ದಕ್ಷಿಣ ಕನ್ನಡ

ಬೆಂಗಳೂರಿಂದ ತಪ್ಪಿಸಿಕೊಂಡು ಬಂದ ಬಾಲಕಿಯರು ಹೆತ್ತವರ ವಶಕ್ಕೆ

Published On :

ಉಪ್ಪಿನಂಗಡಿ/ಪುತ್ತೂರು: ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದು ಪುತ್ತೂರಿನಲ್ಲಿದ್ದ ನಾಲ್ವರು ವಿದ್ಯಾರ್ಥಿನಿಯರನ್ನು ಪುತ್ತೂರು ಪೊಲೀಸರು ಅವರ ಹೆತ್ತವರಿಗೊಪ್ಪಿಸಿದ್ದಾರೆ.
 10ನೇ ತರಗತಿಯ ವಿದ್ಯಾರ್ಥಿನಿಯರಾದ ನಿಶಾ, ಗೌತಮಿ, ರಮ್ಯ ಹಾಗೂ ಖುಶಿ ಎಂಬವರು ಜ.22ರಂದು ತಮ್ಮ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದರು. ಬೆಂಗಳೂರಿನಿಂದ ಮಡಿಕೇರಿಗೆ ಬಂದಿದ್ದ ಅವರು, ಜ.23ರಂದು ಬೆಳಗ್ಗೆ ಧರ್ಮಸ್ಥಳಕ್ಕೆ ತೆರಳಲೆಂದು ಉಪ್ಪಿನಂಗಡಿಯಲ್ಲಿ ಇಳಿದು ಅಲ್ಲಿಂದ ಮುಗೇರಡ್ಕಕ್ಕೆ ಹೋಗುವ ಜೀಪಿನಲ್ಲಿ ಬಂದಿದ್ದರು.
 ಈ ವೇಳೆ ಜೀಪಿನ ಚಾಲಕನಲ್ಲಿ, ತಮಗೆ ಇಲ್ಲಿ ಕೆಲಸ ಕೊಡುವಂತೆ ಹಾಗೂ ರಾತ್ರಿ ತಂಗಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರೆನ್ನಲಾಗಿದೆ. ಇದರಿಂದ ಸಂಶಯ ತಾಳಿದ ಜೀಪು ಚಾಲಕ ಈ ವಿಷಯವನ್ನು ಜಿ.ಪಂ. ಸದಸ್ಯ ಕೇಶವ ಗೌಡ ಬಜತ್ತೂರು ಎಂಬವರಲ್ಲಿ ತಿಳಿಸಿದ್ದು, ಕೇಶವ ಗೌಡ ಬಜತ್ತೂರು ಅವರು ಬಂದು ವಿಚಾರಿಸಿದಾಗ ತಾವು ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು,  ಮನೆಯಲ್ಲಿ ಹಾಗೂ ಪೊಲೀಸರಲ್ಲಿ ಈ ವಿಷಯವನ್ನು ತಿಳಿಸದಂತೆ ಬಾಲಕಿಯರು ಮನವಿ ಮಾಡಿಕೊಂಡರೆನ್ನಲಾಗಿದೆ. ಅಲ್ಲದೇ, ಬಾಲಕಿಯರು ತಾವು ಬೆಂಗಳೂರಿನ ನಾಯಂಡ ಹಳ್ಳಿಯ ನಿವಾಸಿಗಳೆಂದು ತಿಳಿಸಿದ್ದರೆನ್ನಲಾಗಿದೆ.
 ಬಳಿಕ ಕೇಶವ ಗೌಡ ಬಜತ್ತೂರು ಅವರನ್ನು ಇವರನ್ನು ಪುತ್ತೂರಿನ ವೈದ್ಯ ಡಾ. ಪ್ರಸಾದ್ ಭಂಡಾರಿಯವರ ಆಸ್ಪತ್ರೆಗೆ ಕರೆ ತಂದು ಬಿಟ್ಟಿದ್ದು, ರಾತ್ರಿ ತಂಗಲು ಆದರ್ಶ ಆಸ್ಪತ್ರೆಯಲ್ಲಿ ಆಶ್ರಯ ನೀಡಿದರೆನ್ನಲಾಗಿದೆ. ತಪ್ಪಿಸಿಕೊಂಡಿರುವ ನಿಶಾ, ಗೌತಮಿ ಹಾಗೂ ರಮ್ಯಾ ಬೆಂಗಳೂರಿನ ಒಂದೇ ಶಾಲೆಯ ವಿದ್ಯಾರ್ಥಿನಿಯರಾಗಿದ್ದು, ಖುಶಿ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದಳೆನ್ನಲಾಗಿದೆ. ಗುರುವಾರ ಈ ಬಾಲಕಿಯರನ್ನು ಪುತ್ತೂರು ನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪೊಲೀಸರು ನಾಲ್ವರು ಬಾಲಕಿಯರ ಹೆತ್ತವರನ್ನು ಕರೆಸಿ ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.