ದಕ್ಷಿಣ ಕನ್ನಡ

ಅಭಿವೃದ್ಧಿ ಹೆಸರಲ್ಲಿ ತುಳುವರ ಭೂಮಿ ಅನ್ಯರ ಪಾಲಾಗದಿರಲಿ: ಸ್ವಾಮೀಜಿ

Published On :

ಬೆಳ್ತಂಗಡಿ: ಅಭಿವೃದ್ಧಿ ಹೆಸರಿನಲ್ಲಿ ತುಳುನಾಡಿನ ಭೂಮಿ ತುಳುವೇತರರ ಪಾಲಾಗುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೆ ನಮ್ಮ ಭೂಮಿ ಬೇರೆಯವರ ಪಾಲಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಸೋಮವಾರ ಇಲ್ಲಿನ ಮಾರಿಗುಡಿ ಮೈದಾನದಲ್ಲಿ ಬೋಲ್ತೇರ್ ತಾಲೂಕು ತುಲುವೆರೆ ಪರ್ಬದ ಕೂಡುಕಟ್ಟ್ ಆಶ್ರಯದಲ್ಲಿ ನಡೆದ 'ತುಲುವೆರೆ ಪರ್ಬ' ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ತುಳು ಕಲಿಸಿ: ಪೋಷಕರು ತಮ್ಮ ಮಕ್ಕಳಿಗೆ ಬೇರೆ ಭಾಷೆ ಕಲಿಸುವ ಮೊದಲು ತುಳು ಭಾಷೆ ಕಲಿಸಿ. ಆಗ ಮಕ್ಕಳಿಗೆ ತುಳು ಸಂಸ್ಕೃತಿಯ ಅರಿವು ಉಂಟಾಗುತ್ತದೆ. ನಮ್ಮ ಭಾಷೆಯನ್ನು ಕಡೆಗಣಿಸಿದರೆ ತಾಯಿಯನ್ನು ದೂರಮಾಡಿದಂತೆ ಎಂದರು.
ಸೌಜನ್ಯ ಪ್ರಕರಣ ಸಿಬಿಐಗೆ ಒಪ್ಪಿಸಿ: ಸೌಜನ್ಯ ನಮ್ಮ ಮನೆ ಹೆಣ್ಣು ಮಗಳೆಂದು ಭಾವಿಸಿ ಆಕೆಯ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬುದನ್ನು ಈ ಕಾರ್ಯಕ್ರಮದ ಮೂಲಕ ಮೊದಲು ನಿರ್ಣಯ ಅಂಗೀರಕರಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಈ ಬಾರಿ ಸೇರ್ಪಡೆಯಾಗಲಿದೆ. ಫೆ.24 ರಂದು ಈ ಕುರಿತು ದೆಹಲಿಯಲ್ಲಿ ಸಭೆ ಆಯೋಜಿಸಲಾಗಿದ್ದು ರಾಜ್ಯದ ಎಲ್ಲಾ ಸಂಸದರೂ ಬೆಂಬಲ ನೀಡಿದ್ದಾರೆ ಎಂದರು.
ಶಾಸಕ ಕೆ.ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮೆರವಣಿಗೆ ಉದ್ಘಾಟಿಸಿದರು.
ಕೊಂಕಣಿ ಅಕಾಡಮಿ ರಿಜಿಸ್ಟ್ರಾರ್ ಡಾ.ದೇವದಾಸ್ ಪೈ, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ, ಸಾಹಿತಿ ಅನಂತರಾಮ ಬಂಗಾಡಿ, ಕುದ್ಕಾಡಿ ವಿಶ್ವನಾಥ ರೈ, ಪೇರೂರು ಜಾರು, ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಧರ್ಮಗುರು ಫಾ. ಜೇಮ್ಸ್ ಡಿ'ಸೋಜಾ, ತಾಲೂಕು ಪಂಚಾಯಿತಿ ಅಧ್ಯಕ್ಷ ಕೇಶವ ಎಂ., ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಸಮಿತಿ ಪ್ರಧಾನ ಸಂಚಾಲಕ ಕೆ.ಸುಂದರ ಸಾಲಿಯಾನ್, ದೇವಿಪ್ರಸಾದ್,ಶ್ರೀಧರ ಭೀಡೆ, ಎಲ್.ಚಂದು, ಕೆ.ಸೋಮ, ಚಂದಪ್ಪ ಗೌಡ ಪಾಂಗಾಳ, ಜಯಪ್ರಕಾಶ್ ಭಟ್, ಚಂದ್ರಕಾಂತ ಎನ್., ಮುಗುಳಿ ನಾರಾಯಣ ಭಟ್ ಇದ್ದರು.
ಸಮಿತಿ ಪ್ರಧಾನ ಸಂಚಾಲಕ ಕೆ.ಸೋಮನಾಥ ನಾಯಕ್ ಸ್ವಾಗತಿಸಿದರು. ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ ಪ್ರಸ್ತಾಪಿಸಿದರು. ಕೆ.ರಮಾನಂದ ಸಾಲಿಯಾನ್ ನಿರ್ಣಯ ಮಂಡಿಸಿದರು. ವಿದ್ಯಾ ನಾಯಕ್ ನಿರೂಪಿಸಿದರು.
ಬಳಿಕ ತುಳುನಾಡ ಸಂಸ್ಕೃತಿ ಬೊಕ್ಕ ತುಳುವೆದಿ, ಜಾನಪದ ಸಾಹಿತ್ಯ ಊಳಿಗಮಾನ್ಯ ಪದ್ಧತಿ ಕುರಿತು ವಿಚಾರ ಗೋಷ್ಠಿಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.