ದಕ್ಷಿಣ ಕನ್ನಡ

ಗೀತಾ ಶೆಟ್ಟಿಗೆ 3 ಚಿನ್ನದ ಪದಕ

Published On :

ಬಂಟ್ವಾಳ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ತೃತೀಯ ಘಟಿಕೋತ್ಸವದಲ್ಲಿ ಗೀತಾ ಶೆಟ್ಟಿ ಎಸ್. 'ಹಣ್ಣು ವಿಜ್ಞಾನ' ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಇವರು ಬಂಟ್ವಾಳ ತಾಲೂಕು ಮೂಡಪಡುಕೋಡಿ ಗ್ರಾಮದ ಸೇವಾ ಸೀತಾರಾಮ ಶೆಟ್ಟಿ ಪುತ್ರಿ.
ಇಂದು 'ಬೇಲೆ ಕಲ್ವೆರ್‌' ನಾಟಕ ಪ್ರದರ್ಶನ
ಮೂಲ್ಕಿ: ಕಿನ್ನಿಗೋಳಿಯ ವಿಜಯ ಕಲಾವಿದರಿಂದ ಡಿ.27ರಂದು ಸಂಜೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಹರೀಶ್ ಪಡುಬಿದ್ರಿ ರಚಿತ ರಾಜೇಶ್ ಕೆಂಚನಕೆರೆ ನಿರ್ದೇಶನದ 'ಬೇಲೆ ಕಲ್ವೆರ್‌' ತುಳು ಹಾಸ್ಯ ನಾಟಕ ಪ್ರದರ್ಶಿಸಲ್ಪಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಗ್ರಾಪಂ ಮಾಜಿ ಅಧ್ಯಕ್ಷ ಕಮಲಾಕ್ಷ ನಾಯಕ್ ನಿಧನ
ಬಂಟ್ವಾಳ: ಸಜೀಪಮೂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಅಖಿಲ ಭಾರತ ಕೋಟೆ ಕ್ಷತ್ರಿಯ ಸಂಘ ಪಾಣೆಮಂಗಳೂರು ಘಟಕ ಗೌರವ ಅಧ್ಯಕ್ಷರಾಗಿದ್ದ ಕಾರಾಜೆ ನಿವಾಸಿ ಕಮಲಾಕ್ಷ ನಾಯಕ್ (66) ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. 20 ವರ್ಷಗಳಿಂದ ಗ್ರಾ.ಪಂ. ಸದಸ್ಯರಾಗಿ, ಒಂದು ಅವಧಿಯಲ್ಲಿ ಉಪಾಧ್ಯಕ್ಷರಾಗಿ, ಇನ್ನೊಂದು ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಕಾರಾಜೆ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಗೌರವ ಅಧ್ಯಕ್ಷರು, ಬೊಳ್ಳಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದರು. ಮೃತರು ಪತ್ನಿಯನ್ನು ಅಗಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ತಾ.ಪಂ. ಮಾಜಿ ಸದಸ್ಯೆ ಸುಶೀಲಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಶೋಬಿತ್ ಪೂಂಜ ಸಹಿತ ಸ್ಥಳೀಯ ಸದಸ್ಯರು, ಪ್ರಮುಖರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ಗೂಂಡಾ ಕಾಯ್ದೆ ಹಾಕಿ
ಮಂಗಳೂರು:  ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿ ಅಪಹರಣ, ಅತ್ಯಾಚಾರ, ಬ್ಲೂಫಿಲಂ ಚಿತ್ರೀಕರಣ ನಡೆಸಿದ  ಆರೋಪಿಗಳಿಗೆ ಗೂಂಡಾ ಕಾಯ್ದೆ ಅಳವಡಿಸಬೇಕು ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಗ್ರಹಿಸಿದ್ದಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮಹಿಳೆಯರು ನಿರ್ಭೀತಿಯಿಂದ ಸಂಚರಿಸುವಂತಾಗಲು ಪೊಲೀಸರು ಅವಕಾಶ ಮಾಡಿಕೊಡಬೇಕು. ಇಂಥ ಘಟನೆ ತಡೆಗಟ್ಟಲು ಪೊಲೀಸರು ಹದ್ದುಬಸ್ತಿನ ಕಣ್ಣಿಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಂಝ ಮಲಾರ್‌ಗೆ ಪ್ರಶಸ್ತಿ
ಮಂಗಳೂರು: ಯುವ ಕತೆಗಾರ ಹಂಝ ಮಲಾರ್ ಅಜ್ಜಿ ಸಾಕಿದ ಪುಳ್ಳಿ ಕಥಾಸಂಕಲನಕ್ಕೆ ಭಟ್ಕಳದ ಡಾ.ಸೈಯ್ಯದ್ ಜಮೀರುಲ್ಲಾ ಷರೀಫ್ ಪ್ರತಿಷ್ಠಾನ ಪ್ರಶಸ್ತಿ ಲಭಿಸಿದೆ. ಬ್ಯಾರಿ ಸಾಹಿತ್ಯ ಪ್ರಶಸ್ತಿ, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಅರಳು ಪ್ರಶಸ್ತಿ ಪಡೆದಿರುವ ಹಂಝ, ಬ್ಯಾರಿ ಸಾಹಿತ್ಯ ಆಕಾಡೆಮಿ ಗೌರವ ಪ್ರಶಸ್ತಿ ಪಡೆದಿದ್ದಾರೆ.
29ರಂದು ಗಾನ- ನೃತ್ಯ ಸಂಭ್ರಮ
ಮೂಲ್ಕಿ: ಕಿನ್ನಿಗೋಳಿಯ ಡಮರು ನಾಟ್ಯಾಲಯ ಮತ್ತು ಸಂಗೀತ ಕೇಂದ್ರದ ವರ್ಧಂತ್ಯುತ್ಸವ ಹಾಗೂ ಗಾನ- ನೃತ್ಯ ಸಂಭ್ರಮ ಡಿ.29ರಂದು ಸಂಜೆ ಯುಗಪುರುಷದ ಸಭಾಭವನದಲ್ಲಿ ಜರುಗಲಿದೆ ಎಂದು ಡಮರು ನಾಟ್ಯಾಲಯ ಕೇಂದ್ರದ ಶಾಮ್ ಎಸ್. ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ಣಾಟಕ ಕಲಾ ತಿಲಕ ಉಳ್ಳಾಲ ಮೋಹನ್ ಕುಮಾರ್ ಅವರಿಗೆ ಅಭಿನವ ಭರತ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಲಿದ್ದು ಶ್ರೀ ಕ್ಷೇತ್ರ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಯುಗಪುರುಷದ ಕೆ. ಭುವನಾಭಿರಾಮ ಉಡುಪ ಭಾಗವಹಿಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.