ದಕ್ಷಿಣ ಕನ್ನಡ

ಉಪ್ಪಿನಂಗಡಿ-ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಉತ್ಸವಕ್ಕೆ ನಾಳೆ ಚಾಲನೆ

Published On :

ಉಪ್ಪಿನಂಗಡಿ: ನೇತ್ರಾವತಿ- ಕುಮರಾಧಾರ ನದಿ ಸಂಗಮ ತಟದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ಮತ್ತು ಮಹಾಕಾಳಿ ದೇವಾಲಯದಲ್ಲಿ ನಡೆಯುವ ಉತ್ಸವಾದಿಗಳಿಗೆ ಗುರುವಾರ ಧ್ವಜಾರೋಹಣದಿಂದ ಚಾಲನೆ ದೊರೆಯಲಿದ್ದು, ಸಂಜೆ  ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.  ಉತ್ಸವ ಪ್ರಾರಂಭಗೊಂಡ ದಿನದಿಂದ ಆಗಮಿಸುವ ಭಕ್ತರಿಗೆ ಶ್ರೀ ಕ್ಷೇತ್ರಲ್ಲೇ ನಿತ್ಯ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.    ಪುರಾಣಾ ಪ್ರಸಿದ್ಧ ಮಖೆ ಜಾತ್ರೆ ಹಾಗೂ ಮಘಾ ತೀರ್ಥ ಸ್ನಾನ ಈ ಕ್ಷೇತ್ರದ ವೈಶಿಷ್ಟ್ಯವಾಗಿದ್ದು, ವರ್ಷದಲ್ಲಿ ನಡೆಯುವ ಮೂರು ಮಖೆಜಾತ್ರೆಯ ಮರುದಿನ ಪ್ರಾತಃ ಕಾಲದಲ್ಲಿ ಉಭಯ ನದಿಗಳ ಸಂಗಮ ಸ್ಥಳದಲ್ಲಿ ಮಿಂದೆದ್ದರೆ ಪಾಪಾ ನಾಶಗೊಂಡು ಪುಣ್ಯ ಪ್ರಾಪ್ತಿಯಾಗುವುದು ಎಂದು ಪುರಾಣಗಳಲ್ಲಿ ಉಲ್ಲೇಖಿತ ವಿಚಾರ. ಅಂತೆಯೇ ಈ ಬಾರಿ ಮೊದಲ ಮಖೆ ಜಾತ್ರೆಯು 24ರಂದು ನಡೆಯಲಿದ್ದು, ಜಾತ್ರೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶಾಲ ವ್ಯಾಪ್ತಿಯಲ್ಲಿ ಕುಳಿತು ವೀಕ್ಷಿಸಲು ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲೇ ವೇದಿಕೆಯನ್ನು ನಿರ್ಮಿಸಲಾಗಿದೆ. ಸುಮಾರು 40 ಅಡಿ ವಿಸ್ತೀರ್ಣದ ವೇದಿಕೆಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಲಿದೆ. ಶ್ರೀ ಕ್ಷೇತ್ರದಲ್ಲಿ ವೈಶಿಷ್ಟ್ಯಪೂರ್ಣವಾದ ನದಿ ಪಾತ್ರದಲ್ಲೇ ಇರುವ ಉದ್ಭವಲಿಂಗವನ್ನು ಮರಳಿನಲ್ಲಿ ಅನಾವರಣಗೊಳಿಸಲಾಗಿದ್ದು, ಭಕ್ತರು ನಿತ್ಯ ತಮ್ಮ ಇಚ್ಚೆಯಂತೆ ಉದ್ಭವಲಿಂಗ ಪೂಜಿಸಲು ಅವಕಾಶವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.