ಹೋಮ್ ಸ್ಟೇ ಸಂಸ್ಕೃತಿ ಬೆಂಬಲಿಸುವ ಬುದ್ಧಿಜೀವಿಗಳೇ ಸ್ನೇಹಾ ಸಾವಿಗೆ ಕಾರಣ
ಮಂಗಳೂರು: ಹೋಮ್‌ಸ್ಟೇ, ಅನೈತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಬುದ್ಧಿಜೀವಿಗಳು, ವಿದ್ಯಾರ್ಥಿಗಳು ಡ್ರಗ್ಸ್ ಜಾಲದಲ್ಲಿ ಬಲಿ ಬೀಳಲು ಕಾರಣರಾಗಿದ್ದಾರೆ ಎಂದು ಹೋಮ್‌ಸ್ಟೇ ದಾಳಿ ರೂವಾರಿ ಜೈಲ್‌ನಲ್ಲಿರುವ ಹಿಂಜಾವೆ ಮುಖಂಡ ಸುಭಾಷ್ ಪಡೀಲ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುಭಾಷ್, ಮಂಗಳೂರಲ್ಲಿ ವಿದ್ಯಾರ್ಥಿನಿಯರು ಮಾದಕ ದ್ರವ್ಯ ಸೇವನೆ ಚಟಕ್ಕೆ ಬಲಿಯಾಗುತ್ತಾರೆ. ಹಣಕ್ಕಾಗಿ ಹೋಮ್‌ಸ್ಟೇಗಳಲ್ಲಿ ತಂಗಿ ಅನೈತಿಕ ಚಟುವಟಿಕೆ ನಡೆಸಲು ಹಿಂಜರಿಯುವುದಿಲ್ಲ. ವಿದ್ಯಾರ್ಥಿನಿಯರು, ಪಬ್, ಹೋಮ್‌ಸ್ಟೇಗಳಲ್ಲಿ ಡ್ರಗ್ಸ್ ಸೇವನೆ ವಿರೋಧಿಸಿ ಹಿಂಜಾವೇ ದಾಳಿ ನಡೆಸಿದರೆ ವಿಚಾರವಾದಿಗಳು ಖಂಡಿಸುತ್ತಾರೆ. ಈ ಮೂಲಕ ವಿದ್ಯಾರ್ಥಿಗಳು ಡ್ರಗ್ಸ್ ಜಾಲದಲ್ಲಿ ಬೀಳಲು ಕಾರಣವಾಗುತ್ತಾರೆ. ವಿದ್ಯಾರ್ಥಿಗನ್ನು ಈ ಜಾಲಕ್ಕೆ ಎಳೆಯುವರನ್ನು ತನಿಖೆಗೆ ಒಳಪಡಿಸಿದರೆ ಯುವಸಮೂಹ ಹಾದಿ ತಪ್ಪುವುದನ್ನು ತಪ್ಪಿಸಬಹುದು. ಹೋಮ್‌ಸ್ಟೇ, ಪಬ್‌ಗಳಲ್ಲಿ ವಿದ್ಯಾರ್ಥಿನಿಯರ ದುರ್ಬಳಕೆ ಮಾಡುವುದನ್ನು ತಡೆದ ಬಗ್ಗೆ ನಮಗೆ ಸಮಾಧಾನ ಇದೆ ಎಂದು ತಿಳಿಸಿದ್ದಾರೆ.
ಹೋಮ್ ಸ್ಟೇಗಳಲ್ಲಿ ಡ್ರಗ್ಸ್ ಮಾಫಿಯಾ: ಸತ್ಯಜಿತ್ ಆರೋಪ
ಮಂಗಳೂರು: ಹೋಮ್‌ಸ್ಟೇ ದಾಳಿ ಪ್ರಕರಣದಲ್ಲಿ ಪೊಲೀಸರು ಡ್ರಗ್ಸ್ ಮಾಫಿಯಾ ಕುರಿತು ಸೂಕ್ತ ತನಿಖೆ ನಡೆಸುವಂತೆ ಹಿಂದು ಜಾಗರಣ ವೇದಿಕೆ ಆಗ್ರಹಿಸಿತ್ತು. ಆದರೆ ಪೊಲೀಸರು ಉದಾಸೀನ ತೋರಿದ್ದಾರೆ, ಸ್ನೇಹ ಆತ್ಮಹತ್ಯೆಯಂಥ ಪ್ರಕರಣ ಮರುಕಳಿಸದಿರಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹೋಮ್ ಸ್ಟೇ ಪ್ರಕರಣದಲ್ಲಿ ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಬೊಬ್ಬಿರಿದಿದ್ದ ಮಹಿಳಾ ಸಂಘಟನೆಗಳು ಈಗ ಏಕೆ ಸೊಲ್ಲು ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸ್ನೇಹ ಪ್ರಕರಣ ಬಳಿಕ ಜನರೂ ಡ್ರಗ್ಸ್ ಮಾಫಿಯ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಿಶೋರ್ ಕುಮಾರ್, ಅಮಿತ್, ಪ್ರವೀಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

