ಇಂದಿನಿಂದ 'ಮಳೆಬಿಲ್ಲು' ನಾಟಕ ಹಬ್ಬ
ಮಂಗಳೂರು: ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ, ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ವತಿಯಿಂದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಫೆ. 6 ರಿಂದ 10ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಮಕ್ಕಳ ನಾಟಕ ಹಬ್ಬ 'ಮಳೆಬಿಲ್ಲು' ನಡೆಯಲಿದೆ.
ನಾಟಕ ಹಬ್ಬವನ್ನು ಚಲನಚಿತ್ರ ನಿರ್ದೆಶಕ ಸದಾನಂದ ಸುವರ್ಣ ಉದ್ಘಾಟಿಸುವರು. ರಂಗಭೂಮಿ ತಜ್ಞರಾದ ಮೋಹನ್ ಸೋನಾ, ಉದ್ಯಾವರ ನಾಗೇಶ್ ಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಾದೇಶಿಕ ಕೇಂದ್ರದ ನಿರ್ದೆಶಕ ಸುರೇಶ್ ಆನಗಳ್ಳಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಟಕ ವಿವರ: ಫೆ. 6ರಂದು ಡಾ. ಚಂದ್ರಶೇಖರ ಕಂಬಾರ ಅವರ ಪರಿಸರ ಕಾಳಜಿಯ 'ಪುಷ್ಪರಾಣಿ' ನಾಟಕವನ್ನು ಮೈಸೂರಿನ ಜೆಎಸ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ನಡೆಸಿಕೊಡುವರು. ಚಂದ್ರಶೇಖರಾಚಾರ್ ನಿರ್ದೇಶಿಸಿದ್ದಾರೆ. ಫೆ. 7 ರಂದು ರಾಷ್ಟ್ರಕವಿ ಕುವೆಂಪು ಕಥೆಯನ್ನಾಧರಿಸಿದ 'ನರಿಗಳಿಗೇಕೆ ಕೋಡಿಲ್ಲ' ನಾಟಕವನ್ನು ಬೆಂಗಳೂರು ತಂಡ ನಡೆಸಿಕೊಡುವರು. ಎನ್. ಮಂಗಳಾ ನಿರ್ದೇಶಿಸುವರು. ಫೆ. 8ರಂದು ಬಿ. ಸುರೇಶ್ ರಚನೆಯ ಯುದ್ಧವಿರೋಧಿ ಆಶಯದ ರೆಕ್ಕೆ ಕಟ್ಟುವಿರಾ ನಾಟಕ ಮಣಿಪಾಲದ ಚಿನ್ನಾರಿ ತಂಡದಿಂದ ನಡೆಯಲಿದೆ. ಫೆ. 9ರಂದು 2 ನಾಟಕಗಳು ಪ್ರದರ್ಶನಗೊಳ್ಳಲಿದೆ. ಧಾರವಾಡದ ಗೊಂಬೆಮನೆ ಪ್ರಸ್ತುತಪಡಿಸುವ ರಜನಿ ಗರೂಡ ನಿರ್ದೇಶನದ ನಾಟಕ 'ಅಂಚೆಮನೆ ಗೊಂಬೆಯಾಟ' ಹಾಗೂ ಡಾ. ಶಿವರಾಮ ಕಾರಂತ ರಚಿಸಿದ ನಾಟಕ 'ಪುಟ್ಟಿಯೂ ಸಿಹಿಮೂಲಂಗಿಯೂ' ಕಿನ್ನರಮೇಳ ಪ್ರದರ್ಶಿಸುವರು. ಪ್ರಮೋದ್ ಶಿಗ್ಗಾಂವ್ ನಿದೇಶಿಸಿದ್ದಾರೆ. ಫೆ.10 ರಂದು ಶೇಕ್ಸ್‌ಪಿಯರ್‌ನ ನಾಟಕ ವೈದೇಹಿ ಅನುವಾದ ಮಾಡಿರುವ 'ಧಾಂ..ಧೂಂ..ಸುಂಟರಗಾಳಿ' ನಾಟಕವನ್ನು ಮೈಸೂರಿನ ತಂಡ ನಡೆಸಿಕೊಡುವರು. ಜೀವನ್ ರಾಂ ಸುಳ್ಯ ನಿದೇಶಿಸಿರುತ್ತಾರೆ. ಮಕ್ಕಳ ಜತೆ ಪಾಲ್ಗೊಳ್ಳುವ ಪೋಷಕರಿಗೂ ಉಚಿತ ಪ್ರವೇಶ. (ಮಾಹಿತಿಗೆ- 8970214657ನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ನೃತ್ಯ ಸಂಯೋಜಕಿ ಮಂಜುಳ, ರಾಗತರಂಗದ ಪ್ರಕಾಶ್ ಶೆಣೈ, ಕಲಾವಿದರಾದ ರಂಗನಾಥ್, ವಿದ್ದು ಉಚ್ಚಿಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

