ಎಚ್ಐವಿ ಸೋಂಕಿತರ ನೆರವಿಗೆ ಹಳ್ಳಿಗಳಲ್ಲಿ ರೆಡ್ ರಿಬ್ಬನ್ ಕ್ಲಬ್
ಮಂಗಳೂರು: ಏಡ್ಸ್ ಕುರಿತು ಪ್ರತಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಸ್ತ್ರೀಶಕ್ತಿ ಗುಂಪು ಸದಸ್ಯರ ರೆಡ್ ರಿಬ್ಬನ್ ಕ್ಲಬ್ ರಚಿಸುವ ಮಾದರಿ ಕೆಲಸಕ್ಕೆ ಜಿಲ್ಲಾ ಪಂಚಾಯ್ತಿ ಮುಂದಾಗಿದೆ.
ಜಿಲ್ಲಾ ಪಂಚಾಯ್ತಿ ವಿಶೇಷ ಮುತುವರ್ಜಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸ್ತ್ರೀಶಕ್ತಿ ಗುಂಪು ಸದಸ್ಯೆಯರಿಂದ ಜನರಿಗೆ ಎಡ್ಸ್ ಕುರಿತ ಮಾಹಿತಿ ನೀಡುವ ರೆಡ್ ರಿಬ್ಬನ್ ಕ್ಲಬ್ ಆರಂಭವಾಗಿದೆ.
'ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರು ಗ್ರಾಮಾಂತರದಲ್ಲಿ ಕ್ಲಬ್ ರಚನೆ ಪ್ರಕ್ರಿಯೆ ಆರಂಭಿಸಲಾಗಿದೆ. ಉಳಿದೆಡೆ ಶೀಘ್ರ ಆರಂಭವಾಗಲಿದೆ. ಕಾರ್ಮಿಕ ಇಲಾಖೆ ಮೂಲಕ ಬೀಡಿ ಕಾರ್ಖಾನೆ, ಮರದ ಕಾರ್ಖಾನೆಗಳ ಕಾರ್ಮಿಕರಿಗೆ ಮಾಹಿತಿ ಮತ್ತು ಜಾಗೃತಿ ಕೆಲಸ ನಡೆಯುತ್ತಿದೆ' ಎಂದು ಸಿಇಒ ಡಾ.ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.
ಎಚ್ಐವಿ ಸೋಂಕಿತ ಮಹಿಳೆಗೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ಎನ್. ವಿಜಯಪ್ರಕಾಶ್ ಹಸ್ತಲಾಘವ ನೀಡುವ ಮೂಲಕ ವಿಶಿಷ್ಟವಾಗಿ ಜಾಗೃತಿ ನೀಡುವ ಕೆಲಸಕ್ಕೆ ಚಾಲನೆ ನೀಡಿದ್ದರು. ಎಚ್ಐವಿ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡುವ ಮನೋಭಾವ ಬದಲಿಸಿಕೊಳ್ಳಬೇಕು ಎಂಬುದು ಇದರ ಉದ್ದೇಶವಾಗಿತ್ತು.
ಜಿಲ್ಲಾ ಪಂಚಾಯ್ತಿ ಎಚ್ಐವಿ ಸೋಂಕಿತರಿಗೆ ಆದ್ಯತೆ ಮೇರೆಗೆ ಸೌಲಭ್ಯ ನೀಡುತ್ತಿದೆ. ಪ್ರಚಾರ ಮತ್ತು ಜಾಗೃತಿ ಮೂಲಕ ಫಲಾನುಭವಿಯನ್ನು ಮುಟ್ಟಬೇಕು. ಈ ಕಾರಣಕ್ಕೆ ರೆಡ್ರಿಬ್ಬನ್ ಕ್ಲಬ್ ಮಾಡಲಾಗುತ್ತಿದೆ ಎನ್ನುತ್ತಾರೆ ಸಿಇಒ.
ಕಾಲೇಜಲ್ಲೂ ರೆಡ್ ರಿಬ್ಬನ್: ರಾಜ್ಯದ ಎಲ್ಲ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಇದೆ. ಎನ್ನೆಸ್ಸೆಸ್ ಮೂಲಕ 25 ವಿದ್ಯಾರ್ಥಿಗಳನ್ನು ಆಯ್ದು ಅವರಿಗೆ ತರಬೇತಿ ನೀಡುತ್ತೇವೆ. ಈ ಗುಂಪು ಎಚ್ಐವಿ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ.
ಪ್ರೌಢಶಾಲೆ ಮಕ್ಕಳಲ್ಲಿಯೂ ಸರ್ವ ಶಿಕ್ಷಣ ಅಭಿಯಾನದಡಿ ಹದಿಹರೆಯದ ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿಯೂ ಎಚ್ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಕಿಶೋರ್ ಕುಮಾರ್ ಹೇಳುತ್ತಾರೆ.
100 ಹಳ್ಳಿಯಲ್ಲಿ ಎನ್ಜಿಒ
ಕೂರ್ ಸ್ವಯಂ ಸೇವ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ 100 ಹಳ್ಳಿಗಳಲ್ಲಿ ಎಚ್ಐವಿ ಸೋಂಕು ತಡೆ ಕಾರ್ಯಕ್ರಮ ಮಾಡುತ್ತಿದೆ. ಇದರ ಉಸ್ತುವಾರಿ ಪೃಥ್ವಿಪಾಲ್ ಅದರ ವಿವರ ನೀಡಿದ್ದಾರೆ. ಎಲ್ಲ ಹಳ್ಳಿಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಸ್ಥಳೀಯರ ನೇತೃತ್ವದಲ್ಲಿ ಮಾಡುತ್ತಿದ್ದೇವೆ. ಎಚ್ಐವಿ ಸೋಂಕಿತರಿಗೆ ಕಳಂಕ, ತಾರತಮ್ಯ ಆಗಬಾರದು ಸರಿಯಾದ ಚಿಕಿತ್ಸೆ ಲಭಿಸಬೇಕು ಎನ್ನುವುದು ಇದರ ಉದ್ದೇಶ.
ಮಹಿಳೆ ಮತ್ತು ಗಂಡಸು ಲೈಂಗಿಕ ಕಾರ್ಯಕರ್ತರಿಗೆ ಎಚ್ಐವಿ ಸೋಂಕು ಕುರಿತ ಜಾಗೃತಿ ರಕ್ತ ಪರೀಕ್ಷೆ, ಆರೋಗ್ಯ ಶಿಬಿರ ನಡೆಸುತ್ತಿದ್ದೇವೆ. ಎಚ್ಐವಿ ಸೋಂಕಿತರ ಬಗ್ಗೆ ಭಾವನೆ ಬದಲಾಗುತ್ತಿದೆ. ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿಯೂ ಈಗ ಸೌಲಭ್ಯ ಮಾಹಿತಿ ನೀಡುತ್ತಿದ್ದಾರೆ ಎನ್ನುತ್ತಾರೆ ಕೂರ್ ಪ್ರತಿನಿಧಿ ಪೃಥ್ವಿಪಾಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

