ದಕ್ಷಿಣ ಕನ್ನಡ

ಟಿಪ್ಪು ವಿವಿ- ಕಾಂಗ್ರೆಸ್ ಸಮರ್ಥನೆ ಯಾಕಿಲ್ಲ?: ದ್ವಾರಕಾನಾಥ್

Published On :

ಮಂಗಳೂರು: ಟಿಪ್ಪು ವಿರುದ್ಧ ಮಾತನಾಡುವವರು ಉಂಡ ಮನೆಗೆ ದ್ರೋಹ ಬಗೆದಂತೆ. ಕಾಂಗ್ರೆಸ್ ಹಾಗೂ ಬಿಜೆಪಿ ಇದನ್ನು ಚುನಾವಣಾ ಸಂದರ್ಭ ವಿವಾದಗೊಳಿಸಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿವೆ. ಅಲ್ಲದಿದ್ದರೆ ಕಾಂಗ್ರೆಸ್ ಯಾಕೆ ಟಿಪ್ಪು ವಿವಿಯನ್ನು ಸಮರ್ಥಿಸಿ ಹೇಳಿಕೆ ನೀಡುತ್ತಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗ ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ಪ್ರಶ್ನಿಸಿದ್ದಾರೆ.
ಯುನಿವರ್ಸಲ್ ವೆಲ್‌ಫೇರ್ ಫೋರಂ ಕರ್ನಾಟಕ ಇದರ ಜಿಲ್ಲಾ ಘಟಕ ಗುರುವಾರ ನಗರದ ಪುರಭವನದಲ್ಲಿ ಏರ್ಪಡಿಸಿದ ಟಿಪ್ಪು ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಟಿಪ್ಪುವನ್ನು ವಿರೋಧಿಸುವ ಪ್ರಮೋದ್ ಮುತಾಲಿಕ್, ಗೋ ಮಧುಸೂದನ್, ಚಿದಾನಂದಮೂರ್ತಿ ಮತ್ತಿತರರು ಬ್ರಿಟೀಷರ ಜತೆಗಿದ್ದವರು. ಇವರಲ್ಲಿ ಸತ್ಯವನ್ನು ತಿರುಚುವ ನಾಝಿ ಮತ್ತು ಗೋಬೆಲ್‌ರ ಗುಣವಿದೆ ಎಂದು ಡಾ.ಸಿ.ಎಸ್. ದ್ವಾರಕಾನಾಥ್ ವ್ಯಂಗ್ಯವಾಡಿದರು.
 ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಟಿಪ್ಪು ಹಿಂದೂ ವಿರೋಧಿ ಮತ್ತು ದೇಶ ವಿರೋಧಿ ವಿಚಾರದಲ್ಲಿ ವಾದ ಮಂಡನೆಗೆ ಪ್ರತ್ಯುತ್ತರ ನೀಡಿದ ಡಾ.ದ್ವಾರಕಾನಾಥ್, ಟಿಪ್ಪು ಹಿಂದೂ ವಿರೋಧಿ, ಮತಾಂತರ ಮಾಡಿರುವುದು ಎಲ್ಲವೂ ಸುಳ್ಳು. ಟಿಪ್ಪುವನ್ನು ದೇಶಪ್ರೇಮಿ ಅಲ್ಲ, ಸ್ವಾರ್ಥಿ ಎನ್ನುವವರು ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಹೋರಾಟವನ್ನು ಸ್ವಾರ್ಥಕ್ಕೆ ಎನ್ನುತ್ತಾರೆಯೇ ಎಂದು ಪ್ರಶ್ನಿಸಿದರು.
 ಮಂಗಳೂರು ವಿವಿ ಇತಿಹಾಸ ವಿಭಾಗ ಸಹಪ್ರಾಧ್ಯಾಪಕ ಡಾ.ಬಾರ್ಕೂರು ಉದಯ ಮಾತನಾಡಿ, ಟಿಪ್ಪು ವಿಚಾರವನ್ನು ಗತ ಇತಿಹಾಸ ಎಂದು ನೋಡಬೇಕೇ ವಿನಃ ಆಧುನಿಕತೆಯಲ್ಲಿ ಅದರ ಬಗ್ಗೆ ಮಾತನಾಡಿದರೆ ಪ್ರಯೋಜನವಾಗದು. ಈಗ ಸಮಾಜದ ಸುಧಾರಣೆ ಹೇಗೆ ಎಂಬ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ಪತ್ರಕರ್ತ ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.
 ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಕೆಪಿಸಿಸಿ ಸದಸ್ಯ ಸುರೇಶ್ ಬಳ್ಳಾಲ್, ನಿವೃತ್ತ ಇತಿಹಾಸ ಉಪನ್ಯಾಸಕ ಪ್ರೊ.ಬಿ.ಎಂ.ಇಚ್ಲಂಗೋಡು, ಜೆಡಿಎಸ್ ಮೀನುಗಾರಿಕಾ ಘಟಕ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ, ವೆಲ್ಫೇರ್ ಪಾರ್ಟಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.