ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮತ್ತೆ ಗಲಾಟೆ ಮಗಳಿಗೆ ಟಿಕೆಟ್ ನೀಡದ್ದಕ್ಕೆ ತಾಯಿ ಶಾಪ !
ಮಂಗಳೂರು: ಜಿಲ್ಲಾ ಕಾಂಗ್ರೆಸ್ ಮುಖಂಡರ ಮತ್ತು ಕಚೇರಿಯಲ್ಲಿ ಏನು ದೋಷವೊ ಏನೊ ಶನಿವಾರ ಮಹಾನಗರ ಪಾಲಿಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸುದ್ದಿಗೋಷ್ಠಿಯಲ್ಲಿಯೂ ಭಿನ್ನಮತದ ಬೊಬ್ಬೆ ಕೇಳಿ ಬಂತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ದುಡಿಯುವ ರಾಜೀವಿ ಜೋಗಿ ಎಂಬ ವೃದ್ಧೆ ಕಾರ್ಯಕರ್ತೆ ತನ್ನ ಮಗಳು, ಕಳೆದ ಬಾರಿ ಗೆದ್ದು ಪಾಲಿಕೆ ಸದಸ್ಯೆ ಆಗಿದ್ದ ನಮಿತಾ ಬಾಲಕೃಷ್ಣಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಮುಖಂಡರ ವಿರುದ್ಧ ಹಾರಿ ಹಾಯ್ದರು ಒಂದು ಹಂತದಲ್ಲಿ ಅಳುತ್ತಾ ಶಾಪವನ್ನೇ ನೀಡಿದರು. ಇದುವರೆಗೆ ಸಿಕ್ಕಿದ್ದು ನಿಮಗೆ 20 ಸೀಟು, ಇನ್ನು ಹತ್ತು ಸೀಟು ಕೂಡಾ ಸಿಗುವುದಿಲ್ಲ, ಇದು ನನ್ನ ಶಾಪ, ದೇವರಿದ್ದಾನೆ ಎಂದು ಕಿಡಿ ಕಾರಿದರು.
ಗಳಗಳನೆ ಕಣ್ಣೀರು ಸುರಿಸಿದ ರಾಜೀವಿ, ಮಗಳನ್ನು ಸೊಂಟದಲ್ಲಿ ಹಿಡಿದುಕೊಂಡು ಆಕೆಯ ಕೈಯಲ್ಲಿ ರಾಜೀವ ಗಾಂಧಿಯ ಚಿತ್ರವಿದ್ದ ಬಾವುಟ ನೀಡಿದ್ದೆ. ಇವರು ನನ್ನ ಮಗಳಿಗೆ ಅನ್ಯಾಯ ಮಾಡಿದರು, ಇದುವರೆಗೆ ನಾನು ಮಾಡಿದ ಸೇವೆಯನ್ನು ಗಮನಿಸಲಿಲ್ಲ ಎಂದು ಅತ್ತರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ 'ಟಿಕೆಟ್ ಕೇಳಿದ ಕಳೆದ ಬಾರಿ ಗೆದ್ದ ಪಾಲಿಕೆ ಸದಸ್ಯರಿಗೆ ಎಲ್ಲ ನೀಡಿದ್ದೇವೆ' ಎಂದು ಹೇಳಿದಾಗ ಸಿಡಿದೆದ್ದ ರಾಜೀವಿ ನನ್ನ ಮಗಳಿಗೆ ಕೇಳಿದರೂ ಟಿಕೆಟ್ ನೀಡಿಲ್ಲ ಎಂದು ಚೀರಿದರು. ಆಗ ಸುಮ್ಮನಿರುವಂತೆ ಎಲ್ಲರೂ ಗದರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

