ದಕ್ಷಿಣ ಕನ್ನಡ

ಲಕ್ಷದ್ವೀಪದಲ್ಲಿ ಮುಳುಗಿದ ಸರಕು ನೌಕೆ, ಐವರು ಪಾರು

Published On :

ಮಂಗಳೂರು: ಲಕ್ಷದ್ವೀಪದಲ್ಲಿ ಮಂಗಳೂರಿನ ಸರಕು ನೌಕೆ ಮುಳುಗಿದ್ದು, ಅದರಲ್ಲಿದ್ದ ಐದು ಮಂದಿಯನ್ನು ರಕ್ಷಿಸಲಾಗಿದೆ.
 ಲಕ್ಷದ್ವೀಪದಿಂದ 12 ನಾಟಿಕಲ್ ಮೈಲ್ ದೂರದ ಕಿಲ್ಟನ್ ದ್ವೀಪದಲ್ಲಿ ಸರಕು ಇಳಿಸಿ ಮಂಗಳೂರಿಗೆ ವಾಪಾಸಾಗುತ್ತಿದ್ದ ಮಥಿನ್ ಹೆಸರಿನ ನೌಕೆಯೊಳಗೆ ಶನಿವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಹಠಾತ್ತನೆ ನೀರು ನುಗ್ಗಿತ್ತು. ತಕ್ಷಣ ನೌಕೆಯ ಕ್ಯಾಪ್ಟನ್ ಕೃಷ್ಣಾಪುರದ ಅಬ್ದುಲ್ ರಹಿಮಾನ್ ಅವರು ಲಕ್ಷದ್ವೀಪ ಬಂದರಿಗೆ ತುರ್ತು ನೆರವಿನ ಸಂದೇಶ ಕಳುಹಿಸಿದರು. ಅಲ್ಲಿಂದ ಅಲ್ ಮತುರತ್ ಮತ್ತು ಇನ್ನೊಂದು ಹಡಗು ಧಾವಿಸಿ ಮುಳುಗುತ್ತಿದ್ದ ಐವರನ್ನು ರಕ್ಷಣೆ ಮಾಡಿತು.
ಅಬ್ದುಲ್ ರಹಿಮಾನ್(48) ಅಲ್ಲದೆ, ಹುಸೇನ್(44), ಮಹಮ್ಮದ್(25), ಸುಲ್ತಾನ್(26) ಮತ್ತು ಸಲೀಂ(35) ಪ್ರಾಣಾಪಾಯದಿಂದ ಪಾರಾದವರು. ಇವರೆಲ್ಲ ಗುಜರಾತ್‌ನವರು. ಜ.21ರಂದು ಬೆಂಗ್ರೆಯ ಅಬ್ದುಲ್ ಅಜೀಜ್‌ಗೆ ಸೇರಿದ ಈ ನೌಕೆ ಜಲ್ಲಿ ಮತ್ತು ಸಿಮೆಂಟ್ ಹೇರಿಕೊಂಡು ಲಕ್ಷದ್ವೀಪಕ್ಕೆ ತೆರಳಿತ್ತು. ನೌಕೆ ಮುಳುಗಿ ಸುಮಾರು ರು. 35 ಲಕ್ಷ ನಷ್ಟ ಅಂದಾಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.