ದಕ್ಷಿಣ ಕನ್ನಡ

ಬರಹದ ತುಡಿತಕ್ಕೆ ಬರವಣಿಗೆ ಸಹಕಾರಿ: ಅನುಪಮಾ

Published On :

ಮಂಗಳೂರು: ಹೆಣ್ಣಿಗೆ ಕವನ, ಸಾಹಿತ್ಯ, ಲೇಖನಗಳು ಬರಹದ ತುಡಿತವನ್ನು ಬರವಣಿಗೆ ಮೂಲಕ ಹೊರಹಾಕಲು ದೊರಕಿದ ಅವಕಾಶ ಎಂದು ವಿಮರ್ಶಕಿ ಡಾ.ಎಚ್.ಎಸ್. ಅನುಪಮಾ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ಭಾನುವಾರ ಉರ್ವಸ್ಟೋರಿನ ಸಾಹಿತ್ಯ ಸದನದಲ್ಲಿ ಕೃತಿಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯದಲ್ಲಿ ತಮ್ಮ ಮನಸ್ಸಿನ ತುಡಿತಗಳನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳುವ ಅವಕಾಶವಿದೆ. ಹಿಂದೆ ಮಹಿಳೆಗೆ ಜ್ಞಾನದ ಮೇಲಿನ ಹಕ್ಕು ಕೊಟ್ಟಿರಲಿಲ್ಲ, ಪರಿಣಾಮ ಹೆಚ್ಚಿನ ಲೇಖನಗಳು ಪುರುಷ ಸಂವೇದಿಯಾಗಿ ಬಂದಿವೆಯೇ ಹೊರತು ಅದರಲ್ಲಿ ಹೆಣ್ಣಿನ ಪಾತ್ರ ಕಂಡುಬರುವುದಿಲ್ಲ ಎಂದರು.
ಮಾಧ್ಯಮದಲ್ಲಿ ಪ್ರಕಟವಾಗುವ ಅಂಕಣಗಳಲ್ಲಿ ಲೇಖಕರಿಗೆ ಪದಗಳ ಮಿತಿ ನೀಡಿರುವುದು ಸರಿಯಲ್ಲ. ಯಾಕೆಂದರೆ ಲೇಖಕರಿಗೆ ವಿಷಯವನ್ನು ಪೂರ್ತಿಯಾಗಿ ತಿಳಿಸಲಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಡೋಜ ಡಾ.ಸಾ.ರಾ. ಅಬೂಬಕ್ಕರ್ ಅವರ ಲೇಖನಗಳ ಸಂಕಲನ 'ಚಿಂತೆ-ಚಿಂತನ', ಅನುಪಮಾ ಪ್ರಸಾದ್ ಅವರ ಕಥಾ ಸಂಕಲನ 'ದೂರತೀರ', ಜ್ಯೋತಿ ಚೇಳೈರ್ ಅವರ ಅಂಕಣ ಬರಹ 'ಪನ್ನತಿಕೆ' ಬಿಡುಗಡೆಗೊಂಡಿತು.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡಾ. ಪಾರ್ವತಿ ಜಿ. ಐತಾಳ್, ಡಾ. ರಾಜಶ್ರೀ,  ಬಿ.ಎಂ. ರೋಹಿಣಿ ಮತ್ತಿತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.