ದಕ್ಷಿಣ ಕನ್ನಡ

ನಾಳೆಯಿಂದ 'ಅಮೆರಿಕ ಅನುಭವ'

Published On :

ಮಂಗಳೂರು: ಚೆನ್ನೈನ ಅಮೆರಿಕನ್ ಕನ್ಸಲೇಟ್ ಕಚೇರಿಯಿಂದ 'ಅಮೆರಿಕಾ ಅನುಭವ' ಕುರಿತ ಕಾರ್ಯಕ್ರಮ ಮಾ.1 ಮತ್ತು 2 ರಂದು ಮಂಗಳೂರಿನಲ್ಲಿ ನಡೆಯಲಿದೆ. ಅಮೆರಿಕಾದ ಪ್ರಸಿದ್ಧ ಕಂಪನಿಗಳ ಪರಿಚಯ, ಆಹಾರ ಉತ್ಪನ್ನ, ಮಾತುಗಾರಿಕೆ, ರಸಪ್ರಶ್ನೆ, ಮ್ಯೂಸಿಕ್, ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
   ಉನ್ನತ ಶಿಕ್ಷಣ ವಿಚಾರ ಸಂಕಿರಣ, ವೀಸಾ ಮಾಹಿತಿ, ಪ್ರವಾಸಿ ಕೇಂದ್ರ, ವ್ಯಾಪಾರ ಹೂಡಿಕೆಗೆ ಅವಕಾಶ, ಆಸ್ಕರ್ ವಿಜೇತ ಸಿನಿಮಾ ವೀಕ್ಷಣೆ ಇತ್ಯಾದಿ ಕಾರ್ಯಕ್ರಮ ನಡೆಯಲಿದೆ. ಮಾ.1ರಂದು ಬೆಳಗ್ಗೆ 9.30ಕ್ಕೆ ನಗರದ ಅಲೋಶಿಯಸ್ ಕಾಲೇಜಿನಲ್ಲಿ 'ಅಮೆರಿಕಾ ಅನುಭವ' ಕಾರ್ಯಕ್ರಮ ನಡೆಯಲಿದ್ದು, 2ರಂದು ಬೆಳಗ್ಗೆ 11ಕ್ಕೆ ಸಿಟಿ ಸೆಂಟರ್ ಮಾಲ್ನಲ್ಲಿ ರಸಪ್ರಶ್ನೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಮಂಗಳೂರು: ಕದ್ರಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಸಂಸ್ಥೆಯಲ್ಲಿ 6 ತಿಂಗಳ ಅವಧಿಯ ಡ್ರೈವರ್ ಕಮ್ ಮ್ಯೆಕಾನಿಕ್ ಮತ್ತು ಮ್ಯೆಕಾನಿಕ್ ಆಟೋ ಎಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ವೃತ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯು ಅರ್ಹತೆ ಮತ್ತು ಮೀಸಲಾತಿ ಆಧಾರದಲ್ಲಿ ಪ್ರವೇಶ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ಮೂಲಕ ಸಂಸ್ಥೆ ನಡೆಸುತ್ತದೆ. ಎಸ್ಎಸ್ಎಲ್ಸಿ ಉತ್ತೀರ್ಣಗೊಂಡ ಅಭ್ಯರ್ಥಿಗಳು 20 ಶುಲ್ಕದೊಂದಿಗೆ ಅರ್ಜಿಯನ್ನು ಸಂಸ್ಥೆಯಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ಫೆ. 28 ರಂದು ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ 0824-2211285ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.