ದಕ್ಷಿಣ ಕನ್ನಡ

ಡ್ರಗ್ಸ್ ಮಾಫಿಯಾ ತಡೆಯಲು ಜಿಲ್ಲಾಡಳಿತ ವಿಫಲ: ಸಂತ್ರಸ್ತೆ ತಂದೆ ಆರೋಪ

Published On :

ಮಂಗಳೂರು: ಪ್ರೌಢಶಾಲೆ ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿ ನಗರದಲ್ಲಿ ಡ್ರಗ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ನಗರದ ಪಬ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ ಹೆಸರಲ್ಲಿ ಮಾದಕ ದ್ರವ್ಯ ಬಳಸುತ್ತಿದ್ದಾರೆ ಎಂದು ಮಾದಕ ಪಿಡುಗಿನಿಂದ ಸಂತ್ರಸ್ತೆಯ ತಂದೆ ಅರ್ಜುನ್ ಆರೋಪಿಸಿದ್ದಾರೆ.
 ಪಯಸ್ವಿನಿ (ಹೆಸರು ಬದಲಿಸಲಾಗಿದೆ) ತಂದೆ ಅರ್ಜುನ್ ನಗರದಲ್ಲಿ ಹೆಚ್ಚುತ್ತಿರುವ ಮಾದಕ ಮಾಫಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಾದಕ ಜಾಲ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಬುಧವಾರ ಸುದ್ದಿಗಾರರ ಬಳಿ ಆರೋಪಿಸಿದರು.
ಚಾಕಲೇಟ್, ಪಿಜ್ಜಾದಲ್ಲಿ ವೈಟ್ನರ್, ಮಾದಕ ವಸ್ತುಗಳನ್ನಿಟ್ಟು ವಿದ್ಯಾರ್ಥಿನಿಯರಿಗೆ ತಿಳಿಯದಂತೆ ನೀಡಲಾಗುತ್ತಾದೆ. ಇದಕ್ಕೆ ದಾಸರಾದ ಬಳಿಕ ಅವರ ಮೇಲೆ ಎಲ್ಲ ರೀತಿಯ ದೌರ್ಜನ್ಯ ನಡೆಸುತ್ತಾರೆ ಎಂದು ಆರೋಪಿಸಿದರು.
 'ಮಾಜಿ ಮೇಯರ್ ಅಶ್ರಫ್ ಪುತ್ರ ಅರಾಫ್ ಮತ್ತವರ ಜತೆಗಾರರು ನನ್ನ ಮಗಳು ಹತ್ತನೇ ತರಗತಿಯಲ್ಲಿರುವಾಗ ಮಾದಕ ದ್ರವ್ಯ ಸೇವನೆ ಚಟ ಹತ್ತಿಸಿದರು. ಪೊಲೀಸ್ ಕಮಿಷನರ್‌ಗೆ ದೂರು ನೀಡಿದರೂ  ಕ್ರಮ ಕೈಗೊಂಡಿಲ್ಲ' ಎಂದು ಕಿಡಿ ಕಾರಿದರು.
'ಮಗಳನ್ನು ಮಾದಕ ದ್ರವ್ಯ ಚಟದಿಂದ ಹೊರಬರುವಂತೆ ಮಾಡಲು ರು. 5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಬಿಜೆಪಿ ನಗರಾಧ್ಯಕ್ಷ ಶ್ರೀಕರ ಪ್ರಭು, ಬಜರಂಗದಳ ಸಂಚಾಲಕ ಶರಣ್ ಪಂಪ್‌ವೆಲ್ ತುಂಬಾ ನೆರವು ನೀಡಿದರು. ಮಗಳು ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಈಗ ಪಿಯುಸಿ ಕಲಿಯುತ್ತಿದ್ದು, ಎಂಜಿನಿಯರ್ ಆಗುವ ಆಸೆ ಹೊಂದಿದ್ದಾಳೆ' ಎಂದರು.  
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.