ಶಿಂಧೆ ಹೇಳಿಕೆ: ಮಂಗಳೂರು, ಉಡುಪಿಯಲ್ಲಿ ಪ್ರತಿಭಟನೆ
ಮಂಗಳೂರು: ಕಾಂಗ್ರೆಸ್ ಭಯೋತ್ಪಾದಕ ಪಕ್ಷ, ಆರ್ಎಸ್ಎಸ್ ದೇಶಭಕ್ತ ಸಂಘಟನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಶಿಂಧೆಗೆ ತಲೆ ಸರಿ ಇಲ್ಲ, ಸೋನಿಯಾ ಗಾಂಧಿ ಮೆಚ್ಚಿಸಲು ಆಲೋಚನೆ ಮಾಡದೆ ಏನೇನು ಹೇಳುವ ಮೂಲಕ ಹಿಂದೂ ಸಮುದಾಯಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುತ್ತಿದ್ದಾರೆ ಎಂದರು.
ಕಂಚಿಶ್ರೀ, ಬಾಬಾ ರಾಮ್ ದೇವ್, ಬಿಹಾರ ಸ್ವಾಮೀಜಿ ಮೊದಲಾದ ಹಿಂದೂ ನಾಯಕರ ಗೌರವ ಹಣಿಯಲು ಯತ್ನಿಸುತ್ತಿದೆ. ತಿರುಪತಿಯನ್ನು ಚರ್ಚ್ ಮಾಡುತ್ತಿದೆ. ಶಬರಿಮಲೆಯನ್ನು ಅವ್ಯವಸ್ಥೆ ಗೂಡು ಮಾಡುತ್ತಿದೆ. ಗೋಡ್ಸೆ ಗಾಂಧಿಯನ್ನು ಕೊಂದಾಗ ಆರ್ಎಸ್ಎಸ್ ಬ್ಯಾನ್ ಮಾಡಲು ಕಾಂಗ್ರೆಸ್ ಪ್ರಯತ್ನಿಸಿತು. ಆದರೆ ಆರ್ಎಸ್ಎಸ್ ದೇಶಭಕ್ತ ಸಂಘಟನೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ಆರ್ಎಸ್ಎಸ್ 33 ಸಾವಿರ ಶಾಲೆಗಳನ್ನು ತೆರೆದಿದೆ. ಭಾರತ ಚೀನಾ ಯುದ್ಧ ವೇಳೆ ಸೈನಿಕರಿಗೆ ಆರ್ಎಸ್ಎಸ್ ನೆರವು ನೀಡಿದೆ ಎಂದರು. ಕಾಂಗ್ರೆಸ್ ಭಯೋತ್ಪಾಕ ಪಕ್ಷ, ಶಿಂಧೆಗೆ ಒಸಾಮ ಬಿನ್ ಲಾದೆನ್ ಸಂಘಟನೆ ಜತೆ ನಂಟಿದೆ. ಖಾಲಿಸ್ತಾನ್ ಕಾರ್ಯಾಚರಣೆ ಹೆಸರಲ್ಲಿ ಇಂದಿರಾ ಗಾಂಧಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದರು. ಕಾಂಗ್ರೆಸ್ ದಾವೂದ್ ಇಬ್ರಾಹಿಂಗೆ ಬೆಂಬಲ ನೀಡುತ್ತಿದೆ. ಅಪ್ಝಲ್ ಗುರುವಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದರೂ ಇವರು ಜಾರಿ ಮಾಡುತ್ತಿಲ್ಲ. ಶಿಂಧೆ ಪ್ರಧಾನ ಮಂತ್ರಿ ಹುದ್ದೆಗೆ ಕಣ್ಣಿಟ್ಟು ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಇದನ್ನು ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕ್ಯಾ.ಗಣೇಶ್ ಕಾರ್ಣಿಕ್, ಶ್ರೀಕರ ಪ್ರಭು, ನಿತಿನ್ ಕುಮಾರ್, ಅಮಿತಕಲಾ, ರುಕ್ಮಯ ಪೂಜಾರಿ, ಚಂದ್ರಹಾಸ ಉಚ್ಚಿಲ್, ಉಮಾನಾಥ ಕೋಟ್ಯಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

