2013-14 ಬಜೆಟ್ ಮಾತು
ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ಸಾಲದು, ಬೆಳೆ ಸಾಲ ಕ್ಲಪ್ತ ಸಮಯಕ್ಕೆ ಮರುಪಾವತಿಸಿದರೆ ಶೇ.4 ಬಡ್ಡಿದರ ರಿಯಾಯ್ತಿ ಮಾತ್ರ. ಇದೇ ದರವನ್ನು ಖಾಸಗಿ ಬ್ಯಾಂಕ್‌ಗಳಿಗೆ ವಿಸ್ತರಿಸಿದ್ದು ಸ್ವಾಗತಾರ್ಹ.
ಟಿ ಡಾ. ವಿಘ್ನೇಶ್ವರ ಮರ್ಮುಡಿ,
ಆರ್ಥಿಕ ತಜ್ಞ
ಮೀನುಗಾರಿಕೆಗೆ ಸಂಬಂಧಿಸಿ ಯಾವುದೇ ಬೇಡಿಕೆಯನ್ನು ಕೇಂದ್ರ ಬಜೆಟ್‌ನಲ್ಲಿ ಈಡೇರಿಸಿಲ್ಲ. ಆದ್ದರಿಂದ ಮಾ.4ರಿಂದ 8ರ ವರೆಗೆ ದೆಹಲಿ ಸಂಸತ್ ಎದುರು ಹಗಲು ರಾತ್ರಿ ಧರಣಿ ನಡೆಸುತ್ತೇವೆ.
ಟಿ ವಾಸುದೇವ ಬೋಳೂರು, ರಾಷ್ಟ್ರೀಯ ಮೀನುಗಾರಿಕಾ ವೇದಿಕೆ ಉಪಾಧ್ಯಕ್ಷ
ಚುನಾವಣೆ ಹತ್ತಿರಬರುತ್ತಿರುವುದರಿಂದ ಬಜೆಟ್ ಬಗ್ಗೆ ಹೆದರಿಕೆ ಇತ್ತು. ಈಗ ಪ್ರಗತಿದಾಯಕ, ಧನಾತ್ಮಕ ಬಜೆಟ್‌ನ್ನು ಮಂಡಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
ಟಿ ಮಹಮ್ಮದ್ ಅಮೀನ್, ಕೆನರಾ ಚೇಂಬರ್ ಅಧ್ಯಕ್ಷ ಮಂಗಳೂರು
ಮಹಿಳೆಯರಿಗಾಗಿಯೇ ಬ್ಯಾಂಕ್ ಮಾಡುವ ವಿಚಾರ ಒಳ್ಳೆಯದೇ, ಮಹಿಳೆಯರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಮತ್ತು ಠೇವಣಿಗೆ ಹೆಚ್ಚಿನ ಬಡ್ಡಿದರ ಸಿಗಬೇಕು.
ಟಿ ವೀಣಾ ನಾಯಕ್,
ನ್ಯಾಯವಾದಿ ಮಂಗಳೂರು
ಒಳ್ಳೆ ಬಜೆಟ್. ಕೆಲವೊಂದು ವಿಶೇಷಗಳಿವೆ. ಭವಿಷ್ಯದ ಭದ್ರತೆ ಬಗ್ಗೆ ಹಳ್ಳಿ ಪ್ರದೇಶದವರಿಗೆ ಅರಿವಿನ ಕೊರತೆ ಇದೆ. ಗ್ರಾಮೀಣ ಜನರಿಗೆ ಎಲ್‌ಐಸಿ ಉಪಯೋಗ ಮುಟ್ಟಿಸುವ ಕೇಂದ್ರದ ಕೆಲಸ ಮೆಚ್ಚತಕ್ಕದ್ದು.
ಟಿ ರಾಘವೇಂದ್ರ ಉಪಾಧ್ಯಾಯ ರೆಂಜಾಳ, ಎಲ್‌ಐಸಿ ಪ್ರತಿನಿಧಿ, ಮಂಗಳೂರು
ಆದಾಯ ತೆರಿಗೆ ಮಿತಿ ಹೆಚ್ಚಿಸುವ ಅಗತ್ಯವಿತ್ತು. ಸಬ್ಸಿಡಿಯ ನೇರ ವಿತರಣೆ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಹೆಚ್ಚಿನ ಪರಿಣಾಮಕಾರಿಯಾಗಿದ್ದು ಆದರೆ ಪ್ರಗತಿ ಕುಂಠಿತಗೊಳ್ಳಲಿದೆ.
ಟಿ ಕೆ.ಆರ್. ಶಂಕರ್,
ಅರ್ಥಶಾಸ್ತ್ರಜ್ಞ.
ಪ್ರಸ್ತುತ ಬಜೆಟ್‌ನಲ್ಲಿ ಯುವ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಯ ನಿರೀಕ್ಷೆ ಇತ್ತು. ಆದರೆ ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಸ್ಪಷ್ಟ ಯೋಜನೆ ಮಂಡನೆಯಾಗಿಲ್ಲ.
ಟಿ ಸುನಿಲ್ ಹೆಗಡೆ, ಪ್ರಾಧ್ಯಾಪಕ, ಎಸ್‌ಡಿಎಂ ಕಾಲೇಜು, ಉಜಿರೆ
ಹೆಚ್ಚಿನ ಯೋಜನೆಗಳಿಲ್ಲದ ಯಥಾಸ್ಥಿತಿಯ ಬಜೆಟ್. ಆದರೆ ಕರ್ನಾಟಕಕ್ಕೆ ಮಾತ್ರ ಕೆಲವು ಪ್ರಯೋಜನಗಳಾಗಿದೆ. ಗ್ರಾಮಾಂತರ ರಸ್ತೆಗಳಿಗೆ ಆದ್ಯತೆ ನೀಡಿರುವುದು ಉತ್ತಮ ಯೋಜನೆ.
ಟಿ ಯು.ಲೋಕೇಶ್ ಹೆಗ್ಡೆ, ಮಾಜಿ ಅಧ್ಯಕ್ಷ, ವರ್ತಕರ ಸಂಘ, ಪುತ್ತೂರು
ಪ್ರಗತಿಪರ, ವಿತ್ತೀಯ ಕೊರತೆ ನೀಗಿಸುವ, ಹಣದುಬ್ಬರ ಕಡಿಮೆ ಮಾಡುವ ಬಜೆಟ್ ಇದು. ಮನೆ ಸಾಲದ ಮೇಲಿನ ತೆರಿಗೆ ಕೈಬಿಟ್ಟಿರುವುದರಿಂದ ಭೂವ್ಯವಹಾರ ಕ್ಷೇತ್ರಕ್ಕೆ ಮತ್ತೆ ಜೀವ ತುಂಬಲಿದೆ.
ಟಿ ಪಿ.ಲಕ್ಷ್ಮಣ ಆರ್. ಶೆಣೈ, ನ್ಯಾಯವಾದಿ, ಉಡುಪಿ
ಬೇಡಿಕೆ-ನಿರೀಕ್ಷೆ ಇದ್ದರೂ ಅಂಗನವಾಡಿ ನೌಕರರ ಗೌರವಧನ ಹೆಚ್ಚಿಸದಿರುವುದು ನಿರಾಶಾದಾಯಕವಾಗಿದೆ, ಮಕ್ಕಳ ಪೌಷ್ಟಿಕ ಆಹಾರದ ಕೊರತೆ ನೀಗಿಸಲು ರು. 300 ಕೋಟಿ ನಿಗದಿ ಸ್ವಾಗತಾರ್ಹ.
ಟಿ ಎಸ್. ಎಸ್. ತೋನ್ಸೆ, ಅಂಗನವಾಡಿ ನೌಕರರ ಸಂಘದ ಸಲಹೆಗಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

