ದಕ್ಷಿಣ ಕನ್ನಡ

ಶಿಂಧೆಗೆ ತುರ್ತು ಚಿಕಿತ್ಸೆ ಅಗತ್ಯ: ಫ್ರಾಂಕ್ಲಿನ್ ವ್ಯಂಗ್ಯ

Published On :

ಮಂಗಳೂರು: 'ಆರ್‌ಎಸ್‌ಎಸ್, ಸಂಘಪರಿವಾರ ಸಂಘಟನೆಗಳನ್ನು ಕೇಸರಿ ಭಯೋತ್ಪಾದನೆಯ ಪ್ರಾಯೋಜಕರು' ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಶಿಂಧೆ ಇಡೀ ತಾಯ್ನಾಡನ್ನು ಅವಮಾನಿಸಿದ್ದಾರೆ. ಕೇಂದ್ರ ಗೃಹ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ. ತನ್ನ ಅಧಿನಾಯಕಿ ಸೋನಿಯಾ ಓಲೈಸಲು ಓಟ್‌ಬ್ಯಾಂಕ್‌ಗಾಗಿ ತುಷ್ಟೀಕರಣದ ಈ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೋ ಹೇಳಿದ್ದಾರೆ.
 ಸಂಘಪರಿವಾರ, ಬಿಜೆಪಿಯನ್ನು ಉಗ್ರ ಸಂಘಟನೆಗಳಿಗೆ ಹೋಲಿಸಿದ ಶಿಂಧೆಯ ವರ್ತನೆ 'ಪೂರ್ಣ ಹುಣ್ಣಿಮೆಯ ಚಂದಿರನ ನೆರಳನ್ನು ಕಂಡು ಭಯದಿಂದ ಬೊಗಳಿದ ನಾಯಿಯ ವರ್ತನೆಯಂತಾಗಿದೆ' ಎಂದು ಫ್ರಾಂಕ್ಲಿನ್ ಲೇವಡಿ ಮಾಡಿದ್ದಾರೆ.  ಶಿಂಧೆಯ ಕಣ್ಣಿಗೆ ಇವರೆಲ್ಲ ಭಯೋತ್ಪಾದಕರಾಗಿ ಕಂಡಿದ್ದು, ಅವರಿಗೆ ಕಾಮಾಲೆ ರೋಗ ಹಿಡಿದಿರುವ ದ್ಯೋತಕ. ಇಂಥವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ಕುಹಕವಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.