ಜಾಗತೀಕರಣದಿಂದ ವ್ಯಕ್ತಿಗತ ಪ್ರತಿಷ್ಠೆಗೆ ಪ್ರಾಮುಖ್ಯ: ಜಿ.ಎನ್. ಮೋಹನ್
ಕಾಂತಾವರ: ಮಾಧ್ಯಮದ ಮನಸ್ಸುಗಳು, ಆದ್ಯತೆಗಳು ಬದಲಾಗಿವೆ. ಜಾಗತೀಕರಣದಿಂದಾಗಿ ನಾವು ಅನ್ನುವ ಸಮಷ್ಟಿಪ್ರಜ್ಞೆಯ ಬದಲಾಗಿ ವ್ಯಕ್ತಿಗತ ಪ್ರತಿಷ್ಠೆಗಳಿಗೆ ಪ್ರಾಮುಖ್ಯತೆ ಸಿಗುತ್ತಿದೆ ಎಂದು ಹಿರಿಯ ಪತ್ರಕರ್ತ, ಅಂಕಣಕಾರ ಜಿ.ಎನ್. ಮೋಹನ್ ಹೇಳಿದರು.
ಕಾಂತಾವರ ಅಲ್ಲಮಪ್ರಭು ಪೀಠದ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದಲ್ಲಿ ಭಾನುವಾರ ಅವರು 'ಮಾಧ್ಯಮವೆಂಬ ಕತ್ತಲೆ ಬೆಳಕು' ವಿಷಯದ ಕುರಿತು ಮಾತನಾಡಿದರು.
ಜಾಗತೀಕರಣದ ಜೊತೆಯಲ್ಲಿ ಸ್ಪರ್ಧೆಯಲ್ಲಿರಬೇಕಾದ ಕಾರಣಕ್ಕಾಗಿಯೇ ಕ್ರೈಮ್, ಕ್ರಿಕೆಟ್ ಮತ್ತು ಸಿನಿಮಾಗಗಳೆಂಬ ಮೂರು 'ಸಿ' ಗಳ ಮೇಲೆಯೇ ಇಂದು ಮಾಧ್ಯಮ ನಿಂತಿದೆ. ಸ್ಪರ್ಧೆಯಲ್ಲಿ ಓಡಬೇಕಾದ ಅನಿವಾರ್ಯತೆಯಿದ್ದರೂ ನಾವೀಗ ಅಭಿವೃದ್ಧಿಯೆಡೆಗೆ ಸಾಗುತ್ತಿದ್ದು, ಇನ್ನೂ ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿರುವುದರಿಂದ ಸರ್ಕಾರ ಮತ್ತು ಸಮಾಜದ ಮಧ್ಯೆ ಸೇತುವೆಯಾಗಿ ಕೆಲಸ ಮಾಡಬೇಕಾದಂತಹ ಹೊಣೆಗಾರಿಕೆಯೂ ಮಾಧ್ಯಮಕ್ಕಿದೆ ಎಂದು ತಿಳಿಸಿದರು.
ಪತ್ರಿಕಾರಂಗ ಹಾಗೂ ನ್ಯಾಯಾಂಗ ಭ್ರಷ್ಟಗೊಂಡರೆ ಪ್ರಜಾಪ್ರಭುತ್ವ ಉಳಿಯಲಾರದು. ಇಂದಿನ ಹತಾಶೆ ಭಾವನೆಗಳ ಮಧ್ಯೆಯೂ ಮಾಧ್ಯಮವೆಂಬ ಬೆಳಕನ್ನು ಹೇಗೆ ಸಮರ್ಥವಾಗಿ ಬಳಸಬೇಕು ಎಂಬ ಆಲೋಚನೆ ಎಲ್ಲರಲ್ಲಿ ಮೂಡಿಬರಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಜಿ.ಎನ್. ಮೋಹನ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಕೃತಿ ಚಿಂತಕ ಸಿ.ಕೆ. ಪಡಿವಾಳ್ ಇದ್ದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ. ಮೊಗಸಾಲೆ ಮಾತನಾಡಿ, ಸ್ವಾಗತಿಸಿದರು. ಯಶೋಧರ ಕರ್ಕೇರಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

