ದಕ್ಷಿಣ ಕನ್ನಡ

ಕೂಲಿ ಅರಸಿ ಬಂದು ಕೊಲೆಯಾದ ಕಮಲ

Published On :

ಸುಬ್ರಹ್ಮಣ:  ಕೂಲಿ ಅರಸುತ್ತಾ ಬಂದ ಜೋಡಿ ಪೈಕಿ ಕಮಲ ಎಂಬಾಕೆ ಮುರುಳ್ಯ ಸಮೀಪದ ಕೊಡ್ಯಕಂಡ ಎಂಬಲ್ಲಿ ತೋಟದ ಮನೆಯಲ್ಲಿ ಸೋಮವಾರ ಕೊಲೆಯಾಗಿದ್ದು, ಆಕೆ ಮೂಲತಃ ಗುತ್ತಿಗಾರು ಸಮೀಪದ ದೇವ ಎಂಬಲ್ಲಿನ ನಿವಾಸಿ ಎನ್ನಲಾಗಿದೆ.
ಮೃತ ಕಮಲಳ ಶವ ಪರೀಕ್ಷೆ ವೇಳೆ ಆಕೆಯ ಕುತ್ತಿಗೆಯಲ್ಲಿ ಕೈ ಬೆರಳಿನ ಅಚ್ಚು ಕಂಡು ಬಂದಿದ್ದು, ಬಾಯಿಯಲ್ಲಿ ರಕ್ತ ಬಂದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ  ಕುತ್ತಿಗೆ ಹಿಸುಕಿ ಕೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲ ತಿಳಿಸಿವೆ.
ಕಮಲ ಹಿನ್ನೆಲೆ: ಗುತ್ತಿಗಾರು ಸಮೀಪದ ದೇವ ಎಂಬಲ್ಲಿನ ಕಾಲನಿ ನಿವಾಸಿ, ಮಂತ್ರವಾದಿ ಚೋಮ ಎಂಬವರ ಮಗಳಾಗಿರುವ ಈಕೆ, ಸುಮಾರು 25 ವರ್ಷಗಳ ಹಿಂದೆ ಕಾಣಿಯೂರಿನ ಬಾಬು ಎಂಬವರೊಂದಿಗೆ ಮದುವೆಯಾಗಿದ್ದಳು. ಬಳಿಕ ಸಕಲೇಶಪುರದ ತಾಲೂಕಿನ ಶಾಂತಿಕಲ್ಲು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭ ಪತಿ ಮರದಿಂದ ಬಿದ್ದು ಮೃತ ಪಟ್ಟಿದ್ದು, ಬಳಿಕ ಒಂದುವರೆ ವರ್ಷದ ಗಂಡು ಮಗು ಕೃಷ್ಣನನ್ನು ತಂದೆ ಮನೆಯಲ್ಲಿ ಬಿಟ್ಟು ಅದೇ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆಗೆ ಕೆಲಸ ಮಾಡುತ್ತಿದ್ದ ರವಿ ಎಂಬಾತನ ಪರಿಚಯವಾಗಿ, ಗಂಡ ಹೆಂಡತಿಯಂತೆ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಕೊಲೆಯಾದ ಕಮಲಳ ಮೃತದೇಹವನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗಾಗಿ ಇರಿಸಲಾಗಿದ್ದು, ಶವ ಪರೀಕ್ಷೆಯ ಬಳಿಕ ಮೃತದೇಹವನ್ನು ಆಕೆಯ ತಂದೆ ಮತ್ತು ಮಗನ ಸುಪರ್ದಿಗೆ ನೀಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಸೋಮವಾರ ಕಮಲಳ ಸಾವಿನ ಬಳಿಕ ರವಿ ಬೆಳಗ್ಗೆ 10 ಗಂಟೆಗೆ ಆಟೋ ರಿಕ್ಷಾದಲ್ಲಿ ಗುತ್ತಿಗಾರು ಸಮೀಪದ ವಳಲಂಬೆಗೆ ಬಂದು ಕಮಲಳ ಮಗ ಕೃಷ್ಣನನ್ನು ಭೇಟಿಯಾಗಿ ನಿನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಬಸ್‌ನಲ್ಲಿ ಸುಳ್ಯದತ್ತ ಹೋಗಿದ್ದಾನೆ. ರವಿ ಮೂಲತಃ ವಿರಾಜಪೇಟೆಯ ಮಂಜಲ್ಪಾಡಿಯವನಾಗಿದ್ದಾನೆ ಮತ್ತು ತಾನು ಕಮಲಳನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.