ಬೆಳ್ತಂಗಡಿ ಅಭಿವೃದ್ಧಿ ತೂಗುವ ತಕ್ಕಡಿ ಮುಳ್ಳಿನಂತೆ!
ಜಿತೇಂದ್ರ ಕುಂದೇಶ್ವರ
ಮಂಗಳೂರು: ಬೆಳ್ತಂಗಡಿ ಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕಾಮಗಾರಿ ಶೇ.90 ಪೂರ್ಣವಾಗಿದೆ. ಶಾಸಕ ವಸಂತ ಬಂಗೇರ ಹೇಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ಅನುದಾನ ರು. 350 ಕೋಟಿ ಮಂಜೂರು ಆಗಿದ್ದು, ವಿವಿಧ ಕಾಮಗಾರಿಗಳು ಅಭಿವೃದ್ಧಿ ಹಂತದಲ್ಲಿವೆ.
ಶಾಸಕರ ನಿಧಿ, ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆ, ಸಣ್ಣ ನೀರಾವರಿ, ನಮ್ಮ ಗ್ರಾಮ ನಮ್ಮ ರಸ್ತೆ, ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ. ಶಾಸಕರ ನಿಧಿಯಲ್ಲಿ 4.4 ಕೋಟಿ ಅನುದಾನ ಬಂದಿದ್ದು, 13 ಲಕ್ಷ ಖರ್ಚಾಗಲು ಬಾಕಿ ಇದೆ. ಅದಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಮಲೆನಾಡು ಪ್ರದೇಶಾಭಿವೃದಿ ್ಧಯೋಜನೆಯಲ್ಲಿ 1.5 ಕೋಟಿ ಬಂದಿದ್ದು, ಗ್ರಾಮಗಳ ರಸ್ತೆ ಡಾಂಬರೀಕರಣ ಮತ್ತು ದುರಸ್ತಿಗೆ ವಿನಿಯೋಗಿಸಲಾಗಿದೆ. 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಗೆ 25 ಕೋಟಿ ಅನುದಾನ ಬಂದಿದೆ. 17.92 ಕೋಟಿ ಕಾಮಗಾರಿ ಬಾಕಿ ಇದ್ದು, ಕ್ರಿಯಾ ಯೋಜನೆ ರೂಪಿಸಲಾಗಿದೆ. ಸಣ್ಣ ನೀರಾವರಿ 8.5 ಕೋಟಿ ಕ್ರಿಯಾ ಯೋಜನೆ ನೀಡಲಾಗಿದೆ. ಮಂಜೂರು ಹಂತದಲ್ಲಿದೆ. ಗ್ರಾಮೀಣ ಸಡಕ್ ಯೋಜನೆಯಲ್ಲಿ 40 ಕೋಟಿ ಕ್ರಿಯಾ ಯೋಜನೆ ರೂಪಿಸಿದ್ದು, ಶೇ.50 ಕಾಮಗಾರಿ ನಡೆದಿದೆ.
ಆದಾಯ ಮಿತಿ ಏರಿಕೆ: ಬಸವ ವಸತಿ ಯೋಜನೆಯಡಿ 4 ಸಾವಿರ ಮಂದಿಗೆ ವಸತಿ ನೀಡುವ ಗುರಿ ಇದೆ ಎನ್ನುವ ಶಾಸಕರು, ಆದಾಯ ಮಿತಿ ಏರಿಸುವ ಮೂಲಕ ಹೆಚ್ಚಿನ ಫಲಾನುಭವಿಗಳಿಗೆ ಸೌಲಭ್ಯ ದೊರಕುವಂತೆ ಮಾಡಿದ್ದೇನೆ ಎನ್ನುತ್ತಾರೆ. 11,800 ಆದಾಯ ಮಿತಿ ಇತ್ತು. ಸಚಿವರ ಮನವೊಲಿಸಿ ಅದಾಯ ಮಿತಿ 32 ಸಾವಿರಕ್ಕೆ ಏರಿಸಿದ್ದೇವೆ. ಇದರಿಂದಾಗಿ ಫಲಾನುಭವಿಗಳ ಹೆಚ್ಚಳವಾಗಿದೆ. ಕೆಲವೆಡೆ ಪಂಚಾಂಗ ಕೆಲಸ ಮಾಡದೆ ಇದ್ದ ಕಾರಣಕ್ಕೆ ಅನುದಾನ ವಾಪಸ್ ಹೋಗಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿ ಪುನಃ ಅನುದಾನ ಮಂಜೂರಾಗುವಂತೆ ಮಾಡಿದ್ದೇನೆ ಎನ್ನುತ್ತಾರೆ ಶಾಸಕರು. 500 ಪ್ರಶ್ನೆ ಸಿದ್ಧ ಮಾಡಿದ್ದೆವು. ಅದರಲ್ಲಿ 289 ಪ್ರಶ್ನೆಗಳು ಆಯ್ಕೆಯಾಗಿದ್ದು, ಅಧಿವೇಶನದಲ್ಲಿ ದಾಖಲಾಗಿವೆ. ಆಪರೇಶನ್ ಅಗಿದ್ದರೂ ಅಧಿವೇಶನದಲ್ಲಿ 121 ದಿನ ಭಾಗವಹಿಸಿದ್ದೇನೆ ಎಂದು ಹೇಳುತ್ತಾರೆ. ಉಪ್ಪಿನಂಗಡಿ -ಗುರುವಾಯನಕೆರೆ ರಸ್ತೆಗೆ 14 ಕೋಟಿ ಅನುದಾನ ಸಿಕ್ಕಿ ಹೆದ್ದಾರಿ ಆಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ 200 ಮಂದಿಗೆ ಬೋರ್ವೆಲ್ ತಲಾ 1ಲಕ್ಷ ನೀಡಲಾಗಿದೆ. ಜಿಲ್ಲೆಯಲ್ಲಿಯೇ ಇದು ಅತಿ ಹೆಚ್ಚು. ಅಧಿಕಾರಿಗಳ ಬೆನ್ನು ಬಿದ್ದ ಕಾಣಕ್ಕೆ 40 ಮಂದಿಗೆ ಹೆಚ್ಚುವರಿ ಅನುದಾನ ಒದಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

