ಕೋರ್ಟ್ ಕೇಸ್ ಮುಗಿದರೂ ಶಿಕ್ಷೆ ಕೊಡ್ತಾರೆ!
ಮಂಗಳೂರು: ಧರ್ಮಸ್ಥಳ ಕೆಎಸ್ಆರ್ಟಿಸಿ ಡಿಪೋ ಚಾಲಕರೊಬ್ಬರು ಅಪಘಾತವೆಸಗಿದ ಪ್ರಕರಣ ಕೋರ್ಟ್ನಲ್ಲಿ ಖುಲಾಸೆಗೊಂಡಿತ್ತು. ಆದರೆ ಕೆಎಸ್ಆರ್ಟಿಸಿ ಪ್ರತ್ಯೇಕ ವಿಚಾರಣೆಯಲ್ಲಿ ಅದೇ ಪ್ರಕರಣಕ್ಕೆ ಚಾಲಕನಿಗೆ ಶಿಕ್ಷೆ ವಿಧಿಸಿದೆ.
ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ಧರ್ಮಸ್ಥಳ ಡಿಪೋದಲ್ಲಿ ಕೋರ್ಟ್ ತೀರ್ಪಿಗೂ ಬೆಲೆ ಇಲ್ಲ. ಕೆಎಸ್ಆರ್ಟಿಸಿಯದ್ದೇ ಪ್ರತ್ಯೇಕ ಆಡಳಿತ ಎಂಬಂತಾಗಿದೆ. 2012 ಬಿಸಿರೋಡ್ನಲ್ಲಿ ಬಸ್ ಚಾಲನೆ ಮಾಡುತ್ತಿರುವಾಗ ಅಪಘಾತ ಸಂಭವಿಸಿತ್ತು.
ಘಟನೆಯಲ್ಲಿ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದ. ಪ್ರಕರಣದ ವಿಚಾರಣೆ ನಡೆದು ಎಂಟು ತಿಂಗಳಲ್ಲಿ ಚಾಲಕ ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಆದರೆ ಚಾಲಕ ನಿರಾಳ ಆಗಲೇ ಇಲ್ಲ.
ಯಾಕೆಂದರೆ ಕೆಎಸ್ಆರ್ಟಿಸಿ ವಿಚಾರಣಾ ವಿಭಾಗ ನಡೆಸಿದ ವಿಚಾರಣೆಯಲ್ಲಿ ಚಾಲಕ ಅಪರಾಧಿ. ಮೇಲಧಿಕಾರಿಗಳ ಕೈಬಿಸಿ ಮಾಡದ ಕಾರಣಕ್ಕೆ ಆತನಿಗೆ ಶಿಕ್ಷೆ ವಿಧಿಸಿದರು.
ಚಾಲಕನ ಎರಡು ವರ್ಷದ ಪ್ರೊಬೆಷನರಿ ಅವಧಿಯನ್ನು ಘೋಷಿಸದೆ ಮತ್ತೆ ಮೂರು ತಿಂಗಳು ಮುಂದಕ್ಕೆ ಹಾಕಿದರು. ಅಲ್ಲದೆ ಮಾಸಿಕ ವೇತನ ರು. 6,500 ವಸೂಲಿ ಮಾಡಿದ್ದರು ಆಗಿನ ಪುತ್ತೂರು ವಿಭಾಗೀಯ ಅಧಿಕಾರಿ ಯಶವಂತ ಕುಮಾರ್.
ನೌಕರರ ವೃಥಾ ಅಮಾನತು: 2011ರಲ್ಲಿ ಮಂಗಳೂರು ಡಿಪೋದಲ್ಲಿ ವೆಲ್ಡಿಂಗ್ ಮಾಡುವಾಗ ಹೊಸ ವೋಲ್ವೋ ಬಸ್ ಸುಟ್ಟುಹೋಗಿತ್ತು. ಇದಕ್ಕೆ ಸೂಪರ್ವೈಸರ್, ಅಧಿಕೃತ ಮೆಕ್ಯಾನಿಕ್ಗಳು ಜವಾಬ್ದಾರಿ. ಇಲ್ಲಿ ಅಮಾನತುಗೊಂಡದ್ದು ನಾಲ್ಕನೇ ದರ್ಜೆ ನೌಕರ. ವೋಲ್ವೋ ಬಸ್ಗಳ ದುರಸ್ತಿಗೆ ತರಬೇತಾದ ಮೆಕ್ಯಾನಿಕ್ಗಳೇ ಬೇಕು. ಮೇಲಧಿಕಾರಿಗಳು ಸಾಮಾನ್ಯ ವೆಲ್ಡರ್ನಲ್ಲಿ ಮಾಡಿಸಿ ತಪ್ಪಾದಾಗ ಯಾರದೋ ತಲೆಗೆ ಕಟ್ಟುತ್ತಾರೆ. ಇಲ್ಲಿ ಸುಪರ್ವೈಸರ್ ಕೆಳಗಿನ ಇಬ್ಬರು ನೌಕರರನ್ನು ಒಂದು ವರ್ಷ ವರೆಗೆ ಅಮಾನತು ಮಾಡಿದ್ದರು. ಒಬ್ಬರ ವೇತನ ಕಡಿತ ಮಾಡಿದ್ದಾರೆ. ಇನ್ನೊಬ್ಬರಿಗೆ ವೇತನ ಕೊಟ್ಟಿಲ್ಲ. ಈಗ ಅವರಿಬ್ಬರು ತಪ್ಪೆಸಗಿಲ್ಲ ಎಂದು ವಿಚಾರಣೆ ಮುಗಿದಾಗ ಗೊತ್ತಾಗಿದೆ. ಆದರೆ ಇನ್ನೂ ಕೇಸ್ ಮುಕ್ತಾಯ ಆಗಿಲ್ಲ.
ವಾಹನ ಖರೀದಿಸಿದರೆ ದಂಡ!: ಇದೊಳ್ಳೆ ಕತೆ ಮಾರಾಯ್ರೆ ಎನ್ನುವ ಸುದ್ದಿ. ಪುತ್ತೂರು ಡಿಪೋದಲ್ಲಿ ನೌಕರರೊಬ್ಬರು ದ್ವಿಚಕ್ರ ವಾಹನ ಖರೀದಿಸಿದ್ದಾರೆ.
ಅವರಿಗೆ ಒಂದು ವರ್ಷ ವೇತನ ಹೆಚ್ಚಳ ಕಡಿತ ಮಾಡಿದ್ದಾರೆ ಅಧಿಕಾರಿಗಳು. ತನ್ನದೇ ಸಾಲದ ಹಣದಿಂದ ಬೈಕ್ ಖರೀದಿಸಿದ್ದಕ್ಕೆ ಒದಗಿದ ದುರ್ಗತಿ ಇದು. ವೇತನ ಹೆಚ್ಚಳ ಕಡಿತಕ್ಕೆ ನೀಡಿದ್ದು ಕ್ಷುಲ್ಲಕ ಕಾರಣ. ಇಲ್ಲಿ ಮೇಲಧಿಕಾರಿಗಳಿಗೆ ಮೂಮೂಲು ಕೊಡದಿದ್ದುದೇ ಆತ ಮಾಡಿದ ತಪ್ಪು.
ಡೀಸೆಲ್ನಲ್ಲಿ ಕಮಿಷನ್?: ಕೆಎಸ್ಆರ್ಟಿಸಿ ಬಸ್ಗಳಿಗೆ ಡೀಸೆಲ್ ತುಂಬಿಸುವಲ್ಲಿ ನೌಕರರಿಗೆ ಕಮಿಷನರ್ ಹೋಗುತ್ತಾ? ಇಂಥದ್ದೊಂದು ಹುಳ ಕೇಂದ್ರ ಕಚೇರಿಯ ಅಧಿಕಾರಿಗಳ ತಲೆ ಕೊರೆಯುತ್ತಿದೆ.
ನ.27ರಂದು ಮಂಗಳೂರು ವಿಭಾಗೀಯ ಕಚೇರಿಯಲ್ಲಿ ಬೆಂಗಳೂರಿನ ಸಿಬ್ಬಂದಿ ಮತ್ತು ಪರಿಸರ ನಿರ್ದೇಶಕರ ಉಪಸ್ಥಿತಿಯಲ್ಲಿ ಸಭೆ ನಡೆದಿದೆ.
ಈ ಸಭೆಯಲ್ಲಿ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಬಸ್ಗೆ ತುಂಬಿಸುವ ಡೀಸೆಲ್ನಲ್ಲಿ ಕೆಎಂಪಿಎಲ್ (ಕಿಲೋ ಮೀಟರ್ ಪರ್ ಲೀಟರ್) ಕಡಿಮೆಯಾಗುತ್ತಿದೆ.
ಬೇರೆ ವಿಭಾಗಗಳಲ್ಲಿ ಬಸ್ಗಳಿಗೆ ಲೀಟರ್ಗಟ್ಟಲೆ ಡೀಸೆಲ್ ತುಂಬಿಸುತ್ತಾರೆ. ಇದಕ್ಕೆ ಬಂಕ್ವರು ದರದಲ್ಲಿ ರಿಯಾಯ್ತಿ ಮಾಡುತ್ತಾರೆ. ಆದರೆ, ಈ ವಿಭಾಗದಲ್ಲಿ ರಿಯಾಯ್ತಿ ಇಲ್ಲ.
ಹಾಗಾಗಿ ಕಮಿಷನ್ ನೌಕರರಿಗೆ ಸಿಗುತ್ತಿದೆಯೇ ಎಂದು ನಿರ್ದೇಶಕರು ಸಂಶಯಿಸಿದ್ದಾರೆ. ಇದಕ್ಕೆ ವಿಭಾಗದ ಅಧಿಕಾರಿಗಳು ತುಟಿ ಪಿಟಿಕ್ ಎನ್ನಲಿಲ್ಲ. ಹಾಗಾಗಿ ಈಗ ಡೀಸೆಲ್ ಕಮಿಷನ್ ಪಡೆಯುವ ವೃಥಾ ಆರೋಪವನ್ನು ನೌಕರರು ಹೊತ್ತುಕೊಳ್ಳಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

