಮ್ಮ ಶೈಕ್ಷಣಿಕ ಜೀವನ ಮೆಲುಕು ಹಾಕಿದರು.
ಡಾ. ಉನ್ನಿ ಕರುಣಾಕರ್ ಸಮಾವೇಶ ಉದ್ಘಾಟಿಸಿದರು. ಮಣಿಪಾಲ ವಿ.ವಿ.ಯ ಸಹಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಪ್ರಶಸ್ತಿ ಪುರಸ್ಕೃತರನ್ನು ಸ್ವಾಗತಿಸಿದರು. ಉಪಕುಲಪತಿ ಡಾ. ರಾಮ್ ನಾರಾಯಣನ್ ಮಣಿಪಾಲ ವಿ.ವಿ.ಯ ಸಾಧನೆಗಳನ್ನು ಪರಿಚಯಿಸಿದರು. ಹಳೆವಿದ್ಯಾರ್ಥಿ ಕೇಂದ್ರದ ನಿರ್ದೇಶಕ ಡಾ. ರವಿರಾಜ್, ವಿ.ವಿ.ಯ ಗುಣಮಟ್ಟ ಮಂಡಳಿ ಅಧ್ಯಕ್ಷ ನಾಗೇಂದ್ರಸ್ವಾಮಿ, ಎಂಐಟಿಯ ಸಹನಿರ್ದೇಶಕ ಡಾ. ಜಗನ್ನಾಥ ಕೆ. ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

