ಅಂಚೆ ತೆರಪಿನ ಪರೀಕ್ಷೆ ಮೇ ತಿಂಗಳಲ್ಲಿ ಆರಂಭ (ಸುದ್ದಿ ಸಂಕ್ಷೇಪ)
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ ಕೋರ್ಸುಗಳ 2012-13ನೇ ಸಾಲಿನ ವಾರ್ಷಿಕ ಪರೀಕ್ಷೆಗಳು ಮೇ ತಿಂಗಳಿನಲ್ಲಿ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆಯಲಿದೆ. ಪದವಿ ಮಟ್ಟದ ಪರೀಕ್ಷೆ ಮೇ. 6 ರಿಂದ ಆರಂಭಗೊಳ್ಳಲಿದೆ. ಪರೀಕ್ಷಾ ಶುಲ್ಕ ಪಾವತಿಗೆ ಅರ್ಜಿ ಸಲ್ಲಿಸಲು ಮಾ.11 ಕೊನೆಯ ದಿನ. ದಂಡ ಶುಲ್ಕ ಪಾವತಿಗೆ ಮಾ. 23 ಕೊನೆಯ ದಿನ.
ಸ್ನಾತಕೋತ್ತರ ಪದವಿ ಪರೀಕ್ಷೆಗಳು ಮೇ. 20 ರಿಂದ ಪ್ರಾರಂಭಗೊಳ್ಳಲಿದೆ. ಪರೀಕ್ಷಾ ಶುಲ್ಕ ಪಾವತಿಗೆ ಮಾ. 30 ಕೊನೆ ದಿನ. ದಂಡ ಶುಲ್ಕ ಪಾವತಿಗೆ ಏ.8 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ 0824-2287824 ಸಂಪರ್ಕಿಸಬಹುದು.
ದಾಸಕೀರ್ತನೆಯಲ್ಲಿ ಪ್ರಥಮ
ಪುತ್ತೂರು: ಮಂಗಳೂರಿನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಮಟ್ಟದ 'ಕನಕದಾಸರ ಕೀರ್ತನಾ ಗಾಯನ' ಸ್ಪರ್ಧೆಯಲ್ಲಿ ಪುತ್ತೂರಿನ ಮಂಜುನಾಥ ಎನ್. ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ಮಂಗಳೂರು ವಿವಿ ಕನಕದಾಸರ ಸಂಶೋಧನಾ ಕೇಂದ್ರವು ಕನಕದಾಸ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮಂಜುನಾಥ ಪ್ರಥಮ ಸ್ಥಾನ ಪಡೆದುಕೊಂಡರು. ಸಂಗೀತ ವಿದುಷಿ ಪಾರ್ವತಿ ಗಣೇಶ್ ಭಟ್ ಶಿಷ್ಯರಾಗಿರುವ ಮಂಜುನಾಥ ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಎಂಎ ಅರ್ಥಶಾಸ್ತ್ರ ವಿದ್ಯಾರ್ಥಿ.
ಈಜಿನಲ್ಲಿ 2 ಚಿನ್ನ, ಬೆಳ್ಳಿ
ಮಂಗಳೂರು: ಹಿರಿಯ ಈಜುಗಾರ ಮತ್ತು ಕುಸ್ತಿಪಟು ಬೆಂಗರೆ ಆನಂದ ಅಮೀನ್ ಬೆಳಗಾವಿಯಲ್ಲಿ ಇತ್ತೀಚೆಗೆ ಡನದೆ 13ನೇ ಮಿಹಿರ್ ಅನಿಲ್ ಪೊದ್ದರ್ ಅಹ್ವಾನಿತ ಈಜು ಚಾಂಪಿಯನ್ಶಿಪ್ಲ್ಲಿ ತಲಾ ಎಂರಡು ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ. ಇವರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಕರುಣೇಶ್
ಸುಳ್ಯ: ವಿಧಾನ ಸಭಾ ಚುನಾವಣೆಗೆ ಜೆಡಿಎಸ್ನಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲಿದ್ದೇನೆ ಎಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿ, ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಅಟೆಂಡರ್ ಕುರುಂಜಿ ಗುಡ್ಡೆಯ ಎಸ್. ಕರುಣೇಶ್ ತಿಳಿಸಿದ್ದಾರೆ. ಜೆಡಿಎಸ್ಟಿಕೆಟ್ ಕೋರಿ ಅರ್ಜಿ ನೀಡಿದ್ದೇನೆ, ಅಲ್ಲಿಯೂ ಕಡೆಗಣಿಸಿದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಹೇಳಿದರು.
ಮಾಹಿತಿ ಸಂಗ್ರಹ
ಮಂಗಳೂರು: ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ ತನ್ನ ಪಿಂಚಣಿದಾರರಿಂದ ಆಧಾರ್ಕಾರ್ಡ್ಗೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಕಾರ್ಮಿಕರ ಪಿಂಚಣಿ ಯೋಜನೆ 1995ರ ಅನ್ವಯ ಪಿಂಚಣಿ ಪಡೆಯುತ್ತಿರುವ ಯುಐಡಿಎಐಯಿಂದ ನೀಡಲಾದ ಆಧಾರ್ ಕಾರ್ಡಿನ ಫೋಟೋಪ್ರತಿಯೊಂದಿಗೆ ಪಿಪಿಒ ಪುಸ್ತಕದ ಮೊದಲನೆ ಪುಟ ಮತ್ತು ಖಾತೆ ಸಂಖ್ಯೆಯ ಐಎಫ್ಎಸ್ಸಿ ಕೋಡ್ ಇರಬೇಕು. ಪ್ರಸ್ತುತ ಪಿಂಚಣಿ ಪಡೆಯುತ್ತಿರುವವರು ಉಳಿತಾಯ ಖಾತೆಯ ಪಾಸ್ಪುಸ್ತಕದ ಪ್ರತಿಗಳನ್ನು ಭವಿಷ್ಯನಿಧಿ ಕಚೇರಿಗೆ ನೀಡಬೇಕು ಎಂದು ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

