ನಕಲಿ ಜ್ಯೋತಿಷಿಗಳಿಬ್ಬರು ಪೊಲೀಸ್ ವಶಕ್ಕೆ
ಬೆಳ್ತಂಗಡಿ: ನಕಲಿ ಜ್ಯೋತಿಷಿಗಳಿಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮದ್ದಡ್ಕ ಸನಿಹ ಗುರುವಾರ ನಡೆದಿದೆ.
ಲಾಯಿಲ ಕನ್ನಾಜೆ ಮನೆಯ ರಾಘವೇಂದ್ರ ಹಾಗೂ ಮುತ್ತಪ್ಪ ಎಂಬುವರು ಸಾರ್ವಜನಿಕರಿಂದ ಹಲ್ಲೆಗೊಳಗಾಗಿ, ಪೊಲೀಸರ ವಶದಲ್ಲಿರುವವರು.
ಇವರು ಮದ್ದಡ್ಕ ಸಮೀಪದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯ ಬಶೀರ್ ಅವರ ಮನೆಗೆ ಹೋಗಿ ತಾವು ಜ್ಯೋತಿಷಿಗಳು ಎಂದು ಪರಿಚಯಿಸಿಕೊಂಡಿದ್ದಾರೆ.
ಬಶೀರ್ ದಂಪತಿ ದಾಂಪತ್ಯದ ನಡುವೆ ಒಡಕುಂಟಾಗಲು ಯಾರೋ ಮಾಟ ಮಾಡಿಸಿದ್ದಾರೆ ಎಂದು ನಂಬಿಸಿ ಮಾಟ ತೆಗೆಸಲು 3 ಸಾವಿರ ಕೊಡಬೇಕೆಂದು ಬೇಡಿಕೆ ಇಟ್ಟು, ಅಷ್ಟು ಹಣ ಪಡೆದಿದ್ದಾರೆ. ಕೇರಳದಲ್ಲಿ ಮಾಟ ಮಾಡಿಸಬೇಕು. ಹಂದಿಯ ತಲೆ ಕಡಿದು ಹಾಕಬೇಕು ಇದಕ್ಕೆಲ್ಲಾ ಇನ್ನೂ 24 ಸಾವಿರ ಸಿದ್ಧ ಮಾಡಿ ಇಡಿ. ಎರಡು ದಿನ ಬಿಟ್ಟು ಬರುವುದಾಗಿ ಹೇಳಿ ಹೋಗಿದ್ದರು.
ಆ ಬಳಿಕ ಆಗಾಗ ಫೋನ್ ಮಾಡಿ ಹಣ ಹೊಂದಿಸಲು ಹೇಳುತ್ತಿದ್ದರು. ಜ್ಯೋತಿಷಿ ಹೇಳಿದ ವಿಳಾಸ ನೋಡಿದಾಗ ಅದು ಹೌದೆಂದು ಗೊತ್ತಾಯಿತು. ಒಂದು ದಿನ ಜ್ಯೋತಿಷಿ ಬಂದ ಅತ ಮನೆಯೊಳಗೆ ಬಾರದೆ ಬಾಗಿಲ ಬಳಿ ನಿಂತಿದ್ದ.
ದಂಪತಿ ಕೈಗೆ ತಗಡು ಕೊಟ್ಟು ಕೊಠಡಿಯ ಒಳಗೆ ಹೋಗಿ 10 ನಿಮಿಷ ಅಲ್ಲಾನ ಧ್ಯಾನ ಮಾಡಿ ಬರಲು ಹೇಳಿದ. ಹೊರಗೆ ಬಂದು ಕೈ ಬಿಡಿಸಿದಾಗ ಅದರಲ್ಲಿ ಭಸ್ಮ ಹಾಗೂ ಕುಂಕುಮ ಇತ್ತು.
ಮಾಟ ನಿಮ್ಮ ಶರೀರದಿಂದ ಹೋಗಿದೆ. ಪೂರ್ಣ ಪ್ರಮಾಣದಲ್ಲಿ ಹೋಗಲು ಕೇರಳದಲ್ಲಿ ಮಾಟ ತೆಗಿಸಬೇಕು. ಇಲ್ಲದಿದ್ದರೆ ಮೂರು ದಿನದೊಳಗೆ ಮನೆಯಲ್ಲಿ ಸಾವು ಸಂಭವಿಸಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭ ಇವರಿಂದ ಮೋಸಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಆಗಮಿಸಿ, ಇವರ ಗುಟ್ಟು ಬಯಲು ಮಾಡಿದ್ದೇ ಅಲ್ಲದೆ ಗೂಸಾ ನೀಡಿದರು. ವಿಷಯ ತಿಳಿದ ಜನ ಸೇರಿ ಅವರೂ ತಮ್ಮ ಪಾಲಿನ ಗೂಸಾವನ್ನು ನೀಡಿ ಜ್ಯೋತಿಷಿಗಳನ್ನು ಸತ್ಕರಿಸಿದರು. ದಂಪತಿ ಹಣ ಕೊಡುವುದು ತಪ್ಪಿತು.
ಕೊಟ್ಟ ಹಣ ಕೂಡ ಕೈ ಸೇರಿತು. ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ಬೆಳ್ತಂಗಡಿ ಪೊಲೀಸರು ಬಂದು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು. ಹೀಗಾಗಿ ಈ ಪರಿಸರದ ಇನ್ನಷ್ಟು ಮಂದಿ ಮೋಸ ಹೋಗುವುದು ತಪ್ಪಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

