ವೆನ್ಲಾಕ್ಗೆ ಕುದ್ಮಲ್ ರಂಗರಾವ್, ಲೇಡಿಗೋಷನ್ಗೆ ಅಬ್ಬಕ್ಕ ಹೆಸರು
ಮಂಗಳೂರು: ಮಹಾತ್ಮಾಗಾಂಧಿಗೆ ದಲಿತೋದ್ಧಾರದ ಪ್ರೇರಣೆ ನೀಡಿದ ದ.ಕ.ಜಿಲ್ಲೆಯ ಕುದ್ಮಲ್ ರಂಗರಾವ್ ಹೆಸರನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಹಾಗೂ ವೀರರಾಣಿ ಅಬ್ಬಕ್ಕ ಹೆಸರನ್ನು ಲೇಡಿಗೋಷನ್ ಆಸ್ಪತ್ರೆಗೆ ಇಡುವಂತೆ ಶನಿವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಉಪಸಭಾಪತಿ ಯೋಗೀಶ್ ಭಟ್ ಪ್ರಸ್ತಾಪಿಸಿದ್ದು, ವಿ.ಪ.ಸದಸ್ಯ ಮೋನಪ್ಪ ಭಂಡಾರಿ ಅನುಮೋದಿಸಿದರು. .ಸಚಿವ ಸಿ.ಟಿ. ರವಿ ಈ ಕುರಿತು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಪ್ರಕಾಶ್, ಜಿಡಾ.ವಿಜಯ ಪ್ರಕಾಶ್, ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಡಾ.ವೆಂಕಟೇಶ್, ನಿತಿನ್ ಕುಮಾರ್, ಡಾ. ಸರೋಜ, ಡಾ.ಶಕುಂತಳಾ, ಆರ್ಎಂಒ ಡಾ.ಈರಪ್ಪ, ಡಾ.ಶ್ರೀರಂಗಪ್ಪ ಇದ್ದರು.
ತೆಕ್ಕಿಲ ಪ್ರತಿಷ್ಠಾನದ ದಶಮಾನೋತ್ಸವ
ಸುಳ್ಯ: ಅರಂತೋಡಿನ ತೆಕ್ಕಿಲ ಪ್ರತಿಷ್ಠಾನದ ದಶಮಾನೋತ್ಸವ ಜ.29 ಹಾಗೂ 30ರಂದು ನಡೆಯಲಿದೆ. ಎಸ್.ಆರ್. ಪಾಟೀಲ್, ವೀರಣ್ಣ ಮತ್ತಿಕಟ್ಟಿ ಕುಮಾರ ಬಂಗಾರಪ್ಪ, ಎಚ್.ಜಿ. ವಿಶ್ವನಾಥ್, ನಳಿನ್ ಕುಮಾರ್ ಕಟೀಲ್, ಎಸ್. ಅಂಗಾರ, ಮಂಜುನಾಥ ಭಂಡಾರಿ, ಯೆನೆಪೋಯಾ ಅಬ್ದುಲ್ಲ ಕುಂಞ ವಭಾಗವಹಿಸಲಿದ್ದಾರೆ. ಜ.29 ಮತ್ತು 30ರಂದು ನೌಶಾದ್ ಶಾಖವಿಯವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

