ವಿವಿಗೆ ಟಿಪ್ಪು ಸುಲ್ತಾನ್ ಬದಲು ಕಿಟೆಲ್ ಹೆಸರಿಡಲು ಒತ್ತಾಯ
ಮಂಗಳೂರು: ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲುದ್ದೇಶಿಸಿದ ಅಲ್ಪಸಂಖ್ಯಾತ ವಿಶ್ವವಿದ್ಯಾಲಯಕ್ಕೆ ಕನ್ನಡ ನಿಘಂಟು ಜನಕ ರೆ.ಡಾ. ಫರ್ಡಿನಾಂಡ್ ಕಿಟೆಲ್ ಹೆಸರಿಸುವಂತೆ ಸಾಮಾಜಿಕ ಹೋರಾಟಗಾರ ಟಿ.ಜಿ.ಅಬ್ರಹಾಂ ಮತ್ತು ಅಖಿಲ ಕರ್ನಾಟಕ ಕ್ರೈಸ್ತರ ಕನ್ನಡ ಸಂಘ ಪ್ರಧಾನ ಕಾರ್ಯದರ್ಶಿ ಫಾಯಲ್ ರಾಜ್ ಶುಕ್ರವಾರ ಜತೆಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕ್ರೈಸ್ತರ ಪರವಾಗಿ ಕಿಟೆಲ್ ಹೆಸರಿಡುವಂತೆ ಕೋರುತ್ತೇವೆ. ಇದರ ಹಿಂದೆ ಮುಸ್ಲಿಂ ವಿರೋಧಿ ಭಾವನೆ ಇಲ್ಲ, ಉದ್ದೇಶಿತ ವಿವಿಗೆ ಟಿಪ್ಪು ಸುಲ್ತಾನ್ ಹೆಸರಿನ ಬದಲು ಸಂತ ಶಿಶುನಾಳ ಶರೀಫ್ ಅಥವಾ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹೆಸರು ಪ್ರಸ್ತಾಪಿಸಿದರೆ ಅದನ್ನು ಸಂತೋಷದಿಂದ ಸ್ವಾಗತಿಸುವುದಾಗಿ ಹೇಳಿದರು.
ವಿವಿಗೆ ಟಿಪ್ಪು ಹೆಸರಿಡುವಲ್ಲಿ ರಾಜಕೀಯ ದುರುದ್ದೇಶವಿದೆ ಎಂದ ಅವರು, ಟಿಪ್ಪು ಕನ್ನಡಕ್ಕೆ ಆದ್ಯತೆ ನೀಡದೆ ಪರ್ಷಿಯನ್ಗೆ ಒತ್ತು ನೀಡಿದ್ದ. ಕಾರವಾರ, ಮೈಸೂರು, ಮಂಗಳೂರುಗಳಲ್ಲಿ ಕ್ರೈಸ್ತರನ್ನು ಬಲವಂತವಾಗಿ ಶ್ರೀರಂಗಪಟ್ಟಣಕ್ಕೆ ತಂದು ಇಸ್ಲಾಂಗೆ ಮತಾಂತರಿಸಿದ್ದಾನೆ. ಈ ಸತ್ಯವನ್ನು ಟಿಪ್ಪು ಮಗನಾದ ಗುಲಾಂ ಮಹಮ್ಮದ್ ತನ್ನ ಪುಸ್ತಕದಲ್ಲಿ ಬಹಿರಂಗವಾಗಿ ಸ್ಪಷ್ಟೀಕರಿಸಿದ್ದಾನೆ. ಇತಿಹಾಸಕಾರ ಕೆ.ಸಿ.ಎನ್. ರಾಜನ್ ಬರೆದ ಇತಿಹಾಸ ಪುಸ್ತಕದಲ್ಲಿ ಇದರ ಉಲ್ಲೇಖವಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

