ದಕ್ಷಿಣ ಕನ್ನಡ

ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ವಾಗ್ವಾದ

Published On :

ಮಂಗಳೂರು: ಮಹಾನಗರ ಪಾಲಿಕೆ ನಾಮಪತ್ರ ಪರಿಶೀಲನೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕರಿಸುವಂತೆ ಜೆಡಿಎಸ್ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ ಪರಿಣಾಮ ಗೊಂದಲ ಉಂಟಾಯಿತು.
 ಕಾಂಗ್ರೆಸ್ ಅಭ್ಯರ್ಥಿ ಅಪ್ಪಿ ಸರ್ಕಾರಿ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿದ ಬಳಿ ವಜಾ ಗೊಂಡಿದ್ದು, ಈ ವಿವರ ನಾಮಪತ್ರದಲ್ಲಿ ಹೇಳಿಲ್ಲ. ವಜಾಗೊಂಡವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನಿದೆ. ಆದ್ದರಿಂದ ನಾಮಪತ್ರ ತಿರಸ್ಕರಿಸುವಂತೆ ಚುನಾವಣೆ ಅಧಿಕಾರಿಗೆ ಜೆಡಿಎಸ್  ಸದಸ್ಯರು ಒತ್ತಾಯಿಸಿದರು.
ಜೆಡಿಎಸ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಎ.ಸಿ. ವಿನಯರಾಜ್, ಅಶ್ರಫ್ ಮೊದಲಾದವರು ವಾದವನ್ನು ಅಲ್ಲಗಳೆದರು.
ಅಪ್ಪಿ ಹೆಸರಿನ ಯಾರೋ ವಜಾಗೊಂಡ ದಾಖಲೆ ಹಿಡಿದು ಜೆಡಿಎಸ್‌ನವರು ಬಂದಿದ್ದಾರೆ. ಅಪ್ಪಿ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸಮರ್ಥಿಸತೊಡಗಿದರು.
ಅಪ್ಪಿ ವಜಾಗೊಂಡಿದ್ದಾರೆಯೋ ಇಲ್ಲವೋ ಎಂಬ ಬಗ್ಗೆ ತೀರ್ಮಾನ ಮಾಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಾಮಪತ್ರ ಸರಿ ಇದೆಯೊ ಇಲ್ಲವೊ ಎಂಬುದು ನೋಡುವುದಷ್ಟೇ ನಮ್ಮ ಕೆಲಸ ಎಂದು ಚುನಾವಣೆ ಅಧಿಕಾರಿ ಹೇಳಿದರು.
 'ಅಪ್ಪಿ ಸರ್ಕಾರಿ ಸೇವೆಯಲ್ಲಿದ್ದರು ಎಂಬುದು ಸತ್ಯಕ್ಕೆ ದೂರವಾದ ಮಾಹಿತಿ. ಜೆಡಿಎಸ್ ಅನಗತ್ಯ ವಿವಾದ ಸೃಷ್ಟಿ ಮಾಡಿದೆ. ಅವರು ನೀಡಿದ ದಾಖಲೆಯಲ್ಲಿ ಅಪ್ಪಿಲತಾ ಎಂಬವರು ಸರ್ಕಾರಿ ಸೇವೆಯಲ್ಲಿದ್ದರು ಎಂದು ಹೇಳುತ್ತಾರೆ. ಆದರೆ ಆ ಅಪ್ಪಿಲತಾ ಬೇರೆ, ಈಗ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಅಪ್ಪಿ ಬೇರೆ. ಇದೇ ಕಾರಣಕ್ಕೆ ಚುನಾವಣೆ ಅಧಿಕಾರಿಗಳು ನಾಮಪತ್ರ ಪುರಸ್ಕರಿಸಿದ್ದಾರೆ' ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.