ಉಜಿರೆ: ಇಂದಿನಿಂದ ಜನಾರ್ದನ ಸ್ವಾಮಿ ದೇವಳ ಅಷ್ಟಬಂಧ ಬ್ರಹ್ಮಕಲಶೋತ್ಸವ
ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವರಿಗೆ ದ್ವಿತೀಯ ಬಾರಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಬುಧವಾರ ಆರಂಭಗೊಳ್ಳಲಿದ್ದು, ಮಾ. 4 ರವರೆಗೆ ನಡೆಯಲಿವೆ.
ಬುಧವಾರ ಬೆಳಗ್ಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸುಪ್ರಸಾದ ಭೋಜನಶಾಲೆ ಉದ್ಘಾಟಿಸಲಿದ್ದಾರೆ. ಬಳಿಕ ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಹಸಿರುವಾಣಿ ಉಗ್ರಾಣ ಉದ್ಘಾಟನೆ ನಡೆಯಲಿದೆ.
ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ಉದ್ಯಮಿ ಕೆ. ಹರೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸಿದ ಆಶೀರ್ವದಿಸಲಿದ್ದಾರೆ. ಪ್ರೊ.ಎಸ್. ಪ್ರಭಾಕರ್ ಅತಿಥಿಗಳಾಗಿರುತ್ತಾರೆ.
ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ಪ್ರತಿದಿನ ಸಂಜೆ 5.30ಕ್ಕೆ ಭಗವದ್ಗೀತಾ ಪ್ರವಚನ ಸರಣಿ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ಬೆಳಗ್ಗೆ ಪಾಕಶಾಲೆಯಲ್ಲಿ ಹಾಲುಕ್ಕಿಸುವ ಕಾರ್ಯಕ್ರಮ ನೆರವೇರಿತು. ಅರ್ಚಕ ಶ್ರೀನಿವಾಸ ಹೊಳ್ಳ ಧಾರ್ಮಿಕ ವಿಧಾನ ನೆರವೇರಿಸಿದರು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಬಾಳಿಗಾ, ಆಹಾರ ಸಮಿತಿ ಸಂಚಾಲಕ ಅರುಣ್ ಕುಮಾರ್ ಎಂ.ಎಸ್., ಉಪಾಧ್ಯಕ್ಷರಾದ ಪ್ರತಾಪ ಸಿಂಹ ನಾಯಕ್, ಇ. ಸುಂದರ ಗೌಡ, ರಾಜೇಶ್ ಪೈ, ಅನಂತಕೃಷ್ಣ ರಾವ್, ಎಂ.ಜಿ. ಶೆಟ್ಟಿ, ರಘುರಮ ಶೆಟ್ಟಿ, ಮೋಹನ್ ಕುಮಾರ್, ವಸಂತ ಕುರ್ಮಾಣಿ, ಸಂಜೀವ ಕೆ., ಪುಷ್ಪಾ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿಗಾರ್, ಕಾರ್ಯದರ್ಶಿಗಳಾದ ವೆಂಕಟ್ರಮಣ ಹೆಬ್ಬಾರ್, ಡಾ.ಎಂ.ಪಿ. ಶ್ರೀನಾಥ್, ಕೋಶಾಧಿಕಾರಿಗಳಾದ ಶರತ್‌ಕೃಷ್ಣ ಪಡ್ವೆಟ್ನಾಯ, ಭರತ್ ಕುಮಾರ್, ವಿವಿಧ ಸಮಿತಿಗಳ ಸಂಚಾಲಕ ಡಾ.ಎಂ.ಎಂ. ದಯಾಕರ್, ರಾಘವೇಂದ್ರ ಬೈಪಡಿತ್ತಾಯ, ಈಶ್ವರ ಭಟ್ ಅತ್ತಾಜೆ, ರವಿಚಂದ್ರ ಚಕ್ಕಿತ್ತಾಯ, ಶ್ರೀಧರ್ ರಾವ್, ಚಂದ್ರಮೋಹನ್ ರೈ, ಡಾ. ಕುಮಾರ್ ಹೆಗ್ಡೆ, ಸೋಮಶೇಖರ ಶೆಟ್ಟಿ, ಜಯಂತ ಶೆಟ್ಟಿ ಕುಂಟಿನಿ, ಬಲಕೃಷ್ಣ ಪೂಜಾರಿ, ರವಿಕುಮಾರ್ ಬರಮೇಲು, ಸುಂದರ ಮಡಿವಾಳ, ಶೇಖರ ಟಿ., ವಿನಯ ಚಂದ್ರ, ಡಾ. ಗೋಪಾಲಕೃಷ್ಣ ಭಟ್, ಮಂಜುಳಾ ಉಮೇಶ್, ವಸಂತ ನಾಯ್ಕ, ರಾಧಾಕೃಷ್ಣ ಶೆಟ್ಟಿ, ಜಯರಾಮ ಪಡ್ಡಿಲ್ಲಾಯ, ರಾಧಾಕೃಷ್ಣ ಕಲ್ಲೂರಾಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

