ವೇದಿಕೆಯಲ್ಲಿಯೇ ಕುಸಿದು ಮೃತಪಟ್ಟ ಕಲಾವಿದ
ಮಂಗಳೂರು: ನಾಟಕ ಕಲಾವಿದ ವೇದಿಕೆಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಪ್ಪಳ ಅಂಬಾರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಲಕುಮಿ ತಂಡದ ಹಾಸ್ಯ ಕಲಾವಿದ ಧರ್ಮೇಂದ್ರ ಅಮೀನ್ (40) 'ಎಲ್ಯ ವಿಷಯ ಮಲ್ಲ ಮಲ್ಪೊಡ್ಚಿ' ನಾಟಕ ಪ್ರದರ್ಶಿಸುತ್ತಿದ್ದರು. ರಾತ್ರಿ 12 ಗಂಟೆ ವೇಳೆ ನಾಟಕದ ಮೂರನೇ ದೃಶ್ಯದಲ್ಲಿ ಸುಂದರ ಮಂದಾರ, ರವಿ ಸುರತ್ಕಲ್, ಧರ್ಮೇಂದ್ರ ಅಮೀನ್ ಅಭಿನಯ ನಡೆಯುತ್ತಿತ್ತು. ಡೈಲಾಗ್ ಹೇಳುತ್ತಿದ್ದಂತೆಯೇ ವೇದಿಕೆ ಹಿಂಭಾಗಕ್ಕೆ ಸರಿಯಲು ಮುಂದಾದರು. ತೀವ್ರ ಎದೆನೋವು ಎಂದು ಸಹ ಕಲಾವಿದರಲ್ಲಿ ಹೇಳಿಕೊಂಡರು. ತಕ್ಷಣ ನವೀನ್ ಶೆಟ್ಟಿ ಅಳಕೆ ಮತ್ತಿತರರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರು ಆದರೆ ದಾರಿ ಮಧ್ಯೆ ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಧರ್ಮೇಂದ್ರ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರ ನಾಟಕ ತಂಡದ ಮೂಲಕ ತುಳು ರಂಗಭೂಮಿಗೆ ಪ್ರವೇಶ ಪಡೆದಿದ್ದರು. ಬಳಿಕ ಲಕುಮಿ ತಂಡದಲ್ಲಿ ಹತ್ತು ವರ್ಷ ಕಲಾವಿದರಾಗಿ ದುಡಿದಿದ್ದರು. ಹಾಸ್ಯ ಪಾತ್ರಗಳಿಂದ ಗಮನ ಸೆಳೆದಿದ್ದರು. ಸಿನಿಮಾ, ಧಾರಾವಾಹಿಗಳಲ್ಲಿಯೂ ಸಣ್ಣ ಪುಟ್ಟ ಪಾತ್ರ ಮಾಡಿದ್ದರು. ಮೃತರಿಗೆ ತಾಯಿ, ಪತ್ನಿ ಮತ್ತು ಒಂದು ವರ್ಷದ ಮಗು ಇದ್ದಾರೆ. ಕಲಾವಿದನ ನಿಧನಕ್ಕೆ ತುಳು ರಂಗಭೂಮಿ ಕಲಾವಿದರು ಕಂಬನಿ ಮಿಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

