ದಕ್ಷಿಣ ಕನ್ನಡ

ವೃತ್ತಿ ಪ್ರೀತಿಸಿ, ಬದುಕಲು ಕಲಿತರೆ ಯಶಸ್ಸು: ಡಾ. ಉಪಾಧ್ಯಾಯ

Published On :

ಉಡುಪಿ: ಪರಮಾತ್ಮ ಪ್ರತಿಯೊಬ್ಬರಿಗೂ ಪ್ರತ್ಯೇಕ ಅಣತಿ ನೀಡಿರುತ್ತಾನೆ. ಅದನ್ನು ಸರಿಯಾಗಿ ಪಾಲಿಸಿ, ವೃತ್ತಿಯನ್ನು ಪ್ರೀತಿಸಿ, ಬದುಕುವುದನ್ನು ಕಲಿತರೇ ಯಶಸ್ಸು ಖಂಡಿತ ಸಿಗುತ್ತದೆ ಎಂದು ಹಿರಿಯ ಭಾಷಾ ಸಂಶೋಧಕ ಡಾ. ಯು.ಪಿ. ಉಪಾಧ್ಯಾಯ ಅವರು ಹೇಳಿದ್ದಾರೆ.
 ಅವರು ಗುರುವಾರ ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ತಮ್ಮ ಅಭಿಮಾನಿಗಳಿಂದ ಅಭಿವಂದನೆ ಸ್ವೀಕರಿಸಿ ಮಾತನಾಡಿದರು.
 ರಾಜಕಾರಣಿಗಳಿಂದ ದೇಶ ಉದ್ಧಾರ ಆಗುತ್ತದೆ ಎಂಬ ಭ್ರಮೆ ಬೇಡ, ಅವರಿಂದ ದೇಶ ಉದ್ಧಾರ ಆಗುವುದಿಲ್ಲ ಎನ್ನುವುದನ್ನು ಅವರು ಈಗಾಗಲೇ ತೋರಿಸಿಕೊಟ್ಟಾಗಿದೆ, ದೇಶದ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸಬೇಕು, ಆಗ ಮಾತ್ರ ದೇಶ ತನ್ನಿಂತಾನೇ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ, ಬದುಕು ಮತ್ತು ವೃತ್ತಿಯನ್ನು ಪ್ರೀತಿಸಿ ಎಂದವರು ಕರೆ ನೀಡಿದರು.  
ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ ರೈ, ತುಳು ನಿಘಂಟಿಗೆ ಪರಿಪೂರ್ಣತೆ ನೀಡಿರುವ ಉಪಾಧ್ಯಾಯ ದಂಪತಿ ಜಾತಿ, ಮತ, ಧರ್ಮದ ಎಲ್ಲೇ ಮೀರಿ ಕಾರ್ಯ ನಿರ್ವಹಿಸಿದ್ದಾರೆ. ಉಪಾಧ್ಯಾಯ ದಂಪತಿಯಲ್ಲಿ ಇಂದಿಗೂ ಕಾಣಬಹುದಾದ ಸಜ್ಜನಿಕೆ, ಪ್ರೀತಿ, ವಿಶ್ವಾಸ ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಲ್ಲವಾಗಿರುವುದು ಬೇಸರದ ಸಂಗತಿ ಎಂದರು.  ಜಾನಪದ ತಜ್ಞ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ್ ಉಪಾಧ್ಯರನ್ನು ಅಭಿನಂದಿಸಿ ಮಾತನಾಡಿದರು. ಬೆಂಗಳೂರು ಸಂಸ್ಕೃತ ವಿವಿಯ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇದ್ದರು. ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ ನಿರೂಪಿಸಿದರು. ಅವರ ಅಭಿನಂದನಾ ಗ್ರಂಥ 'ಕೊಪ್ಪರಿಗೆ'ಯನ್ನು ಬಿಡುಗಡೆ ಮಾಡಲಾಯಿತು. ಮೊಗಸಾಲೆ ಪ್ರಕಾಶನಕ್ಕೆ ಚಾಲನೆ ನೀಡಲಾಯಿತು, ತುಳ ನಿಘಂಟು ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.