ಗೌರವ- ಜನಪ್ರಿಯತೆ ಧಿಕ್ಕರಿಸಿದ ಸಾಹಿತಿ ಕಡವ ಶಂಭು ಶರ್ಮ: ಲಕ್ಷ್ಮೀಶ ತೋಳ್ಪಾಡಿ
ಪುತ್ತೂರು: ಆಧ್ಮಾತ್ಮಿಕ ದಾಹ, ಭಾವ ಸಂಪತ್ತು, ಪಾಂಡಿತ್ಯ ಸಂಪತ್ತಿನೊಂದಿಗೆ ಅವಧೂತ, ನಾಥಪಂಥ ಪ್ರತಿಪಾದಿಸಿರುವ ಕಡವ ಶಂಭು ಶರ್ಮ ಸುಲಭದ ಗೌರವ- ಜನಪ್ರಿಯತೆಯನ್ನು ಧಿಕ್ಕರಿಸಿ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿರುವ ಸಾಹಿತಿ ಎಂದು ಚಿಂತಕ, ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ಅವರು ಕರ್ನಾಟಕ ಸಂಘದ ಆಶ್ರಯದಲ್ಲಿ ಪುತ್ತೂರಿನ ಅನುರಾಗ ವಠಾರದ ಕುರಿಯ ವಿಠಲ ಶಾಸ್ತ್ರಿ ಸಭಾಭವನ ನಟರಾಜ ಏಣಗಿ ವೇದಿಕೆಯಲ್ಲಿ ನಡೆಯುತ್ತಿರುವ 'ಸಾಹಿತ್ಯ - ಕಲಾ ಕುಶಲೋಪರಿ ಸಂಸ್ಕೃತಿ ಸಲ್ಲಾಪ' ಕಾರ್ಯಕ್ರಮದಲ್ಲಿ ಭಾನುವಾರ ನಡೆದ ಕಡವ ಶಂಭು ಶರ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಡವ ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ರು. 10 ಸಾವಿರ ನಗದು ಬಹುಮಾನವುಳ್ಳ 'ಕಡವ ಶಂಭು ಶರ್ಮ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಲಕ್ಷ್ಮೀಶ ತೋಳ್ಪಾಡಿ ಬಗ್ಗೆ ವಿಮರ್ಶಕ ಡಾ.ಜಿ.ಬಿ. ಹರೀಶ್ ಅಭಿನಂದನಾ ನುಡಿಗಳನ್ನಾಡಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕಡವ ಶಂಭು ಶರ್ಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕಡಬ ಶಂಭು ಶರ್ಮರ ಪುತ್ರ ರಾಮಚಂದ್ರ ಶರ್ಮ, ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್, ಕಾರ್ಯದರ್ಶಿ ಡಾ.ಎಚ್.ಜಿ. ಶ್ರೀಧರ್ ಇದ್ದರು.
ಕಡವ ಶಂಭು ಶರ್ಮರ ಪುತ್ರ ಕೆ.ಎಸ್. ನಾರಾಯಣ ಶರ್ಮ ಸ್ವಾಗತಿಸಿದರು. ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಾಜೆ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

