ಉಪ್ಪಿನಂಗಡಿ ವಾರ್ಷಿಕ ಜಾತ್ರೆ; ಆಕರ್ಷಕ ಹೊರೆಕಾಣಿಕೆ ಮೆರವಣಿಗೆ
ಉಪ್ಪಿನಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸೂರ್ಯಾಸ್ತಮಾನಕ್ಕೆ ನಡೆದ ಧ್ವಜಾರೋಹಣಾ ಕಾರ್ಯಕ್ರಮಕ್ಕೆ ಭಕ್ತರಿಂದ ಸಮರ್ಪಿಸಲಾದ ಹೊರೆಕಾಣಿಕೆಯನ್ನು ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಕೊಂಡೊಯ್ಯಲಾಯಿತು. ವರ್ಷಾವಧಿ ಜಾತ್ರೆಯಲ್ಲಿ ಊರ ಜನತೆಯನ್ನು ಮುಖ್ಯ ವಾಹಿನಿಗೆ ತಂದಿರುವ ದೇಗುಲದ ನೂತನ ವ್ಯವಸ್ಥಾಪನಾ ಸಮಿತಿಯ ಕ್ರಮದಿಂದಾಗಿ ಮೊದಲ ಬಾರಿಗೆ ಉತ್ಸವದ ಧ್ವಜಾರೋಹಣಾ ಕಾರ್ಯಕ್ಕೆ ಭಕ್ತರು ಭಾರಿ ಪ್ರಮಾಣದಲ್ಲಿ ಹೊರೆ ಕಾಣಿಕೆ ಸಮಪಿಸಿದರು.
ಗಾಂಧಿ ಪಾರ್ಕ್ನಿಂದ ಹೊರೆ ಕಾಣಿಕೆ ಕೊಂಬು, ಕಹಳೆ, ಮಂಗಳವಾದ್ಯದೊಂದಿಗೆ ಉಪ್ಪಿನಂಗಡಿಯ ಪ್ರಮುಖ ಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ದೇಗುಲ ತಲುಪಿತು. ದ್ವಿ ಚಕ್ರ ವಾಹನಗಳು, ಆಟೋ ರಿಕ್ಷಾಗಳ ಹೊರೆ ಕಾಣಿಕೆಯಲ್ಲಿ ಆಕರ್ಷಣೆಯಾಗಿದ್ದವು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಧನ್ಯ ಕುಮಾರ್ ರೈ, ಉಷಾ ಮುಳಿಯ, ಜ್ಯೋತಿ ಶಾಸ್ತ್ರಿ, ಸುನಿಲ್, ಉತ್ಸವ ಸಮಿತಿಯ ಜಗದೀಶ್ ಶೆಟ್ಟಿ, ಬಿ. ಐತ್ತಪ್ಪ ನಾಯ್ಕ್, ಪುರುಷೋತ್ತಮ ಮುಂಗ್ಲಿಮನೆ, ಕೇಶವ ಗೌಡ ಬಜತ್ತೂರು, ಚಿದಾನಂದ ನಾಯಕ್, ಡಾ. ಕೆ.ಜಿ.ಭಟ್, ಡಾ. ಎಂ.ಎನ್.ಭಟ್, ಸಂಜೀವ ಮಠಂದೂರು, ಮನೋಜ್ ಶೆಟ್ಟಿ, ಯಟೀಶ್ ಶೆಟ್ಟಿ, ಗೋಪಾಲ ಹೆಗ್ಡೆ, ರಘುನಾಥ ರೈ, ವೆಂಕಟೇಶ್ ಭಟ್ ಮತ್ತಿತರರು ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

