ಮಗನಿಂದ ಯಾಕೆ ಯಡಿಯೂರಪ್ಪ ರಾಜಿನಾಮೆ ಕೊಡಿಸಿಲ್ಲ?
ಸುಳ್ಯ: ಯಡಿಯೂರಪ್ಪ ಬಹಳ ಬುದ್ಧಿವಂತರು. ತಮ್ಮೊಂದಿಗಿರುವ ಅಮಾಯಕ 13 ಮಂದಿಯಿಂದ ರಾಜಿನಾಮೆ ಕೊಡಿಸಿದ್ದಾರೆ. ಆದರೆ ಅವರ ಮಗ ರಾಘವೇಂದ್ರ ಅವರಿಂದ ಯಾಕೆ ರಾಜಿನಾಮೆ ಕೊಡಿಸಿಲ್ಲ?
ಹೀಗಂತ ಪ್ರಶ್ನಿಸಿದವರು ಉಪಮುಖ್ಯಮಂತಿ ಕೆ.ಎಸ್. ಈಶ್ವರಪ್ಪ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸದೆ ಯಡಿಯೂರಪ್ಪ ಜತೆಗೆ ಹೋಗಿದ್ದಾರೆ. ಕಾಂಗ್ರೆಸ್ನ ಬ್ಲ್ಯಾಕ್ಮೇಲ್ ತಂತ್ರಕ್ಕೆ ಯಡಿಯೂರಪ್ಪ ಬಲಿಯಾಗಿದ್ದಾರೆ. ಅವರು ಸಿಬಿಐ ಕುಣಿಕೆಯಲ್ಲಿ ಸಿಲಿಕುತ್ತೇನೆಂಬ ಹೆದರಿಕೆಯಿಂದ ಕಾಂಗ್ರೆಸ್ ಜತೆ ಸೇರಿದ್ದಾರೆ, ಮುಂದೆ ಅನುಭವಿಸುತ್ತಾರೆ ಎಂದು ಕುಟುಕಿದರು.
ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದಾಗಲೇ ಹಲವು ಮಠಾಧೀಶರು ನೊಂದಿದ್ದರು. ಜಗದೀಶ್ ಶೆಟ್ಟರನ್ನು ಸಿಎಂ ಪದವಿಯಿಂದ ಇಳಿಸಿದರೆ ಎಲ್ಲ ಮಠಾಧೀಶರಿಗೂ ನೋವಾಗುತ್ತದೆ ಎನ್ನುವುದನ್ನು ಅವರು ಅರಿತುಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದರು.
ಚುನಾವಣೆ ಸುಳಿವು: ಬಿಜೆಪಿ ಸರ್ಕಾರ ಪೂರ್ಣಾವಧಿ ಇರುತ್ತದೆ. ಅದರೆ ಕಾಂಗ್ರೆಸ್ನವರ ಕುತಂತ್ರದಿಂದ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ಜನ ನಮಗೆ ಆಶೀರ್ವಾದ ಮಾಡುತ್ತಾರೆ. ನಮಗೆ ಪೂರ್ಣ ಬಹುಮತ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸ್ಪೀಕರ್ ಸ್ಥಾನ ಪವಿತ್ರವಾದುದು. ಆ ಸ್ಥಾನದ ಬಗ್ಗೆ ಹಗುರ ಮಾತು ಬೇಡ. ಅವರ ಜವಾಬ್ದಾರಿ ಅವರಿಗೆ ಸರಿಯಾಗಿ ಗೊತ್ತಿದೆ. ಹಾಗಾಗಿ ಅವರ ಬಗ್ಗೆ ಏನೂ ಮಾತನಾಡಲ್ಲ ಎಂದ ಈಶ್ವರಪ್ಪ, ಸರ್ಕಾರ ಬಜೆಟ್ ಮಂಡನೆ ಮಾಡುವುದು ನಿಶ್ಚಿತ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

